• Samvada
  • Videos
  • Categories
  • Events
  • About Us
  • Contact Us
Sunday, June 4, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Blog

ಉದಯಪುರದ ಘಟನೆ, ಜಿಹಾದ್‌ನ ಸೋದರತ್ವ ಮತ್ತು ಅಂಬೇಡ್ಕರ್ ಹೇಳಿದ ಪಾಠ!

Vishwa Samvada Kendra by Vishwa Samvada Kendra
June 29, 2022
in Blog
283
0
557
SHARES
1.6k
VIEWS
Share on FacebookShare on Twitter

ಉದಯಪುರದಲ್ಲಿ ದರ್ಜಿಯೊಬ್ಬರನ್ನು ನೂಪುರ್ ಶರ್ಮ ಅವರ ಹೇಳಿಕೆಗೆ ಬೆಂಬಲಿಸಿ ಮಾತನಾಡಿರುವುದಕ್ಕೆ ಹಾಡಹಗಲೇ ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿರುವುದು ಅತ್ಯಂತ ಅಮಾನವೀಯವಾಗಿದೆ. ಕನ್ಹಯ್ಯಾಲಾಲ್ ಎನ್ನುವ ಸಾಮಾನ್ಯ ಟೇಲರೊಬ್ಬರ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ನುಗ್ಗಿದ ಇಬ್ಬರು ಕೊಲೆಗಡುಕರು, ಅಳತೆ ತೆಗೆದುಕೊಳ್ಳುವ ಸಲುವಾಗಿ ಹತ್ತಿರ ಬಂದಾಗ ಮಚ್ಚಿನಿಂದ ಕುತ್ತಿಗೆಗೆ ಚಾಕು ಹಾಕಿದ್ದಾರೆ.ಇನ್ನೋರ್ವ ಇದನ್ನೆಲ್ಲ ತನ್ನ ಕ್ಯಾಮೆರಾದಿಂದ ಸೆರೆ ಹಿಡಿದ್ದಾನೆ. ರಕ್ತದ ಕೋಡಿಯೇ ಹರಿದಿದೆ.

ಇಸ್ಲಾಮಿನ ಮತಾಂಧತೆ ಅದೆಷ್ಟು ಹೀನಾಯ ಸ್ಥಿತಿ ತಲುಪಿದೆಯೆಂದರೆ ಮಾನವರನ್ನು ಕೊಂದು ಕೋಡಿಗಟ್ಟಲೆ ರಕ್ತ ಹರಿಸಿ ಅದರ ಮೇಲೆ ನಡೆದು ಪಾರಾರಿಯಾಗುವಾಗ ಘಟನೆಯ ಸ್ಥಳಕ್ಕೆ ಆಗಮಿಸಿದ ಪೋಲೀಸರ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ಅನೇಕ ಪೋಲಿಸ್ ಪೇದೆಗಳು ತೀವ್ರವಾಗಿ ಗಾಯಗೊಂಡಿದ್ದಾರೆ. ಅಷ್ಟು ಮಾತ್ರವೇ ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ತಾವೇ ಕೊಲೆ ಮಾಡಿರುವುದಾಗಿ ಖುದ್ದು ಶಸ್ತ್ರಗಳ ಸಮೇತ ಒಪ್ಪಿಕೊಂಡಿರುವುದಲ್ಲದೆ ಇಸ್ಲಾಮಿನ ಕಾರಣ ನೀಡಿ ಜಿಹಾದ್‌ ನಡೆಸಿರುವುದಾಗಿ ಪೈಶಾಚಿಕ ಕಾರ್ಯವನ್ನು ಸಮರ್ಥಿಸಿಕೊಂಡಿದ್ದಾರೆ.

READ ALSO

ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ

ಅಲ್ಲದೆ ಪ್ರಧಾನಿ ನರೇಂದ್ರ ಮೋಯವರಿಗೆ ಧಮಕಿ ಹಾಕಿರುವ ಜಿಹಾದಿಗಳು, ತಮ್ಮನ್ನು ತಡೆಯಲು ಸವಾಲು ಹಾಕಿದ್ದಾರೆ.ಅಲ್ಲದೆ ‘ನೀನು ಬೆಂಕಿ ಹಚ್ಚಿದ್ದೀಯಾ,ನಾವು ಅದನ್ನು ಆರಿಸುತ್ತೇವೆ’ ಎಂದು ಎಚ್ಚರಿಕೆಯ ರೂಪದಲ್ಲಿ ಮಾತನಾಡಿದ್ದಾರೆ‌.

ಈ ಹಿಂದೆ ಕನ್ಹಯ್ಯಾಲಾಲ್ ಅವರಿಗೆ ಅನೇಕ ಬೆದರಿಕೆಗಳು ಬಂದಿದ್ದು,ಜೂನ್ 15ರಂದು ಉದಯಪುರದ ಪೋಲಿಸ್ ಠಾಣೆಗೆ ದೂರು ಸಲ್ಲಿಸಿ ಬಂದಿದ್ದಾರೆ‌. ‘ನಝೀಮ್ ಮತ್ತು ಇತರ ಐದು ಮಂದಿ ನನ್ನನ್ನು ಹಿಂಬಾಲಿಸುತ್ತಿದ್ದು ಕಂಡಲ್ಲಿ ನನ್ನನ್ನು ಹತ್ಯೆ ಮಾಡುವ ಸಂಚು ಹೂಡಿದ್ದಾರೆ, ದಯಮಾಡಿ ನನ್ನನ್ನು ರಕ್ಷಿಸಿ’ ಎಂದು ಪೋಲೀಸರ ಮೊರೆ ಹೋಗಿದ್ದಾರೆ.

ಅಲ್ಲಿ ತಿಳಿಸಿರುವ ನಝೀಮ್ ಸ್ವತಃ ಕನ್ಹಯ್ಯಾಲಾಲ್ ಅವರ ನೆರೆಮನೆಯವನು.ಅವನೇ ಕನ್ಹಯ್ಯಾಲಾಲ್ ಅವರ ವಿಳಾಸ ಗುರುತು ಮಾಡಿ ತಮ್ಮ ಜಿಹಾದಿ ವಾಟ್ಸಪ್ ಗ್ರೂಪುಗಳಲ್ಲಿ ವೈರಲ್ ಮಾಡಿದ್ದು, ಅದರ ಸಹಾಯದ ಮೂಲಕವೇ ಅವರನ್ನು ಟ್ರಾಕ್ ಮಾಡಲಾಗಿದೆ.

ಈ ರೀತಿಯ ಜಿಹಾದಿ ಮನಸ್ಥಿತಿಯಿಂದ ಸಮಾಜದ ಸಾಮರಸ್ಯ ಹಾಗಿರಲಿ ಬದುಕುವುದಕ್ಕೆ ಹೆದರಿಕೆಯ ವಾತಾವರಣ ನಿರ್ಮಾಣವಾಗುತ್ತದೆ.ಇಸ್ಲಾಮ್ ತನ್ನ ಮತೀಯವಾದವನ್ನು ಜಿಹಾದ್‌ನ ಮೂಲಕ ಕಾರ್ಯಗತಗೊಳಿಸುವ ಕೆಲಸವನ್ನು ಅದಾಗಲೇ ಕತ್ತಿ ಹಿಡಿದು ಮಾಡಲು ಸಿದ್ಧಗೊಂಡಂತಿದೆ.ಈ ಹಿಂದೆ ಹಿಜಾಬ್ ವಿಚಾರವಿರಬಹುದು ಅಥವಾ ನೂಪುರ್ ಶರ್ಮ ವಿಚಾರವಿರಬಹುದು,ಆ ಎಲ್ಲ ಸವಾಲುಗಳಿಗೂ ಯಾವುದನ್ನೂ ಸಹಿಸದ ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ ಏಕಾಏಕಿ ಬೀದಿಗಿಳಿಯುವ, ಎಲ್ಲವನ್ನೂ ಧ್ವಂಸ ಮಾಡುವ, ಎಲ್ಲವನ್ನೂ ಧೂಳೀಪಟಗೊಳಿಸುವ, ನಿರ್ದಯೆಯಿಂದ ಮುಗಿಸುವ ತಣ್ಣಗಿನ ಕ್ರೌರ್ಯದಿಂದಲೇ ತನ್ನ ಉತ್ತರ ನೀಡಿದೆ.

ಬಹುಶಃ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಇವತ್ತಿಗೂ ಸತ್ಯವೆಂದೇ ತೋರುತ್ತದೆ.ಸುಳ್ಳು ಸೆಕ್ಯುಲರಿಸಮ್ಮಿನ,ಸುಳ್ಳೇ ಬ್ರದರ್‌ಹುಡ್‌ನ ರೋಮ್ಯಾಂಟಿಕ್ ಪರಿಕಲ್ಪನೆಯ ಸಮಾಜವನ್ನು ಇಸ್ಲಾಂನಿಂದ ನಿರೀಕ್ಷೆ ಮಾಡಲು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿಯನ್ನು ನಮ್ಮ ಸಮಾಜ ತಲುಪುತ್ತಿದೆಯೇ? ಎನ್ನುವ ಸಂಶಯ ಬಂದಾಗ ಅಂಬೇಡ್ಕರ್ ಅವರು ಪಾಕಿಸ್ಥಾನ್ ಆರ್ ಪಾರ್ಟಿಶನ್ ಆಫ್ ಇಂಡಿಯಾ ಪುಸ್ತಕದಲ್ಲಿ ಹೇಳಿದ ಈ ಮಾತುಗಳು ನನಗೆ ನೆನಪಾಗುತ್ತದೆ. “For Islam divides as inexorably as it binds. Islam is a close corporation and the distinction that it makes between Muslims and non-Muslims is a very real, very positive and very alienating distinction.” ಇಲ್ಲಿ ಕನ್ಹಯ್ಯಾಲಾಲ್ ಒಬ್ಬ ಹಿಂದೂ ಅನ್ನುವ ಕಾರಣಕ್ಕಾಗಿ ಅವರ ಪಕ್ಕದ ಮನೆಯ ನಝೀಮ್ ಈ ಮತಾಂಧರ ಜೊತೆ ಸೇರಿಕೊಳ್ಳುತ್ತಾನೆ.ಅಲ್ಲಿಗೆ ಮುಸಲ್ಮಾನ ಮತ್ತು ಮುಸಲ್ಮಾನನಲ್ಲದವರು ಎಂಬ ಪ್ರತ್ಯೇಕತೆ ಬಂದಿದೆ. ಮತ್ತು ಮುಸಲ್ಮಾನನಲ್ಲದವನನ್ನು ನಡೆಸಿಕೊಳ್ಳುವ ಪ್ರಜ್ಞೆ ಯಾವ ಮಾನವೀಯತೆಯ ನೆಲೆಯನ್ನೂ ಒಳಗೊಳ್ಳುವುದಿಲ್ಲ.ಇಲ್ಲಿ ಇಸ್ಲಾಂ ಮಾನವೀಯತೆಗಿಂತಲೂ ಹೆಚ್ಚಾಗಿ ಹೋಗಿದೆ, ಮನುಷ್ಯರನ್ನು ಕೊಲ್ಲುವುದಕ್ಕೂ ಆ ಜಿಹಾದಿಗಳು ಹಿಂದುಮುಂದು ನೋಡದೆ ಸಮರ್ಥಿಸಿಕೊಂಡಿದ್ದಾರೆ.ಅಂದರೆ ಬಾಬಾಸಾಹೇಬರು ಹೇಳಿದ ಈ ಮಾತುಗಳು ಈ ಘಟನೆಗಂತೂ ಸತ್ಯವಾಗಿದೆ‌.

ಅವರು ಮುಂದುವರೆಯುತ್ತಾ ಹೇಳುತ್ತಾರೆ,”The brotherhood of Islam is not the universal brotherhood of man. It is a brotherhood of Muslims for Muslims only. There is a fraternity, but its benefit is confined to those within that corporation. For those who are outside the corporation, there is nothing but contempt and enmity”. ಬಹುಶಃ ಈ ಬಡ ಟೇಲರ್‌ನ ಮೇಲೆ ಮತೀಯವಾದ ದ್ವೇಷ, ಆತ ಕಾಫಿರ,ಅವನು ಸಮರ್ಥಿಸಿದ ಹೇಳಿಕೆ ಇಸ್ಲಾಂ ವಿರೋಧಿ ಎಂಬುದೊಂದನ್ನು ಬಿಟ್ಟು ಮತ್ತೇನಿರಲು ಸಾಧ್ಯ? ಹಾಗಾದರೆ ಮುಸಲ್ಮಾನರ ಬ್ರದರ್‌ಹುಡ್ ಕನ್ಹಯ್ಯಾಲಾಲ್‌ ಅವರನ್ನು ಕೊಲ್ಲುವಾಗ ಎಲ್ಲಿ ಹೋಗಿತ್ತು?

ಇನ್ನು ಕೊಲೆಯಾದ ಘಟನಾಸ್ಥಳಕ್ಕೆ ಆಗಮಿಸಿದ ಪೋಲೀಸರ ಮೇಲೆ ಸುರಿದ ಕಲ್ಲಿನ ಮಳೆಯ ಬಗೆಗೆ ಮಾತನಾಡುವುದಾದರೆ, ಇಂತಹ ಜಿಹಾದೀ ಮತಾಂಧರನ್ನು ಬೆಂಬಲಿಸುವ ಸಂವಿಧಾನದತ್ತವಾದ ಪೋಲೀಸ್ ಇಲಾಖೆಯ ಕೆಲಸಗಳಿಗೆ ಅಡ್ಡಿಯುಂಟು ಮಾಡುವ ಜಿಹಾದ್‌ ಮನಸ್ಥಿತಿಯ ಕುರಿತೂ ಆತಂಕವಾಗುತ್ತದೆ. ಅಂಬೇಡ್ಕರ್ ಅವರು ಹೇಳುವ ಈ ಮಾತುಗಳು ಅದರ ಬಗೆಗೆ ಸ್ಪಷ್ಟವಾದ ದೃಷ್ಟಿಯಿಂದ ನೋಡಲು ಅನುವು ಮಾಡಿಕೊಡಬಲ್ಲದೇನೋ.”Islam is a system of social self-government and is incompatible with local self-government because the allegiance of a Muslim does not rest on his domicile in the country which is his but on the faith to which he belongs.” ಇದನ್ನು ಓದಿದಾಗ, ಇಸ್ಲಾಂ ಕುರಿತಾಗಿ ಬಾಬಾ ಸಾಹೇಬರು ನೀಡಿದ ಒಳನೋಟಗಳು ಅದೆಷ್ಟು ನೈಜ ಎನ್ನುವುದು ಮತ್ತು ಎಚ್ಚರಿಕೆಯ ನುಡಿಗಳಾಗಿದ್ದವು ಎನ್ನುವುದು ನಮಗೆ ಅರಿವಾಗುತ್ತದೆ‌.

