ಮಲ್ಲೇಶ್ವರಂ: ಫೆಬ್ರವರಿ 10 ರ ಭಾನುವಾರದಂದು “ವರ್ತಮಾನ” -ಮಲ್ಲೇಶ್ವರಂ 4ನೇ ಕಾರ್ಯಕ್ರಮ.
ಹೆಸರಾಂತ ಕಾನೂನು ತಜ್ಞ ಶ್ರೀ.ನರಗುಂದರು ಕಾನೂನಿನ ಪ್ರಕಾರ ಅಲ್ಪಸಂಖ್ಯಾತರಿಗಾಗಿ ಪ್ರತ್ಯೇಕ ವಿ.ವಿ ಸ್ಥಾಪಿಸಲು ಸಂವಿಧಾನದಲ್ಲಿ ಅವಕಾಶ ನೀಡಿಲ್ಲ ಎಂದು ವಿವರವಾಗಿ ತಿಳಿಸಿದರು.ಕೇಂದ್ರದ ಯು.ಪಿ.ಎ ಸರ್ಕಾರ ಅಲ್ಪಸಂಖ್ಯಾತರನ್ನು ಓಲೈಸಲು ಹೇಗೆ ಕಾನೂನುಗಳನ್ನು ಮಾಡಿದ್ದಾರೆ ಎಂಬುದನ್ನೂ ಗಮನಕ್ಕೆ ತಂದರು.
ಸಂಶೋಧಕ,
ಚಿಂತಕ ಶ್ರೀ.ಚಿದಾನಂದಮೂರ್ತಿಗಳು ‘ಟಿಪ್ಪು‘ವಿನ ಕ್ರೂರತೆ, ಮತಾಂಧತೆ, ಹಿಂದೂ ದ್ವೇಷ , ಕನ್ನಡ ವಿರೋಧಿತನ ಇತ್ಯಾದಿ ಅನೇಕ ಸಂಶೋಧಿತ ಸತ್ಯಗಳನ್ನು ಆಧಾರಸಹಿತವಾಗಿ ಸಭೆಯ ಮುಂದಿಟ್ಟರು.ಕೇಂದ್ರ ಸರ್ಕಾರವು ಟಿಪ್ಪುವಿನ ಹೆಸರನ್ನು ವಿ.ವಿ.ಗೆ ಸೂಚಿಸಿರುವುದು ಖಂಡನಾರ್ಹ ಎಂದು ವಿವರಿಸಿದರು. ವಯಸ್ಸು 80 ದಾಟಿದ್ದರೂ ಉತ್ಸಾಹದಲ್ಲಿ, ಅನ್ಯಾಯದ -ಅಸತ್ಯದ ಬಗ್ಗೆ ಸಿಡಿದೇಳುವುದರಲ್ಲಿ 20ವಯಸ್ಸಿನವರನ್ನೂ ಮೀರಿಸುವಂತಿದ್ದರು ಚಿ.ಮೂ.
ಮೂಲತ: ಕೊಡಗಿನವರೇ ಅದ ಶ್ರೀ.ಅದ್ದಂಡ ಕಾರ್ಯಪ್ಪನವರು, ಯಾವ ರೀತಿ ಟಿಪ್ಪು ಸುಲ್ತಾನ್ ಕೊಡಗಿನ ಜನರನ್ನು ಮೋಸದಿಂದ ಹಿಂಸಿಸಿ ಕೊಂದ, ಈವತ್ತಿಗೂ ಅದರ ಕರಾಳವಾದ ನೆನಪು ಕೊಡಗಿನ ಜನರ ಮನದಲ್ಲಿ ಉಳಿದುಬಂದಿದೆ ಎನ್ನುತ್ತಾ ಟಿಪ್ಪುವಿನ ಅಮಾನವೀಯತೆಯ ಬಗ್ಗೆ ಹೇಳಲು ತಮಗೆ ಯಾವ ಸಂಶೋಧನೆಯ ಅಗತ್ಯವಿಲ್ಲ ಎಂದರು.
ಕಾರ್ಯಕ್ರಮ ಮುಗಿದ ನಂತರ ಒಂದೂವರೆ ಗಂಟೆಯಾದರೂ ಬಂದ ಅನೇಕರ ಚರ್ಚೆ-ಚಿಂತನ ಕಾರ್ಯಕ್ರಮದ ಸ್ಥಳದಲ್ಲೇ ಮುಂದುವರೆದಿತ್ತು!
Pictorial Pdf: