• Samvada
  • Videos
  • Categories
  • Events
  • About Us
  • Contact Us
Monday, February 6, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Articles

Thank You PranabDa for addressing us at Nagpur : RSS Sahsarkayavah, Dr. Manmohan Vaidya – Kannada Article

Vishwa Samvada Kendra by Vishwa Samvada Kendra
June 25, 2018
in Articles, News Photo, Sangha shiksha varga
235
0
Thank You PranabDa for addressing us at Nagpur : RSS Sahsarkayavah, Dr. Manmohan Vaidya

Dr. Pranab Mukherjee at Nagpur

491
SHARES
1.4k
VIEWS
Share on FacebookShare on Twitter

ಆರೆಸ್ಸೆಸ್‍ನ ಸಹಸರಕಾರ್ಯವಾಹ ಶ್ರೀ ಮನಮೋಹನ ವೈದ್ಯರವರ ಈ ಲೇಖನ ವಿಜಯವಾಣಿ ಪತ್ರಿಕೆಯಲ್ಲಿ, ೨೫-ಜೂನ್-೨೦೧೮ರಂದು ಪ್ರಕಟಗೊಂಡಿದೆ.

http://vijayavani.net/sakaalika-3/

READ ALSO

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

ದೇಶದ ಸುರಕ್ಷತೆಗಾಗಿ ಅಗ್ನಿಪಥ!

ಧನ್ಯವಾದಗಳು ಪ್ರಣಬ್‍ದಾ

 ತಮ್ಮದೇ ಪಕ್ಷದ ಜನರ ತೀವ್ರ ವಿರೋಧದ ನಡುವೆಯೂ ಡಾ. ಪ್ರಣಬ್ ಮುಖರ್ಜಿಯವರು ಆರ್‍ಎಸ್‍ಎಸ್‍ನ ತೃತೀಯ ವರ್ಷ ಸಂಘ ಶಿಕ್ಷಾ ವರ್ಗದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಪ್ರಜಾಪ್ರಭುತ್ವದ ಮೌಲ್ಯವಾದ ಮುಕ್ತಸಂವಾದದ ವಿಷಯದಲ್ಲಿ ಅವರ ದೃಢತೆಯ ಬಗ್ಗೆ ನಮಗೆ ಕೃತಜ್ಞತಾಪೂರ್ವಕವಾದ ಮೆಚ್ಚುಗೆಯಿದೆ. ನಾಗಪುರ ಭೇಟಿಯ ವೇಳೆ ಡಾ. ಹೆಡಗೇವಾರ್‍ ರ ಪೂರ್ವಜರ ಮನೆಗೆ ಭೇಟಿ ನೀಡಿದ ಪೂರ್ವ ರಾಷ್ಟ್ರಪತಿಯವರು ಅವರ ಮಾತಿನಲ್ಲಿ ಹೇಳಿದಂತೆ “ಭಾರತದ ಶ್ರೇಷ್ಠ ಪುತ್ರ’’ನಿಗೆ ಗೌರವ ಸಲ್ಲಿಸಿದರು. ಆರ್‍ಎಸ್‍ಎಸ್ ಕೇಂದ್ರ ಕಾರ್ಯಾಲಯದಲ್ಲಿ ಡಾ. ಹೆಡಗೇವಾರ್ ಮತ್ತು ಶ್ರೀ ಗುರೂಜಿಯವರ ನೆನಪಿನಲ್ಲಿ ನಿರ್ಮಿಸಿರುವ ಸ್ಮೃತಿಮಂದಿರಕ್ಕೂ ಅವರು ಭೇಟಿ ನೀಡಿ ಗೌರವವನ್ನು ಅರ್ಪಿಸಿದರು. ಬಳಿಕ ನೆರೆದ ಸಾರ್ವಜನಿಕರ ಮುಂದೆ ಅತ್ಯಂತ ಪ್ರಾಮಾಣಿಕತೆಯಿಂದ ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿದರು. ಸಾರ್ವಜನಿಕ ಸಭೆಗಿಂತ ಮೊದಲು ಕ್ಯಾಮರಾಗಳ ಕಣ್ಣಿಂದ ದೂರದಲ್ಲಿ ಆರ್‍ಎಸ್‍ಎಸ್‍ನ ಹಿರಿಯ ಪದಾಧಿಕಾರಿಗಳು ಮತ್ತು ವಿಶೇಷ ಆಹ್ವಾನಿತರ ಜೊತೆಗೆ ನಡೆದ ಪರಿಚಯಾತ್ಮಕ ಸಭೆಯಲ್ಲಿ ಭಾಗವಹಿಸಿದ ಅವರು ತಮ್ಮ ಸರಳ ನಡವಳಿಕೆಯನ್ನು ಪ್ರದರ್ಶಿಸಿದರು. ವೈಯಕ್ತಿಕ ಪರಿಚಯದ ಸಮಯದಲ್ಲಿ ಸ್ವಯಂ ಪರಿಚಯಿಸಿಕೊಳ್ಳುವ ಸಲಹೆ ಮುಂದಿಟ್ಟ ಅವರು ಉಳಿದವರು ಪರಿಚಯ ಮಾಡಿಕೊಳ್ಳುವ ಉದಾಹರಣೆಯನ್ನು ಗಮನಿಸಿ ‘ನಾನು ಪ್ರಣಬ್ ಮುಖರ್ಜಿ’ ಎಂದು ಸರಳವಾಗಿ ತಮ್ಮನ್ನು ಪರಿಚಯಿಸಿಕೊಂಡರು. ಅವರ ಸರಳತೆ ಹೃದಯಸ್ಪರ್ಶಿಯಾಗಿತ್ತು.

 

Dr. Pranab Mukherjee at Nagpur

ಡಾ. ಪ್ರಣಬ್ ಮುಖರ್ಜಿಯವರು ಲಿಖಿತ ಇಂಗ್ಲಿಷ್ ಭಾಷಣದೊಂದಿಗೆ ಬಂದಿದ್ದರು. ಹಾಗೆಯೇ ಆರ್‍ಎಸ್‍ಎಸ್‍ನ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ಹಿಂದಿಯಲ್ಲಿ ಭಾಷಣ ಮಾಡಿದರು. ಆದರೂ ಅವರಿಬ್ಬರ ಮಾತುಗಳು `ಏಕಂ ಸತ್ ವಿಪ್ರಾಃ ಬಹುಧಾ ವದಂತಿ’ – ಒಂದೇ ಸತ್ಯವನ್ನು ಜ್ಞಾನಿಗಳು ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ ಎನ್ನುವ ಸಂಗಮ ಬಿಂದುವಿನಲ್ಲಿ ಒಂದಾಗಿ ಸೇರಿದವು. ಮುಂದುವರೆದು, ಅನನ್ಯವಾದ ಸಮಗ್ರ ದೃಷ್ಟಿಯ ಮೇಲೆ ಆಧಾರಿತವಾದ ಭಾರತೀಯ ರಾಷ್ಟ್ರದ ಪರಿಕಲ್ಪನೆಯು ಪಶ್ಚಿಮದ ಸ್ಟೇಟ್-ನೇಶನ್ ಪರಿಕಲ್ಪನೆಗಿಂತ ಭಿನ್ನವೆನ್ನುವುದನ್ನು ಪ್ರಣಬ್‍ದಾ ಸ್ಪಷ್ಟವಾಗಿ ವಿವರಿಸಿದರು. ನಮ್ಮ ಐದು ಸಾವಿರ ವರ್ಷಗಳ ನಾಗರಿಕತೆಯ ಇತಿಹಾಸವನ್ನು ಅವರು ಒತ್ತಿ ಹೇಳಿದರು. ನಮ್ಮ ಜೀವನದೃಷ್ಟಿಯಲ್ಲಿ ಅವಿಭಾಜ್ಯವಾಗಿರುವ ನಂಬಿಕೆಗಳ ಮೇಲೆ ಬೆಳಕು ಚೆಲ್ಲುತ್ತ – ವಸುಧೈವ ಕುಟುಂಬಕಮ್ ಮತ್ತು ಸರ್ವೇ ಭವಂತು ಸುಖಿನಃ ಎನ್ನುವ ವಿಚಾರಗಳು, ವೈವಿಧ್ಯತೆಯ ಮೌಲ್ಯಗಳು, ಮತನಿರಪೇಕ್ಷತೆ ಮತ್ತು ಸಹಿಷ್ಣುತೆ ಮೊದಲಾದ ಪ್ರಾಚೀನ ಮೌಲ್ಯಗಳನ್ನು ಸ್ವತಂತ್ರ ಭಾರತದ ನಮ್ಮ ಸಂವಿಧಾನದಲ್ಲಿಯೂ ಸೇರಿಸಿದ್ದನ್ನು ಸ್ಮರಿಸಿದರು. ಮೋಹನ್ ಭಾಗವತ್ ಅವರೂ ಸಹ ಇದೇ ವಿಚಾರಗಳನ್ನು ಬೇರೆ ಶಬ್ದಗಳಲ್ಲಿ ವ್ಯಕ್ತಪಡಿಸಿದರು. `ಸಹಿಷ್ಣುತೆ’ಯ ಬದಲು ಅವರು `ಎಲ್ಲ ವಿಚಾರಗಳ ಒಪ್ಪಿಕೊಳ್ಳುವ ಸ್ವಭಾವ’ ಎಂಬ ಪದಗುಚ್ಛವನ್ನು ಬಳಸಿದರು. ಯಾವುದೇ ಭಾರತೀಯನನ್ನು `ಬೇರೆ’ ಅಥವಾ `ಹೊರಗಿನವನು’ ಎಂದು ನಡೆಸಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ನಾವೆಲ್ಲ ಒಂದೇ ಪೂರ್ವಜರಿಂದ ಬಂದವರು ಎಂದು ಅವರು ಒತ್ತಿ ಹೇಳಿದರು. ಭಾರತದ ರಾಷ್ಟ್ರೀಯ ಜೀವನ ಒಂದು ಮತ, ಭಾಷೆ ಅಥವಾ ಜನಾಂಗದ ಆಧಾರದ ಮೇಲೆ ಬೆಳೆದುಬಂದದ್ದಲ್ಲ. ಬದಲಾಗಿ, ಆಧ್ಯಾತ್ಮ ಆಧಾರಿತವಾದ ಸಮಗ್ರ ಜೀವನದೃಷ್ಟಿ ಮತ್ತು ಅದರಿಂದ ಹೊರಹೊಮ್ಮಿದ ಮೌಲ್ಯಗಳ ಆಧಾರದ ಮೇಲೆ ನಿಂತಿದ್ದು ಎಂದು ಇಬ್ಬರೂ ಹಿರಿಯರು ತಮ್ಮ ಭಾಷಣದಲ್ಲಿ ಒತ್ತಿ ಹೇಳಿದರು. ಭಾಗವತ್‍ರವರು ಸಂಘ ಸಂಘವಾಗಿಯೇ ಇರುವುದು ಮತ್ತು ಪ್ರಣಬ್‍ದಾ ಅವರಾಗಿಯೇ ಇರುವರು. ಸಂಘದ ಕಾರ್ಯಕ್ರಮಕ್ಕೆ ಬಂದ ತಕ್ಷಣ, ಸಂಘವಾಗಲೀ ಪ್ರಣಬ್‍ದಾ ಅವರಾಗಲೀ ಬದಲಾಗಬೇಕಿಲ್ಲ ಎಂದು ಅಭಿಪ್ರಾಯಪಟ್ಟರು. ಏಕೆಂದರೆ, ಇನ್ನೊಬ್ಬರ ವಿಚಾರವನ್ನು ಗೌರವಿಸುವುದು ಭಾರತೀಯ ಸಂಪ್ರದಾಯವಾಗಿದೆ, ಇನ್ನೊಬ್ಬರ ಮೇಲೆ ಹೇರುವಿಕೆಯಲ್ಲ ಎಂದು ಸ್ಪಷ್ಟಪಡಿಸಿದರು.

 

ಈ ಜೀವನದೃಷ್ಟಿ ಮತ್ತು ಮೌಲ್ಯಗಳೇ ನಮ್ಮ ಸಂವಿಧಾನದಲ್ಲಿ ಪ್ರತಿಬಿಂಬಿತವಾಗಿವೆ. ಇಂತಹ ಮಾನವೀಯ ಮತ್ತು ವೈಶ್ವಿಕ ದೃಷ್ಟಿಕೋನವೇ ನಮಗೆ ಪರಂಪರಾಗತವಾಗಿ ದೊರಕಿದ ಶ್ರೇಷ್ಠ ಆಸ್ತಿಯಾಗಿದೆ. ಹಿಂದೆ ಭಾರತದ ಭಾಗವಾಗಿದ್ದ ನಮ್ಮ ನೆರೆಯ ಪಾಕಿಸ್ತಾನವೂ ಸಹ ಭಾರತದ ಸಂವಿಧಾನ ರಚನೆಯಾದ ಸಮಯದಲ್ಲೇ ತನ್ನ ಸಂವಿಧಾನವನ್ನು ರಚಿಸಿತು. ಆದರೆ ಅವರ ಸಂವಿಧಾನವು ಎಲ್ಲರನ್ನೂ ಒಳಗೊಳ್ಳುವ ಇಂತಹ ಮೌಲ್ಯಗಳನ್ನು ಹೇಳುವುದಿಲ್ಲ. ಪರಂಪರೆಯಿಂದ ನಮ್ಮಲ್ಲಿ ಅಂತರ್ಗತವಾಗಿ ಬಂದ ವೈವಿಧ್ಯತೆಯನ್ನು ಉಲ್ಲೇಖಿಸುವುದೂ ಇಲ್ಲ. ಸಹಜವಾಗಿ ಉದ್ಭವಿಸುವ ಪ್ರಶ್ನೆಯೆಂದರೆ ಎರಡೂ ಒಂದೇ ದೇಶವಾಗಿದ್ದಾಗ ಮತ್ತು ಜನರೂ ಒಂದೇ ದೇಶಕ್ಕೆ ಸೇರಿದವರಾಗಿದ್ದರೂ, ಮುಂದೆ ಈ ಭಿನ್ನತೆ ಹೇಗೆ ನುಸುಳಿತು? ನಮ್ಮ ಪರಂಪರೆಯಿಂದ ಪಡೆದ ಆಧ್ಯಾತ್ಮ ಆಧಾರಿತ ಸಮಗ್ರ ಜೀವನದೃಷ್ಟಿಯಲ್ಲಿಯೇ ಇದಕ್ಕೆ ಉತ್ತರವಿದೆ. ಪೂರ್ವ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಮತ್ತು ಗುರುದೇವ ರವೀಂದ್ರನಾಥ ಠಾಗೋರರು ಇದನ್ನು `ಹಿಂದು ಜೀವನದೃಷ್ಟಿ’ ಎಂದು ವ್ಯಾಖ್ಯಾನಿಸಿದ್ದಾರೆ. ಪಾಕಿಸ್ತಾನ ಈ ಜೀವನದೃಷ್ಟಿಯನ್ನು ನಿರಾಕರಿಸಿತು, ಭಾರತ ಸ್ವೀಕರಿಸಿತು. ಉದಾರಭಾವ ಮತ್ತು ಸರ್ವರನ್ನು ಒಳಗೊಳ್ಳುವ ಮೌಲ್ಯಗಳು ಸಂವಿಧಾನದಲ್ಲಿ ಸೇರಿರುವುದು ಭಾರತದ ಈ ಸ್ವಭಾವಕ್ಕೆ ಕಾರಣವಲ್ಲ, ಬದಲು ನಮ್ಮ ಪುರಾತನ ಹಿಂದು ಜೀವನದೃಷ್ಟಿಯಲ್ಲಿ ಇದು ಅಂತರ್ಗತವಾಗಿರುವುದೇ ಇದಕ್ಕೆ ಕಾರಣ. ಇಂತಹ ಉದಾರಭಾವ, ಬಹುತ್ವದ ಮೌಲ್ಯಗಳು ಸಂವಿಧಾನದ ಮೂಲಕ ನಮಗೆ ಬಂದಿವೆಯೇ ಹೊರತು ಸಂವಿಧಾನದಿಂದಾಗಿಯೇ ಬಂದಿದ್ದಲ್ಲ. ನಮಗೆ ಪರಂಪರೆಯಿಂದ ಉದಾರಭಾವ, ಮತನಿರಪೇಕ್ಷತೆ ಮತ್ತು ಸರ್ವಸಮಾವೇಶಕ ಮೌಲ್ಯಗಳು ದೊರಕಿವೆ. ಕನಿಷ್ಠ ಐದು ಸಾವಿರ ವರ್ಷಗಳಿಂದ ನಾವು ಹೀಗೇ ಇರುವೆವು. ಹಾಗಾಗಿ ಸಂವಿಧಾನವನ್ನು ಗೌರವಿಸುವುದು ಮತ್ತು ಅದರಂತೆ ನಡೆಯುವುದು ನಮ್ಮೆಲ್ಲರ ಅದ್ಯ ಕರ್ತವ್ಯವೇ ಸರಿ. ಆರ್‍ಎಸ್‍ಎಸ್ ಈ ಮಾರ್ಗದಲ್ಲಿ ಸ್ಥಿರವಾಗಿ ನಡೆಯುತ್ತಿದೆ. ಸಂಘದ ಮೇಲೆ ಎರಡು ಬಾರಿ ನ್ಯಾಯಯುತವಲ್ಲದ ರೀತಿಯಲ್ಲಿ ಅಂದಿನ ಸರ್ಕಾರಗಳ ನಿಷೇಧ ಹೇರಿದ ಹೊರತಾಗಿಯೂ, ನಿಷೇಧವನ್ನು ವಿರೋಧಿಸಿ ನಡೆದ ಸತ್ಯಾಗ್ರಹಗಳು ಶಿಸ್ತು ಮತ್ತು ಶಾಂತಿಯಿಂದಲೇ ಕೂಡಿದ್ದವು. ಸಂಪೂರ್ಣ ಸಾಂವಿಧಾನಿಕವಾದ ಸತ್ಯಾಗ್ರಹದ ಇಂತಹ ಉದಾಹರಣೆ ಸ್ವತಂತ್ರ ಭಾರತದ ಇತಿಹಾಸದಲ್ಲಿ ಇನ್ನೊಂದು ಕಾಣುವುದಿಲ್ಲ. ಆದರೆ ಸಂವಿಧಾನದ ಪ್ರತೀ ತತ್ವವನ್ನೂ ಉಲ್ಲಂಘಿಸುವವರು, ಹಿಂಸೆಯ ದಾರಿಯನ್ನು ಹಿಡಿದವರು, ನಮ್ಮ ಸೈನ್ಯದ ಮೇಲೆಯೇ ದಾಳಿ ಮಾಡುವವರು, ವಿಘಟನಕಾರಿ ಮತ್ತು ಅಸಾಂವಿಧಾನಿಕ ಚಟುವಟಿಕೆಗಳಿಗೆ ಬೆಂಬಲ ನೀಡುವವರೇ ಆರ್‍ಎಸ್‍ಎಸ್‍ಗೆ ಸಂವಿಧಾನವನ್ನು ಬೋಧಿಸಲು ಮುಂದಾಗುತ್ತಿದ್ದಾರೆ! ಈ ವರ್ಷ ಎಪ್ರಿಲ್ 2ರಂದು ಬಿಜೆಪಿ ಸರ್ಕಾರವಿರುವ 6 ರಾಜ್ಯಗಳಲ್ಲಿ ನಡೆದ `ಭಾರತ್ ಬಂದ್’ ಅಪ್ರಚೋದಿತ ಹಿಂಸಾಚಾರದ ಘಟನೆಗಳಿಗೆ ಸಾಕ್ಷಿಯಾಯಿತು. ಇದಕ್ಕೆ ರಾಹುಲ್ ಗಾಂಧಿ ಮತ್ತು ಸೆಕ್ಯುಲರ್-ಲಿಬರಲ್ ಲಾಬಿಯ ಬೆಂಬಲವೂ ದೊರಕಿತು. ಈ ಹಿಂಸಾಚಾರಗಳು ನಡೆದಾಗ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ನಮ್ಮ ಸಂವಿಧಾನ ಹೇಳಿದ ಸಾಂವಿಧಾನಿಕ ಮತ್ತು ಪ್ರಜಾಪ್ರಭುತ್ವದ ಯಾವ ಮೌಲ್ಯಗಳೂ ಪರಿಗಣನೆಗೇ ಬರಲಿಲ್ಲ.

 

Former President, Dr Pranab Mukherjee Addressing Swayamsevaks at Nagpur Thrutiya Varsha Sangha Shiksha Varga
RSS Sarasanghachalak Dr. Mohan Bhagwat and Former President of India Dr. Pranab Mukherjee

ಪ್ರಣಬ್ ಮುಖರ್ಜಿಯವರು ಭಾಷಣದ ನಂತರ ಈ ಭೇಟಿಯಿಂದ ಏನು ಹೊರಬರಹುದು? ಎಂದು ಆತಂಕಗೊಂಡವರು ತಕ್ಷಣವೇ ಈ ಭೇಟಿಯ ಸಾರಾಂಶವನ್ನು ವಿವರಿಸಿಬಿಡಲು ಮುಂದಾದರು. ಈ ಪ್ರತಿಕ್ರಿಯೆಗಳು ನಮ್ಮ ದೇಶದ ರಾಜಕೀಯ ಮತ್ತು ಬುದ್ಧಿಜೀವಿ ವರ್ಗದಲ್ಲಿ ಎಡಪಂಥೀಯರ ಪ್ರಭಾವ ಇನ್ನೂ ಇದೆ ಎನ್ನುವುದನ್ನು ಇದು ಹೊರಹಾಕಿತು. ಭಾರತೀಯವಲ್ಲದ ಈ ಎಡ ಸಿದ್ಧಾಂತದಲ್ಲಿ ನಿಸ್ಸಂಶಯವಾಗಿ ಅಸಮ್ಮತಿ, ಸ್ವತಂತ್ರತೆ ಮತ್ತು ಸಹಿಷ್ಣುತೆಗಳ ಕೊರತೆಯಿದೆ. ಭಾಷಣದ ವಿಶ್ಲೇಷಣೆಯನ್ನು ಮಾಡದೇ ಪ್ರಣಬ್ ಮುಖರ್ಜಿಯವರು ಸೆಕ್ಯುಲರಿಸಂ, ನೆಹರು ಮೊದಲಾದ ವಿಷಯಗಳ ಬಗ್ಗೆ ಮಾತನಾಡಿ ಆರ್‍ಎಸ್‍ಎಸ್‍ಗೆ ಕನ್ನಡಿ ಹಿಡಿದರು ಇತ್ಯಾದಿಯಾಗಿ ವ್ಯಾಖ್ಯಾನ ಮಾಡಲು ತೊಡಗಿದರು. ಆದರೆ ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಪ್ರಣಬ್ ಮುಖರ್ಜಿಯವರ ನಾಗಪುರ ಭೇಟಿಯ ಟೀಕಾಕಾರರಿಗೆ ಮೋಹನ್ ಭಾಗವತ್ ಅವರ ಭಾಷಣದ ಕುರಿತು ಹೇಳುವುದು ಏನೂ ಇರಲಿಲ್ಲ. ಅವರ ಭಾಷಣವನ್ನು ಕೇಳಿರದೇ ಇದ್ದ ಸಾಧ್ಯತೆಯೂ ಇದೆ. ಬಹುಶಃ ಭಾಷಣ ಕೇಳುವುದು ಅವರ ಸಮಯಕ್ಕೆ ತಕ್ಕ ಬೆಲೆಯೆಂದು ಅವರಿಗೆ ಅನ್ನಿಸಿರಲಿಕ್ಕಿಲ್ಲವೇನೋ! ಹಾಗೆಯೇ, ಇದು ಅವರ `ವಾಕ್ ಸ್ವಾತಂತ್ರ್ಯ’ದ ಉನ್ನತವಾದ ವ್ಯಾಖ್ಯೆ – ತಾವು ಹೇಳುವುದೆಲ್ಲವೂ ಸರಿ, ಉಳಿದುದೆಲ್ಲವೂ ತಪ್ಪು ಎನ್ನುವುದಕ್ಕೆ ಸರಿಯಾಗಿ ಇದೆ.

 

ಈ ವಿಷಯದಲ್ಲಿ ಬಂದ ಎಲ್ಲ ಋಣಾತ್ಮಕ ಲೇಖನಗಳಲ್ಲಿ ಒಬ್ಬರೂ ಸಹ ತಮ್ಮ ಸ್ವಾನುಭವದ ಕುರಿತು ಹೇಳಲಿಲ್ಲ. ಯಾಕೆಂದರೆ ಅವರಿಗೆ ಆರ್‍ಎಸ್‍ಎಸ್‍ನೊಂದಿಗೆ ನಡೆಸುವ ಯಾವುದೇ ಸಂವಾದ `ಧರ್ಮನಿಂದನೆ’ ಮತ್ತು ಇದರ ಪರಿಣಾಮ `ಲಿಬರಲ್ ಲೆಫ್ಟ್’ ಗುಂಪಿನಿಂದ ತತ್‍ಕ್ಷಣ ಬಹಿಷ್ಕಾರ! ಇಂತಹ ಒತ್ತಡದ ಸನ್ನಿವೇಶದಲ್ಲಿ ಆರ್‍ಎಸ್‍ಎಸ್ ಸರಸಂಘಚಾಲಕರು ಹೇಳುವುದನ್ನು ಕೇಳುವುದು ಅವರಿಗೆ ಒಂದು ಆಯ್ಕೆಯೇ ಅಲ್ಲ.

