• Samvada
  • Videos
  • Categories
  • Events
  • About Us
  • Contact Us
Monday, February 6, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Articles

ಡಾ. ಸ್ವಾಮಿಯವರೊಂದಿಗೆ ವಿಶ್ವ ಸಂವಾದ ಕೇಂದ್ರ ಸಂದರ್ಶನ: “ನಮಗೆ ಬೇಕಾಗಿದೆ ಹಿಂದುತ್ವ ಆಧಾರಿತ ರಾಜಕೀಯ ಪಕ್ಷ”

Vishwa Samvada Kendra by Vishwa Samvada Kendra
October 28, 2011
in Articles
250
1
ಡಾ. ಸ್ವಾಮಿಯವರೊಂದಿಗೆ ವಿಶ್ವ ಸಂವಾದ ಕೇಂದ್ರ ಸಂದರ್ಶನ: “ನಮಗೆ ಬೇಕಾಗಿದೆ ಹಿಂದುತ್ವ ಆಧಾರಿತ ರಾಜಕೀಯ ಪಕ್ಷ”

Dr Subramanian Swamy Interview Kannada

491
SHARES
1.4k
VIEWS
Share on FacebookShare on Twitter

“ನಮಗೆ ಬೇಕಾಗಿದೆ, ವಿಶ್ವಾಸಾರ್ಹ, ಹಿಂದುತ್ವ ಆಧಾರಿತ ರಾಜಕೀಯ ಪಕ್ಷ” : ಡಾ. ಸುಬ್ರಹ್ಮಣ್ಯನ್ ಸ್ವಾಮಿ

Dr Subramanian Swamy Interview Kannada

ಮಾಜಿ ಕೇಂದ್ರ ಸಚಿವ ಡಾ. ಸುಬ್ರಹ್ಮಣ್ಯನ್ ಸ್ವಾಮಿ ಅವರು ವಿಶ್ವಾಸಾರ್ಹ ಹಾಗೂ  ಹಿಂದುತ್ವ ಆಧಾರಿತ ರಾಜಕೀಯ ಪಕ್ಷವೊಂದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕೆಂದು ಆಗ್ರಹಿಸಿದ್ದಾರೆ.  ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದಾಗ ವಿಶ್ವ ಸಂವಾದ ಕೇಂದ್ರದೊಂದಿಗೆ ನಡೆಸಿದ ಸಂದರ್ಶನದಲ್ಲಿ , ಪಂಡಿತ್ ದೀನದಯಾಳ ಉಪಾಧ್ಯಾಯರ ಏಕಾತ್ಮ ಮಾನವತಾವಾದ ಒಂದೇ ನಮಗಿರುವ  ಮಾರ್ಗವೆಂದರು.  ಹಿಂದುತ್ವ,  ಆರ್ಥಿಕತೆ, ರಾಜಕೀಯ, ಭ್ರಷ್ಟಾಚಾರ ಇತ್ಯಾದಿ ಹಲವು ವಿಷಯಗಳ ಕುರಿತು ಅವರು ಚರ್ಚಿಸಿದರು.  ಸಂದರ್ಶನದ ಮುಖ್ಯಾಂಶಗಳು ಇಲ್ಲಿವೆ :

READ ALSO

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

ದೇಶದ ಸುರಕ್ಷತೆಗಾಗಿ ಅಗ್ನಿಪಥ!

ಪ್ರ : ನೀವು ಒಬ್ಬ ಆರ್ಥಿಕ ತಜ್ಞರಾಗಿ, ಒಬ್ಬ  ರಾಜಕಾರಣಿಯಾಗಿ ಮತ್ತು ಒಬ್ಬ ಅಕಾಡೆಮಿಕ್ ವ್ಯಕ್ತಿಯಾಗಿ  ದೀರ್ಘಕಾಲ ಕಾರ್ಯನಿರ್ವಹಿಸಿರುವಿರಿ. ಈ ಅವಧಿಯಲ್ಲಿ ನೀವು  ಹಿಂದೂ ಪ್ರಜ್ಞಾವಂತಿಕೆಯಲ್ಲಿ ಏನಾದರೂ ಗಮನಾರ್ಹ ಬದಲಾವಣೆಯನ್ನು ಸಾರ್ವಜನಿಕರಲ್ಲಿ ರಾಜಕೀಯ ವಲಯದಲ್ಲಿ ಮತ್ತು ಬುದ್ಧಿಜೀವಿಗಳ ಕ್ಷೇತ್ರದಲ್ಲಿ ಗಮನಿಸಿದ್ದೀರಾ?