ಸಮಾಜದ ಶಾಂತಿ ಸುವ್ಯವಸ್ಥೆ ಇದೆಲ್ಲವನ್ನು ಗಾಳಿಹೆ ತೂರಿ ಅಸಹಿಷ್ಣುಗಳಾಗಿ ವರ್ತಿಸುವವರಿಗೆ ಅದೇ ಭಾಷೆಯಲ್ಲಿ ಸಂವಿಧಾನ ಉತ್ತರ ನೀಡಬೇಕಿದೆ. ಕನ್ಹಯ್ಯಾಲಾಲ್‌ನಂತಹ ಸಾಮಾನ್ಯ ಜನರಿಗೆ,ಮುಗ್ಧರಿಗೆ ರಕ್ಷಣೆಯ ಅಗತ್ಯವಿದೆ,ಅಲ್ಲದೆ ಯಾವುದೇ ಸಾಮಾನ್ಯ ಮನುಷ್ಯನಿಗೂ ಅವನದೇ ಆದ ವಾಕ್‌ಸ್ವಾತಂತ್ರ್ಯವಿರಬೇಕು.ಅದು ಕೇವಲ ಕೆಲವೇ ಕೋಮಿಗೋ, ಕೆಲವೇ ಜನರಿಗೋ ಅಲ್ಲದೆ ಆಯ್ಕೆಯ ಸ್ವಾತಂತ್ರ್ಯವನ್ನು ಸಂವಿಧಾನ ಎಲ್ಲರಿಗೂ ನೀಡಿದೆ,ಅದು ಎಲ್ಲರಿಗೂ ಸಮಾನವಾಗಿ ಜಾರಿಯಾಗಬೇಕಾದ ಮಾನವೀಯತೆಯ ನೆಲೆಯಲ್ಲೇ ಜಾರಿಯಾಗಬೇಕಾದ ಅಗತ್ಯವಿದೆ.

– ತನ್ಮಯಿ ಪ್ರೇಮ್‌ಕುಮಾರ್

  • email
  • facebook
  • twitter
  • google+
  • WhatsApp
Tags: #KannayyalalbrutalISISJihadmurderRajasthantailorudaypur

Related Posts

ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
Blog

ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!

September 6, 2022
Blog

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ

August 15, 2022
ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
Blog

ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ

August 15, 2022
ಅಮೃತ ಮಹೋತ್ಸವದ ಸಂಭ್ರಮ – ಆತ್ಮಾವಲೋಕನಕ್ಕೆ ಸುಸಮಯ
Blog

ಅಮೃತ ಮಹೋತ್ಸವದ ಸಂಭ್ರಮ – ಆತ್ಮಾವಲೋಕನಕ್ಕೆ ಸುಸಮಯ

August 14, 2022
Blog

Amrit Mahotsav – Over 200 tons sea coast garbage removed in 20 days

July 29, 2022
Articles

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

July 28, 2022
Next Post

ಸುದೃಢ ಭಾರತದ ಮೂಲ ಸೆಲೆ ಸಾಮರಸ್ಯ: ರಾಜೇಶ್ ಪದ್ಮಾರ್

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022
ಡಾ|| ಭೀಮರಾವ್ ಅಂಬೇಡ್ಕರ್: ಜೀವನ, ಸಾಧನೆ

ಡಾ|| ಭೀಮರಾವ್ ಅಂಬೇಡ್ಕರ್: ಜೀವನ, ಸಾಧನೆ

April 14, 2021
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015

ಒಂದು ಪಠ್ಯ – ಹಲವು ಪಾಠ

May 27, 2022
Shri Guruji Golwalkar – Biography By H. V. Sheshadri

Shri Guruji Golwalkar – Biography By H. V. Sheshadri

April 18, 2011

EDITOR'S PICK

RSS Press Release; Condemns Home Secretary statements, claims it as ‘Misleading’ & ‘Politically Motivated’

RSS Press Release; Condemns Home Secretary statements, claims it as ‘Misleading’ & ‘Politically Motivated’

January 25, 2013
Nation remembers Social reformer, Second Chief of RSS Guruji Golwalkar on his 109th Jayanti

Nation remembers Social reformer, Second Chief of RSS Guruji Golwalkar on his 109th Jayanti

February 19, 2015
Welcome move of cancelling Tipu Jayanti opines scholars, writers, activists

ಹಿರಿಯ ಸಾಹಿತಿ ಡಾ. ಚಿದಾನಂದಮೂರ್ತಿ ನಿಧನ: ಕ್ಷೇತ್ರೀಯ ಸಂಘಚಾಲಕರಾದ ಶ್ರೀ ವಿ ನಾಗರಾಜ  ಶ್ರದ್ಧಾಂಜಲಿ  

January 11, 2020

ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

March 8, 2022

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In