 

ಪ್ರಣಬ್ ಮುಖರ್ಜಿಯವರು ಆರ್‍ಎಸ್‍ಎಸ್‍ಗೆ ಕನ್ನಡಿ ಹಿಡಿದರು ಎಂದು ಅವರು ಹೇಳುತ್ತಾರೆ. ಆದರೆ ಅವರಿಗೆ ತಿಳಿದಿರಲಿಕ್ಕಿಲ್ಲ, ಕನ್ನಡಿಯಲ್ಲಿ ನೋಡಿಕೊಳ್ಳಲು ಸಂಘ ಸದಾ ತೆರೆದಿದೆ ಹಾಗೂ ಪ್ರತಿವರ್ಷ ಚಿಂತನ ಬೈಠಕ್‍ಗಳು ಮತ್ತು ಪ್ರತಿನಿಧಿ ಸಭಾದಲ್ಲಿ ಅವಲೋಕನಗಳು ನಡೆಯುತ್ತವೆ. ಪ್ರಸ್ತುತ ನಡೆಯುತ್ತಿರುವ ಚಟುವಟಿಕೆಗಳು ಮತ್ತು ಅಗತ್ಯ ಬದಲಾವಣೆಗಳ ಕುರಿತು ಈ ಸಭೆಗಳಲ್ಲಿ ಚಿಂತನೆ ನಡೆಸಲಾಗುತ್ತದೆ. ಆದರೆ ಎಲ್ಲರನ್ನು ಒಳಗೊಳ್ಳುವ ಪ್ರಗತಿಪರ ಮೌಲ್ಯಗಳ ಮೇಲೆ ಹಕ್ಕುಸ್ವಾಮ್ಯವಿರುವವರಂತೆ ಎಡಪಂಥೀಯರು ಮಾತನಾಡಿದರೂ, ತಮ್ಮ ವ್ಯವಹಾರದಲ್ಲಿ ಮಾತ್ರ ಅಸಹಿಷ್ಣುತೆಯ ಎಲ್ಲ ಗುಣಗಳನ್ನು ತೋರಿಸುತ್ತಾರೆ. ಇವರು ಕನ್ನಡಿಯನ್ನು ನೋಡುವುದು ಯಾವಾಗ? ಅವರು ಕನ್ನಡಿಯಲ್ಲಿ ನೋಡಿಕೊಳ್ಳಲು ಬಯಸುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಸತ್ಯವೆನ್ನುವುದು ಮಾತ್ರ ಅವರ ವ್ಯವಹಾರದಲ್ಲಿ ಬಿಂಬಿತವಾಗುತ್ತಲೇ ಇದೆ ಹಾಗೂ ಜನರು ಅವರ ಮಾತು ಮತ್ತು ಕೃತಿಗಳ ನಡುವೆ ಇರುವ ಅಂತರವನ್ನು, ಬೂಟಾಟಿಕೆಯ ಅತಿರೇಕವನ್ನು ಗಮನಿಸುತ್ತಲೇ ಇರುತ್ತಾರೆ.

 