ಬದಲಾವಣೆಯ ಎರಡು ಕ್ಷೇತ್ರಗಳಿವೆ.  ಮೊದಲನೆಯದು, ಯುವಕರ ವರ್ತನೆಯಲ್ಲಿ ಅಗಾಧ ಬದಲಾವಣೆ. ದೇವಸ್ಥಾನಗಳಿಗೆ, ಆಶ್ರಮಗಳಿಗೆ, ಉತ್ಸವಗಳ ಆಚರಣೆ ಸಂದರ್ಭದಲ್ಲಿ  ಇದನ್ನು ಗಮನಿಸಬಹುದು. ಉದಾಹರಣೆಗೆ : ಸಿದ್ಧಿವಿನಾಯಕ ದೇವಸ್ಥಾನದಲ್ಲಿ  ದರ್ಶನ ಪಡೆಯುವುದಕ್ಕಾಗಿ ಯುವ ಪೀಳಿಗೆ ಗಂಟೆಗಟ್ಟಲೆ ಕ್ಯೂನಲ್ಲಿ ನಿಂತಿರುವುದನ್ನು  ನಾನು ಗಮನಿಸಿದ್ದೇನೆ.  ಕುಂಭಮೇಳ, ಶಬರಿಮಲೈ ಮೊದಲಾದ ಕಡೆಗಳಲ್ಲೂ ಇದೇ ದೃಶ್ಯ ವ್ಯಕ್ತವಾಗಿದೆ. ಇದೊಂದು ಸ್ವಾಗತಾರ್ಹ ಬದಲಾವಣೆ.  ನೆಹರೂ ಕಾಲದಲ್ಲಿ  ಜನರು  ತಾವಾಗಿಯೇ ಹಿಂದುತ್ವದಿಂದ ವಿಮುಖರಾಗಿ  ತಾವು ಆಧುನಿಕರೆಂದು ತೋರಿಸಿಕೊಳ್ಳಲು ಯತ್ನಿಸುತ್ತಿದ್ದರು. ಇಂತಹ ಕಂದಾಚಾರಗಳಲ್ಲಿ  ನಾವು ನಂಬಿಕೆಯಿಡುವುದಿಲ್ಲ ಎಂದು  ಆಗಿನವರು  ಹೇಳುತ್ತಿದ್ದರು. ಈಗ ಜನರು  ಆಶ್ರಮಗಳಿಗೆ, ಸ್ವಾಮೀಜಿಗಳ ಸನ್ನಿಧಿಗೆ  ಹೋಗುತ್ತಾ, ಯೋಗಾಭ್ಯಾಸ ಮಾಡುತ್ತಾ, ಧಾರ್ಮಿಕತೆಯೊಂದಿಗೆ ತಳಕು ಹಾಕಿಕೊಂಡಿರುವುದನ್ನು   ನಾನು ಗಮನಿಸಿರುವೆ.  ಜನರು  ಶಬರಿಮಲೈಗೆ ಪಾದಯಾತ್ರೆ ಕೂಡ ಮಾಡತೊಡಗಿದ್ದಾರೆ.

ನಾನು ಗಮನಿಸಿದ  ಇನ್ನೊಂದು ಬದಲಾವಣೆಯೆಂದರೆ, ಹಿಂದೂ ಸಾಧುಸಂತರ ಬಗ್ಗೆ ಭಾರತದಲ್ಲಿ  ವ್ಯಾಪಕವಾದ ಸ್ವೀಕಾರಾರ್ಹತೆ ಮತ್ತು ಗೌರವ ಭಾವ. ಜನರು ನಿರ್ದಿಷ್ಟ ಹಾಗೂ  ಸಾಮಾನ್ಯ ಸಲಹೆ ಪಡೆಯುವುದಕ್ಕಾಗಿ  ಆಧ್ಯಾತ್ಮಿಕ ಸಂತರ ಬಳಿ ತೆರಳುತ್ತಿದ್ದಾರೆ.  ಅನೇಕ ನಿಯತಕಾಲಿಕೆಗಳು ಹಿಂದುತ್ವಕ್ಕೆ ಸಂಬಂಧಿಸಿದಂತೆ ಜಾಗೃತಿಯುಂಟುಮಾಡಿವೆ.

ಆದಾಗ್ಯೂ ‘ಹಿಂದೂ ಮಾನಸಿಕತೆ’ ರೂಢಿಸಿಕೊಳ್ಳುವಲ್ಲಿ ಹಿಂದೂ ಸಮಾಜ ಸಿದ್ಧವಾಗಬೇಕಾಗಿದೆ.  ಅದಿನ್ನೂ ಆಗಿಲ್ಲ. ಅದಕ್ಕಾಗಿ ನಾನು ಎಲ್ಲೆಡೆ ಅಭಿಯಾನ ಮಾಡುತ್ತಲೇ ಇರುತ್ತೇನೆ. ಹಿಂದೂ ಮಾನಸಿಕತೆಗೆ ಸಂಬಂಧಿಸಿ ಎರಡು ಬಗೆಯ ಹೋಲಿಕೆಗಳಿವೆ –  ಸಮಾಜದಲ್ಲಿ ಬಹುಸಂಖ್ಯಾತರಾಗಿದ್ದಾಗ ಹಿಂದುಗಳು ಸಜ್ಜನರು ಹಾಗೂ  ಮೇಕೆಯಷ್ಟು ಸಾಧುಗಳೂ ಆಗಿರುತ್ತಾರೆ.  ಅದರಿಂದೇನೂ ಪ್ರಯೋಜವಿಲ್ಲ.  ನೀವು  ಒಂದು ಸಾವಿರ ಮೇಕೆಗಳನ್ನು  ಹೊಂದಿರಬಹುದು.  ಆದರೆ ಹುಲಿಯೊಂದು ಬಂದರೆ ಈ ಮೇಕೆಗಳು ಎಷ್ಟೇ ಸಂಖ್ಯೆಯಲ್ಲಿದ್ದರೂ ಯರ್ರಾಬಿರ್ರಿ ಓಡಿಹೋಗುವುದರಲ್ಲಿ ಅನುಮಾನವಿಲ್ಲ.

ಇನ್ನೊಂದು ಹೋಲಿಕೆಯೆಂದರೆ,  ಹಿಂದೂಗಳು ಸಾಕಷ್ಟು ಶಕ್ತಿಶಾಲಿಗಳಾಗಿದ್ದರೂ ಅವರು  ಸರ್ಕಸ್‌ನ ಪಂಜರದೊಳಗಿನ,   ರಿಂಗ್ ಮಾಸ್ಟರ್ ಹೇಳಿದಂತೆ ಕೇಳುವ, ಆತನ ಕರುಣೆ ಮತ್ತು  ನಿಯಂತ್ರಣದಲ್ಲಿರುವ  ಸಿಂಹಗಳಿದ್ದಂತೆ. ತಮಗೆ ಆತನನ್ನು  ಕೊಲ್ಲುವ  ಶಕ್ತಿಯಿದ್ದರೂ ಆ ಸಿಂಹಗಳು ರಿಂಗ್‌ಮಾಸ್ಟರ್‌ನ ಪ್ರತಿಯೊಂದು ಸಣ್ಣಪುಟ್ಟ ಆದೇಶಗಳನ್ನೂ  ಪಾಲಿಸುತ್ತವೆ. ಹಾಗಾಗಿ ಹಿಂದೂ ಮಾನಸಿಕ ಕ್ರಾಂತಿಯ ಅಗತ್ಯ ಜರೂರಾಗಿದೆ.

ನಮ್ಮ ಸನಾತನ ಸಂಸ್ಕೃತಿಯೇ ನಮಗಿರುವ  ಆಧ್ಯಾತ್ಮಿಕ ತಳಹದಿ.  ಪಾಶ್ಚಿಮಾತ್ಯ ಮುಖಂಡರು  ರೇಶ್ಮೆಯ ಉಡುಪು ಹಾಗೂ ಆಭರಣಗಳಿಂದ ಕಂಗೊಳಿಸುತ್ತಿದ್ದಾಗ ನಮ್ಮ ಆಧ್ಯಾತ್ಮಿಕ ನಾಯಕರು  ಕಾವಿಬಣ್ಣದ ಬಟ್ಟೆ ತೊಟ್ಟು ಸರಳವಾಗಿ ಕಾಣಿಸಿಕೊಂಡರು.  ಆದರೆ ಜಾಗತೀಕರಣ ಎಂಬ ಭೂತ ಜನರನ್ನು  ಭೌತಿಕವಾದಿಗಳನ್ನಾಗಿ ಮಾಡಿ, ಸಂಪತ್ತೊಂದೇ ಜೀವನದ ಅಮೂಲ್ಯ ಸಾಧನ ಎಂಬ ಮಾನಸಿಕತೆಯನ್ನು ಮೂಡಿಸಿಬಿಟ್ಟಿದೆ.

ನಾವು ಗುರುಕುಲ ಪದ್ಧತಿಯನ್ನು  ಮತ್ತೆ ತರಬಹುದೆಂದು ನಿಮಗೆ ಅನಿಸುತ್ತದೆಯೇ?

ಗುರುಕುಲ ಶಿಕ್ಷಣ ಪದ್ಧತಿ ನಿಜಕ್ಕೂ  ಅತ್ಯುತ್ತಮ.  ಆದರೆ  ಅದನ್ನು  ಅನುಷ್ಠಾನಕ್ಕೆ ತರಲು  ಸಮಯ ಹಿಡಿಯುತ್ತದೆ.  ಪಶ್ಚಿಮ ಈಗಾಗಲೇ ಇದನ್ನು  ಆರಂಭಿಸಿದೆ, ಆದರೆ ಗುರುಕುಲದ ಹೆಸರಿನಲ್ಲಲ್ಲ.  ಒಂದು ಗುಂಪು ವಿದ್ಯಾರ್ಥಿಗಳಿಗೆ ಒಬ್ಬನೇ  ಶಿಕ್ಷಕನಿರುವ  ಪದ್ಧತಿಯನ್ನು  ಅವರು ಅಳವಡಿಸಿದ್ದಾರೆ.  ನಮಗೂ ಕೂಡ ಗುರುಕುಲ ಶಿಕ್ಷಣ ಪದ್ಧತಿ ಸಾಧ್ಯವಿದೆ. ಆದರೆ ಸಮಯ  ಬೇಕಾಗುತ್ತದೆ. ನಮ್ಮಲ್ಲಿ  ಈ ಪದ್ಧತಿಯನ್ನು  ಅನುಷ್ಠಾನಿಸುವ  ಸೂಕ್ತ ಶಿಕ್ಷಕರ ಕೊರತೆಯಿದೆ.

ಇತ್ತೀಚಿನ ನಿಮ್ಮ ಲೇಖನವೊಂದರಲ್ಲಿ  ನೀವು  ಭಾರತದ ಮುಸ್ಲಿಮರು ಅವರ ಹಿಂದೂ ಪೂರ್ವಜರನ್ನು  ಒಪ್ಪಿಕೊಳ್ಳಬೇಕೆಂದು ಹೇಳಿದಿರಿ. ಮತ್ತು  ಆಗಮಾತ್ರ ಅವರನ್ನು ಹಿಂದೂ ಸಮಾಜಕ್ಕೆ  ಸೇರಿಸಿಕೊಳ್ಳಬಹುದೆಂದಿರಿ. ಇದನ್ನು ಅನುಷ್ಠಾನಕ್ಕೆ ತರಲು  ನೀವು  ಯಾವುದಾದರೂ ವಿಧಾನದ ಬಗ್ಗೆ ಯೋಚಿಸಿದ್ದೀರಾ?

ನನಗೆ ಅಧಿಕಾರವಿಲ್ಲದೆ ನಾನಿದನ್ನು ಅನುಷ್ಠಾನಕ್ಕೆ ತರಲು ಸಾಧ್ಯವಿಲ್ಲ. ಇದನ್ನು ಅನುಷ್ಠಾನಕ್ಕೆ ತರಬೇಕಾದರೆ ಒಂದು ಸಂಸದೀಯ ಮಂಡಳಿಯ ಅಗತ್ಯವಿದೆ.  ಮತದಾನದ  ಸಂಪೂರ್ಣ ಮೂಲಭೂತ ಹಕ್ಕು ಇಲ್ಲ. ಈಗಲೂ  ನಿಮಗೊಂದು ವಾಸಸ್ಥಳ ಇಲ್ಲದಿದ್ದರೆ ನೀವು ಮತ ಚಲಾಯಿಸಲಾರಿರಿ. ಹಾಗಾಗಿ ನಿರ್ಬಂಧಗಳಿವೆ.  ನೀವು ನಿಮ್ಮ ಹಿಂದೂಸ್ಥಾನಿ ಗುರುತನ್ನು  ಸ್ವೀಕರಿಸಿ. ಹಾಗೆ  ಮಾಡುವುದು ಸಂವಿಧಾನಬಾಹಿರವಲ್ಲ.  ಆದರೆ ಇದಕ್ಕೂ ಕೂಡ ಕಾನೂನು ಅಂಗೀಕಾರವಾಗಬೇಕು. ಹಾಗಾಗಲು ನೀವು   ಅಧಿಕಾರದಲ್ಲಿ ಇರಬೇಕಾದ ಅಗತ್ಯವಿದೆ.

ಇನ್ನೊಂದು ಮುಖ್ಯ ವಿಷಯವೆಂದರೆ,  ಹಿಂದುಗಳ ಸಾರ್ವತ್ರಿಕ ಮತಗಳು.  ಶೇ. ೮೩ ಅಲ್ಲದಿದ್ದರೂ ಕನಿಷ್ಠ ಶೇ. ೪೦ರಷ್ಟು ಮತಗಳು ಒಂದು ಹಿಂದೂ ಪಕ್ಷದ ಪರವಾಗಿ ಚಲಾವಣೆಗೊಂಡಾಗ ಆಗ ಬದಲಾವಣೆಯನ್ನು ತರಬಹುದು.  ವಿಶ್ವಾಸಾರ್ಹ, ಹಿಂದುತ್ವದ ಬದ್ಧತೆ ಆಧಾರದ ಲೋಕಸಭೆ ರೂಪುಗೊಂಡರೆ ಹಿಂದೂ ಸಮಾಜದಲ್ಲಿ ಬದಲಾವಣೆಯನ್ನು  ತರಬಹುದು.

ಕಳೆದ ಶತಮಾನದಲ್ಲಿ  ಆರ್ಥಿಕತೆಯ ಸಾಮಾಜಿಕ ರೂಪವೇ  ವಿನಾಶವಾಗುತ್ತಿರುವುದನ್ನು ನಾವು ನೋಡಿದ್ದೇವೆ.  ರಷ್ಯಾ ಮತ್ತು ಚೀನಾ ಅದೇ ಹಾದಿ ಹಿಡಿದಿದೆ. ಅಮೆರಿಕದಲ್ಲಿ  ಬಂಡವಾಳಶಾಹಿ ಮತ್ತು ಕಾರ್ಪೊರೇಟ್ ಕೇಂದ್ರಿತ ಆರ್ಥಿಕತೆ ವಿರುದ್ಥ ಪ್ರತಿಭಟನೆಗಳೂ ಕಂಡುಬಂದಿವೆ.  ಒಬ್ಬ ಆರ್ಥಿಕ ತಜ್ಞನಾಗಿ ಇದಕ್ಕೆ ಏನು ಕಾರಣ ಎಂದು  ನೀವು ಹೇಳುತ್ತೀರಿ? ನೀವು ಸೂಚಿಸುವ ಪರ್ಯಾಯವೇನು?

ನಾನು ಸೂಚಿಸುವ ಪರ್ಯಾಯವೆಂದರೆ, ಮತ್ತೆ ಅದೇ ಏಕಾತ್ಮ  ಮಾನವತಾವಾದ. ಪಶ್ಚಿಮದಲ್ಲಿ  ಚಿಂತೆ ವ್ಯಾಪಿಸಿದೆ. ಅಲ್ಲಿನ  ಆರ್ಥಿಕ ಪತನಕ್ಕೆ  ಜನರು ಭೌತಿಕವಾದ ಬೆನ್ನತ್ತಿರುವುದೇ ಕಾರಣ.  ಪ್ರತಿಯೊಬ್ಬ ಬಂಡವಾಳ ಹೂಡಿಕೆದಾರರು,  ಬ್ಯಾಂಕರ್‌ಗಳು ಇತ್ಯಾದಿ ಹಣ ಗಳಿಸಲು  ಹತ್ತಿರದ ದಾರಿಯನ್ನೇ  ಹುಡುಕುತ್ತಿರುತ್ತಾರೆ.  ಭೌತಿಕವಾದವನ್ನೇ ನೆಚ್ಚಿಕೊಂಡಿರುವ ಪಾಶ್ಚಿಮಾತ್ಯ ಸಮಾಜಕ್ಕೆ ಹಣವೇ  ಸರ್ವಸ್ವ. ಹಣಕ್ಕೆ ಅವರು ಕಡಿಮೆ ಪ್ರಾಧಾನ್ಯತೆ ನೀಡಿ ಜ್ಞಾನವನ್ನೂ  ಅರಸುತ್ತಾ ಹೊರಟಲ್ಲಿ  ಅವರೆಂದೂ ದುಃಖಪಡಬೇಕಾದ ಪ್ರಮೇಯವಿಲ್ಲ. ಅಗತ್ಯಕ್ಕಿಂತ ಹೆಚ್ಚು ಹಣ ನೀವು ಸಂಪಾದಿಸಿದ್ದರೆ ಅದನ್ನು ದಾನವಾಗಿ ನೀಡಿ. ಆಗ  ನಿಮಗೆ ಗೌರವ ಸಹಜವಾಗಿ ಸಿಗುತ್ತದೆ.

ಭೌತಿಕವಾದ ಹಾಗೂ  ಆಧ್ಯಾತ್ಮಿಕತೆ ಎರಡನ್ನೂ   ಸೂಕ್ತ ರೀತಿಯಲ್ಲಿ ಬೆರೆಸಿದ ಸಮಾಜವೇ  ಆದರ್ಶ ಸಮಾಜ. ಜನಸಂಘದ ಚಿಂತಕ ದೀನದಯಾಳ್ ಉಪಾಧ್ಯಾಯ ಇದೇ ಹಿನ್ನೆಲೆಯಲ್ಲಿ ‘ಏಕಾತ್ಮ ಮಾನವತಾವಾದ’ ಎಂಬ ಹೊಸ ಸಿದ್ಧಾಂತವನ್ನು ಮಂಡಿಸಿದರು. ವ್ಯಕ್ತಿಯೊಬ್ಬ ಹೊಂದಿರುವ ಸಂಪತ್ತಿನಿಂದಲೇ ಆತನಿಗೆ ಗೌರವ ಸಿಗುತ್ತದೆ ಎನ್ನುವುದು ತಪ್ಪುಕಲ್ಪನೆ.

