ಸಾವರ್ಕರ್ ಎಂಬ ಅತ್ಯದ್ಭುತ ಚೇತನ ಲೇಖಕರು: ಮಂಜುನಾಥ ಅಜ್ಜಂಪುರ, ಲೇಖಕರು, ವಾಯ್ಸ್ ಆಫ್ ಇಂಡಿಯಾ ಹಾಗೂ ಅರುಣ್ ಶೌರಿ ಸರಣಿ ಸಂಪಾದಕರು, ಅಂಕಣಕಾರರು “ವೀರ ಸಾವರ್ಕರ್” ಎಂದೇ ಖ್ಯಾತರಾದ, ವಿನಾಯಕ ದಾಮೋದರ ಸಾವರ್ಕರ್ ಅವರು ಆತ್ಮಾರ್ಪಣೆ ಮಾಡಿಕೊಂಡ (26.02.2021) ದಿನವಿದು. ಅವರು ಭೌತಿಕವಾಗಿ ಇನ್ನಿಲ್ಲವೆನಿಸಿ 55 ವರ್ಷಗಳೇ ಉರುಳಿಹೋಗಿವೆ. ಆ ಮಹಾನ್ ಜೀವ ತಿಂದ ನೋವಿಗೆ ಕೊನೆಮೊದಲಿಲ್ಲ. ಭಾರತೀಯ ಸಮಾಜವು ಅವರನ್ನು ತುಂಬ ತುಂಬ ಕೆಟ್ಟದಾಗಿ ನಡೆಸಿಕೊಂಡಿತು, ಎಂದೇ ವಿಷಾದಪೂರ್ವಕವಾಗಿ ದಾಖಲಿಸಬೇಕಾಗಿದೆ. ಏಕೆ ಹೀಗಾಯಿತು, ಎಂಬಂತಹ […]
Vinayak Damodar Savarkar
ಪತಿತರೋದ್ಧಾರಕ್ಕೆ ಜೀವ ತೇಯ್ದ ವೀರ ಸಾವರ್ಕರ್ 1931ರ ಫೆಬ್ರವರಿ 22. ವೇದಮಂತ್ರ ಘೋಷಗಳು ಮೊಳಗುತ್ತಿರಲು, ಕರವೀರ ಪೀಠದ ಶಂಕರಾಚಾರ್ಯರ ನೇತೃತ್ವದಲ್ಲಿ, ಐದು ಸಾವಿರಕ್ಕೂ ಹೆಚ್ಚು ಹಿಂದೂಗಳ ಸಮ್ಮುಖದಲ್ಲಿ ಭಂಗಿ ಬಾಲಕನೊಬ್ಬ ಭಗವಾನ್ ವಿಷ್ಣುವಿನ ಮೂರ್ತಿಯನ್ನು ಪ್ರತಿಷ್ಠಾಪಿಸಿದ. ಭಂಗಿ ಬಾಲಕನೊಬ್ಬ ಶಂಕರಾಚಾರ್ಯರ ಪಾದ ಪೂಜೆ ಮಾಡಿ ಅವರಿಗೆ ಪುಷ್ಪ ಮಾಲೆಯೊಂದನ್ನು ಅರ್ಪಿಸಿದ. ಆದಿ ಶಂಕರರು ದೇವನದಿ ಗಂಗೆಯ ತಟದಲ್ಲಿ ಆತ್ಮ ತತ್ತ್ವವನ್ನು ಅರಿತಿದ್ದ ಚಾಂಡಾಲನನ್ನು ಅಪ್ಪಿಕೊಂಡ ಐತಿಹಾಸಿಕ ಘಟನೆಯನ್ನು ಆ ದೃಶ್ಯ […]
“ತಾತ್ಯಾ ಓ ತಾತ್ಯಾ ಈ ಹತಭಾಗ್ಯ ಹಿಂದುಸ್ಥಾನದಲ್ಲಿ ನೀನೇಕೆ ಹುಟ್ಟಿಬಂದೆ. ಇನ್ನಾವುದಾದರೂ ದೇಶದಲ್ಲಿ ಹುಟ್ಟಿದ್ದರೆ ಅಲ್ಲಿನ ಜನ ನಿನ್ನನ್ನು ಚಿನ್ನದ ಪಲ್ಲಕ್ಕಿಯಲ್ಲಿ ಮೆರೆಸುತ್ತಿದ್ದರು.” ಇದನ್ನು ತಾತ್ಯಾ ಟೋಪೆಯ ಕುರಿತಾಗಿ ಹೇಳಿದವರು ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರ್, ಆದರೆ ಇಂದಿನ ಪರಿಸ್ಥಿತಿಯಲ್ಲಿ ಅದೇ ತರಹದ ಉಕ್ತಿ ಸಾವರ್ಕರ್ (ಅವರನ್ನು ಮನೆಯಲ್ಲಿ ತಾತ್ಯಾ ಅಂತಲೇ ಕರೆಯುತ್ತಿದ್ದುದು) ಗೆ ಹೇಳುವುದು ಸೂಕ್ತವೆನಿಸುತ್ತದೆ. ‘ಹೊಸದಿಗಂತ’ ದಲ್ಲಿ ಹಿರಿಯ ಪತ್ರಕರ್ತರಾದ ದು ಗು ಲಕ್ಷ್ಮಣರ ಲೇಖನ. […]