ಇವೆಲ್ಲದರ ನಡುವೆ ಕ್ರತಜ್ಞತೆ ಸಲ್ಲಿಸಬೇಕಾದ ಒಂದು ಅಂಶವೆಂದರೆ – ಅವರು ಈ ಪ್ರಮಾಣದ ಅಸಹಿಷ್ಣುತೆಯನ್ನು ತೋರಿಸದೇ ಇದ್ದರೆ, ಪ್ರತಿವರ್ಷ ನಡೆಯುವ ಮತ್ತು ಪ್ರತಿಬಾರಿಯೂ ವಿಶಿಷ್ಟ ಅತಿಥಿಗಳನ್ನು ಭಾಷಣಕಾರರಾಗಿ ಅಹ್ವಾನಿಸುವ ಈ ಕಾರ್ಯಕ್ರಮ ಮಾಧ್ಯಮದವರ ಗಮನ ಸೆಳೆಯುತ್ತಿರಲಿಲ್ಲ. ಕಮ್ಯುನಿಸ್ಟರು ಮತ್ತು ಅವರಿಂದ ಪ್ರೇರಣೆ ಪಡೆದವರ ಟೊಳ್ಳುವಾದಗಳ ಕಾರಣದಿಂದ ಜನರು ಈ ಕಾರ್ಯಕ್ರಮದ ನೇರಪ್ರಸಾರವನ್ನು ನೋಡುವುದು ಸಾಧ್ಯವಾಯಿತು. ಜೂನ್ 1 ರಿಂದ 6 ರವರೆಗೆ ಆರ್‍ಎಸ್‍ಎಸ್ ವೆಬ್‍ಸೈಟ್ ಮೂಲಕ ಸಂಘವನ್ನು ಸೇರಲು ಪ್ರತಿದಿನ ಸರಾಸರಿ 378 `ಜಾಯಿನ್ ಆರೆಸ್ಸೆಸ್’ ಮನವಿಗಳು ಬಂದವು. ಆದರೆ ಕಾರ್ಯಕ್ರಮದ ದಿನ 1,779 ಮನವಿಗಳು ಬಂದವು! ಇದಕ್ಕಿಂತ ಹೆಚ್ಚಿನ ಇನ್ನೇನನ್ನು ಹೇಳಲಿ!

 

Dr Manmohan Vaidya, RSS

ಡಾ. ಮನಮೋಹನ ವೈದ್ಯ

ಸಹ ಸರಕಾರ್ಯವಾಹ (ಸಹ ಪ್ರಧಾನ ಕಾರ್ಯದರ್ಶಿ)

ರಾಷ್ಟ್ರೀಯ ಸ್ವಯಂಸೇವಕ ಸಂಘ

  • email
  • facebook
  • twitter
  • google+
  • WhatsApp
Tags: Former President of India Dr. Pranab Mukherjee addressing SwayamsevaksManmohan VaidyaSahsarkaryavah thanks Pranab Da

Related Posts

Articles

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

July 28, 2022
Articles

ದೇಶದ ಸುರಕ್ಷತೆಗಾಗಿ ಅಗ್ನಿಪಥ!

June 18, 2022
Articles

ಪಠ್ಯಪುಸ್ತಕಗಳು ಕಲಿಕೆಯ ಕೈದೀವಿಗೆಯಾಗಲಿ

Articles

ಒಂದು ಪಠ್ಯ – ಹಲವು ಪಾಠ

May 27, 2022
Articles

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

March 25, 2022
News Digest

ಮೋಹಿನಿ ಅಟ್ಟಂ ನೃತ್ಯಕ್ಕೆ ತಡೆ ಒಡ್ಡಿದ ಕೇರಳದ ಜಸ್ಟೀಸ್ ಕಲಮ್ ಪಾಶಾ

March 23, 2022
Next Post
Vikrama Kannada weekly web version launched

Vikrama Kannada weekly web version launched

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

Kumbh Mela brings Economic Prosperity: Dr MKS

Kumbh Mela brings Economic Prosperity: Dr MKS

January 12, 2013
ಆನಂದ ಕುಮಾರಸ್ವಾಮಿ ಎಂಬ ಅಗಾಧ ವ್ಯಕ್ತಿತ್ವದ ತತ್ತ್ವ ಚಿಂತಕ

ಆನಂದ ಕುಮಾರಸ್ವಾಮಿ ಎಂಬ ಅಗಾಧ ವ್ಯಕ್ತಿತ್ವದ ತತ್ತ್ವ ಚಿಂತಕ

July 15, 2018
ಮತಾಂತರ ತಡೆಗೆ ಆಗ್ರಹಿಸಿ ಪ್ರತಿಭಟನೆ

ಮತಾಂತರ ತಡೆಗೆ ಆಗ್ರಹಿಸಿ ಪ್ರತಿಭಟನೆ

March 25, 2011
Not surrender to separatists:ADVANI

Not surrender to separatists:ADVANI

January 24, 2011

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In