ದೇಶದ್ರೋಹಿ, ಮತಾಂಧ ಟಿಪ್ಪುವಿನ ಜಯಂತಿ ಆಚರಣೆ : ನಾಡಿಗೆ ಮಾಡಿದ ಅವಮಾನ! ನವೆಂಬರ್ ೧೦, ೨೦೧೫ರಲ್ಲಿ ಕರ್ನಾಟಕದಲ್ಲಿ ಅಸ್ತಿತ್ವವಿದ್ದ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಮುಸ್ಲಿಮರನ್ನು ಓಲೈಸಲು ಟಿಪ್ಪು ಜಯಂತಿಯನ್ನು ಮೊಟ್ಟ ಮೊದಲ ಬಾರಿಗೆ ಆಚರಿಸಿತು. ಅಲ್ಲಿಯವರೆಗೆ ಮುಸ್ಲಿಂ ಓಲೈಕೆ ಕರ್ನಾಟಕಕ್ಕೆ, ಭಾರತಕ್ಕೆ ಹೊಸದೇನೂ ಆಗಿರಲಿಲ್ಲ. ಸಾಕಷ್ಟು ಓಲೈಕೆ ರಾಜಕಾರಣವನ್ನು ಅಲ್ಲಿಯವರೆಗೆ ಜನರು ನೋಡಿದ್ದರು. ಆದರೆ ಒಬ್ಬ ಕ್ರೂರ ಹಿನ್ನಲೆಯುಳ್ಳ ಟಿಪ್ಪುವನ್ನು ನೆನೆಸಿಕೊಂಡು ಓಲೈಕೆಗೆ ಮುಂದಾಗಿದ್ದನ್ನು ಜನರು ಮೊದಲ ದಿನದಿಂದಲೇ ಪ್ರತಿಭಟಿಸಿದರು. […]

ತುಮಕೂರು, ೩೧ ಅಕ್ಟೋಬರ್ ೨೦೧೭: ಮಂಥನ ವೇದಿಕೆಯಲ್ಲಿ ನಗರದ ಶ್ರೀ ಸಿದ್ದಗಂಗಾ ಫಾರ್ಮಸಿ ಕಾಲೇಜಿನಲ್ಲಿ ‘ಟಿಪ್ಪುವಿನ ನೈಜ ಸ್ವರೂಪ’ ವಿಷಯದ ಬಗ್ಗೆ ಲೇಖಕರಾದ ಶ್ರೀಯುತ ಅದ್ದಂಡ ಕಾರ್ಯಪ್ಪ ಮತ್ತು ಸಂಸದ ಪ್ರತಾಪ ಸಿಂಹ ಚಿಂತಕರ ಸಮೂಹವನ್ನು ಉದ್ದೇಶಿಸಿ ಮಾತನಾಡಿದರು. ಕನ್ನಡ ವಿರೋಧಿಯಾಗಿದ್ದ ಟಿಪ್ಪು ತನ್ನ ಆಡಳಿತಾವಧಿಯಲ್ಲಿಯೇ ವಾಡಿಕೆಯಲ್ಲಿದ್ದ ಕನ್ನಡ ಪದಗಳನ್ನು ನಿಲ್ಲಿಸಿ ಪರ್ಶಿಯಾ ಭಾಷೆಯ ಪದಗಳನ್ನು ಹೇರಿದ್ದಾನೆ. ಅಲ್ಲದೇ ನಮ್ಮ ಸ್ಥಳಗಳ ಹೆಸರುಗಳನ್ನು ಪರ್ಶಿಯಾ ಭಾಷೆಯ ಹೆಸರುಗಳಾಗಿ ಬಲವಂತವಾಗಿ ಮಾರ್ಪಡಿಸಿದ ಟಿಪ್ಪುವಿಗೇಕೆ […]