ದೇಶದ್ರೋಹಿ, ಮತಾಂಧ ಟಿಪ್ಪುವಿನ ಜಯಂತಿ ಆಚರಣೆ : ನಾಡಿಗೆ ಮಾಡಿದ ಅವಮಾನ! ನವೆಂಬರ್ ೧೦, ೨೦೧೫ರಲ್ಲಿ ಕರ್ನಾಟಕದಲ್ಲಿ ಅಸ್ತಿತ್ವವಿದ್ದ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಮುಸ್ಲಿಮರನ್ನು ಓಲೈಸಲು ಟಿಪ್ಪು ಜಯಂತಿಯನ್ನು ಮೊಟ್ಟ ಮೊದಲ ಬಾರಿಗೆ ಆಚರಿಸಿತು. ಅಲ್ಲಿಯವರೆಗೆ ಮುಸ್ಲಿಂ ಓಲೈಕೆ ಕರ್ನಾಟಕಕ್ಕೆ, ಭಾರತಕ್ಕೆ ಹೊಸದೇನೂ ಆಗಿರಲಿಲ್ಲ. ಸಾಕಷ್ಟು ಓಲೈಕೆ ರಾಜಕಾರಣವನ್ನು ಅಲ್ಲಿಯವರೆಗೆ ಜನರು ನೋಡಿದ್ದರು. ಆದರೆ ಒಬ್ಬ ಕ್ರೂರ ಹಿನ್ನಲೆಯುಳ್ಳ ಟಿಪ್ಪುವನ್ನು ನೆನೆಸಿಕೊಂಡು ಓಲೈಕೆಗೆ ಮುಂದಾಗಿದ್ದನ್ನು ಜನರು ಮೊದಲ ದಿನದಿಂದಲೇ ಪ್ರತಿಭಟಿಸಿದರು. […]

ಮೈಸೂರು, ೩೧ ಅಕ್ಟೋಬರ್ ೨೦೧೭: ನಗರದಲ್ಲಿ ಇಂದು ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸುವ, ಟಿಪ್ಪುವಿನ ನಿಜ ಚಿತ್ರಣವನ್ನು ಜನರ ಮುಂದಿಡುವ ಸಲುವಾಗಿ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು. ವಕೀಲರು ಹಾಗೂ ಖ್ಯಾತ ಅಂಕಣಕಾರರು ಶ್ರೀ ತೇಜಸ್ವಿ ಸೂರ್ಯ ಮಾತನಾಡಿ, ಟಿಪ್ಪು ಜಯಂತಿಯ ವಿರೋಧಿಸುವ ಕೊನೆಯ ಕಾರ್ಯಕ್ರಮ ಇದಾಗಲಿದೆ. ಮುಂದೆಂದೂ ಈ ಉದ್ಧಟತನವನ್ನು ಸರ್ಕಾರಗಳು ತಳೆಯದಿರಲಿ ಎಂದರು. ಈ ರಾಜ್ಯದ ಮುಖ್ಯ ಮಂತ್ರಿಗಳು ಎಲ್ಲಾ ಜನರ/ ಜನಾಂಗದ ಮುಖ್ಯ ಮಂತ್ರಿಯಾಗಿರದೇ ಓಲೈಕೆ ರಾಜಕಾರಣ ಮಾಡಿಕೊಂಡು […]