ತೀರ್ಥಹಳ್ಳಿ:   ‘ಸಾವಯವ ಎನ್ನುವುದು ಜೀವನ ಧರ್ಮ. ಇದು ಪ್ರಕೃತಿ ಧರ್ಮವೂ ಹೌದು. ಈ ಧರ್ಮದಲ್ಲಿ ಜೀವನ ನಡೆಸಿದವರು ಕೃಷಿಋಷಿಗಳಾದರು. ತೀರ್ಥಹಳ್ಳಿಯ ಪುರುಷೋತ್ತಮರಾಯರು ಅಂತಹ ಒಬ್ಬರು ’ಕೃಷಿಋಷಿ’. ಅವರಂತೆಯೇ ನಮ್ಮ ಸಮಾಜದಲ್ಲಿ ಬದುಕುತ್ತಿರುವ ಸಾಧಕರು ಅನೇಕರಿದ್ದಾರೆ. ಪುರುಷೋತ್ತಮರಾಯರ ನೆನಪಿನಲ್ಲಿ ಸಮಾಜದಲ್ಲಿ ನಮಗೆ ಬೆಳಕು ನೀಡುತ್ತಿರುವ ಇಂತಹ ಕೃಷಿ ಸಾಧಕ ಕುಟುಂಬಕ್ಕೆ ಸನ್ಮಾನ ಮಾಡುವ ಈ ಕಾರ್ಯಕ್ರಮವೇ ನಮ್ಮ ಪರಂಪರೆಯ ಪ್ರತೀಕ. ನಮ್ಮಲ್ಲಿ ವ್ಯಷ್ಟಿಗಿಂತ ಸಮಷ್ಟಿ ದೊಡ್ಡದು. ವ್ಯಕ್ತಿಗಿಂತ ಕುಟುಂಬ ದೊಡ್ಡದು. […]