ಹಾಗಾಗಿ ಹಣಗಳಿಕೆಯೊಂದೇ ಜೀವನದ  ಗುರಿ ಎಂಬ ಪಾಶ್ಚಿಮಾತ್ಯರ ಧೋರಣೆ  ಬದಲಾಗಬೇಕು.  ಹಣದ ಬಗ್ಗೆ ಇರುವ ವಿಪರೀತ ಮೋಹ ನಿವಾರಣೆಯಾಗಬೇಕು.  ಭಾರತದ ಆಶ್ರಮಗಳಿಗೆ ವಿದೇಶೀಯರು ಆಗಾಗ ಎಡತಾಕುವುದು ಇದೇ ಕಾರಣಕ್ಕೆ. ಪುಟ್ಟಪರ್ತಿಯ ಸಾಯಿಬಾಬಾ ಆಶ್ರಮ, ಶ್ರೀ ಶ್ರೀ ರವಿಶಂಕರ ಗುರೂಜಿ ಆಶ್ರಮಗಳಿಗೆ ವಿದೇಶೀಯರು ಲಗ್ಗೆ ಹಾಕುತ್ತಿರುವುದು ಇದೇ ಕಾರಣಕ್ಕೆ. ಹಣವೊಂದರಿಂದಲೇ ಸಮಾಧಾನ, ನೆಮ್ಮದಿ ಸಿಗುವುದಿಲ್ಲವೆಂಬುದನ್ನು ಅವರೀಗ ಅರಿತುಕೊಂಡಿದ್ದಾರೆ.  ನೋಡಿ…. ಪಶ್ಚಿಮದಲ್ಲಿ ಏನಾಗುತ್ತಿದೆ – ಜೂಲಿಯಾ ರಾರ್ಬಟ್ಸ್ ಹಿಂದೂ ಧರ್ಮಕ್ಕೆ ಪರಾವರ್ತನಗೊಂಡಿದ್ದಾರೆ.  ಅದೇ ರೀತಿ ಸ್ಟೀವ್ ಜಾಬ್ಸ್ ಕೂಡ.  ಪಶ್ಚಿಮದಲ್ಲಿ  ಯೋಗವನ್ನು ಏಕೆ  ಕಲಿಸಲಾಗುತ್ತಿದೆ ಎಂಬುದು ನಿಮಗೆ ಗೊತ್ತೆ? ಅಮೆರಿಕದಲ್ಲಿ  ಸಂಸ್ಕೃತವನ್ನು ಏಕೆ ಬೋಧಿಸಲಾಗುತ್ತಿದೆ? ಇವೆಲ್ಲವನ್ನೂ  ನೋಡಿದಾಗ, ನಮ್ಮ ಜನರಲ್ಲಿ  ಅರಿವು ಮೂಡಿಸುವ  ಅಗತ್ಯ ಎದ್ದುಕಾಣುತ್ತಿದೆ.

ನೀವು ಸೋನಿಯಾ ಗಾಂಧಿಯವರ ಹಿನ್ನೆಲೆ, ಆಕೆಯ ಅರಾಷ್ಟ್ರೀಯತೆ ಇತ್ಯಾದಿ ಬಗ್ಗೆ ಸಾಕಷ್ಟು ಬರೆದಿದ್ದೀರಿ ಹಾಗೂ ಮಾತನಾಡಿದ್ದೀರಿ. ಆದರೂ ಸಾರ್ವಜನಿಕರು ಈ ಬಗ್ಗೆ ಪ್ರತಿಕ್ರಿಯಿಸುತ್ತಿಲ್ಲವಲ್ಲ?

ಅವರೇಕೆ ಪ್ರತಿಕ್ರಿಯಿಸಬೇಕು? ಅಷ್ಟಕ್ಕೂ ವಿರೋಧ ಪಕ್ಷ ಪ್ರತಿಕ್ರಿಯಿಸಿದೆಯೇ? ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಆಕೆ ಇಂಗ್ಲಿಷ್‌ನಲ್ಲಿ ಪದವಿ ಪಡೆದಿದ್ದಾಳೆಂಬ  ಆಕೆಯ ಅಫಿಡವಿಟ್ ಬಗ್ಗೆ ನಾನು ಸವಾಲು ಹಾಕಿದ್ದೇನೆ. ಕೇಂಬ್ರಿಡ್ಜ್ ವಿವಿಯಲ್ಲಿ ಸೋನಿಯಾ ಹೆಸರಿನ ಯಾವುದೇ ವಿದ್ಯಾರ್ಥಿ ಇರಲಿಲ್ಲ ಎಂಬ ಆ ವಿವಿಯ ಪತ್ರವನ್ನೇ ವಿರೋಧ ಪಕ್ಷಗಳಿಗೆ ಕೊಟ್ಟಿರುವೆ.  ಆದರೆ ಯಾರಾದರೂ ಒಬ್ಬರು ಈ ಬಗ್ಗೆ ಮಾತನಾಡಿದ್ದಾರಾ?

ಹಾಗಾಗಿ ಸಾರ್ವಜನಿಕರನ್ನೇಕೆ ದೂಷಿಸುತ್ತೀರಿ? ನಿಮ್ಮ ಸಾಂಸದರು ಇಂತಹ ಪ್ರಶ್ನೆಗಳನ್ನು  ಎತ್ತಲು  ಸಿದ್ಧರಿಲ್ಲ.  ಹೀಗಿರುವಾಗ ಸಾರ್ವಜನಿಕರೇಕೆ ಅಂತಹ ಪ್ರಶ್ನೆಗಳನ್ನೆತ್ತುತ್ತಾರೆ ? ಮಾಧ್ಯಮಗಳೂ ಕೂಡ ಇಂತಹ ಸುದ್ದಿಯನ್ನು ಪ್ರಕಟಿಸಲು  ಅಂಜುತ್ತವೆ.

 ಇಂತಹದೊಂದು ಸ್ಥಿತಿಗೆ ಏನು ಕಾರಣವಿರಬಹುದು?

ಬ್ಲಾಕ್‌ಮೇಲ್ ತಂತ್ರಗಾರಿಕೆ. ಸೋನಿಯಾಗಾಂಧಿ ಜನರನ್ನು ಬ್ಲಾಕ್‌ಮೇಲ್ ಮಾಡುತ್ತಾರೆ. ಆಕೆ ಒಬ್ಬ ನಿಷ್ಕರುಣಿ ಹೆಂಗಸು.  ನಿಮಗೆ ಏನನ್ನಾದರೂ ಮುಚ್ಚಿಟ್ಟುಕೊಳ್ಳಬೇಕೆಂದಿದ್ದಾಗ ಮಾತ್ರ ನೀವು  ಬ್ಲಾಕ್‌ಮೇಲ್ ಮಾಡುತ್ತೀರಿ.  ಆಕೆ ನನ್ನನ್ನು ಮಾತ್ರ ಬ್ಲಾಕ್‌ಮೇಲ್ ಮಾಡಲು ಸಾಧ್ಯವಿಲ್ಲ.

ಆದ್ದರಿಂದ ನಾಗರೀಕರ ಪಾಲಿಗೆ ಒಂದು ಆಶಾಕಿರಣ ಇದೆಯಲ್ಲವೆ?

ಖಂಡಿತ ! ನಾನು  ಆಕೆಯನ್ನು ಸುಮ್ಮನೇ ಬಿಡಲಾರೆ. ಚಿಂತಿಸಬೇಡಿ. (ನಗು) ನಾನು  ಒಬ್ಬ  ಪ್ರಾಧ್ಯಾಪಕನಾಗಿ ಆಕೆಯನ್ನು  ಹೇಗೆ ಪಳಗಿಸಬೇಕೆಂಬ ತಂತ್ರಗಾರಿಕೆಯನ್ನು  ಚೆನ್ನಾಗಿ ಅರಿತಿರುವೆ.

2ಜಿ  ಹಗರಣ ಕುರಿತು….. ಇದನ್ನು ಕೈಗೆತ್ತಿಕೊಳ್ಳಬೇಕೆಂದು ನಿಮಗೆ ಪ್ರಚೋದನೆ ಆಗಿದ್ದು ಹೇಗೆ?

ಪ್ರಧಾನ ಮಂತ್ರಿಯ ಖಾಸಗೀ ಕಾರ್ಯದರ್ಶಿ, ಒಬ್ಬ ಹಿರಿಯ ಐಎಎಸ್ ಅಧಿಕಾರಿ ಒಮ್ಮೆ ರಾತ್ರಿವೇಳೆ ನನ್ನನ್ನು ನೋಡಲು  ಬಂದರು.  ಅವರ ಹೃದಯ  ಒಡೆದುಹೋಗಿತ್ತು. ಟೆಲಿಕಾಂ ವಲಯದಲ್ಲಿ  ನಾನು ಕಣ್ಣಾರೆ ಕಂಡ ವಿದ್ಯಮಾನ ನೋಡಿದರೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಅನಿಸುತ್ತದೆ ಎಂದು ಅವರು ಹೇಳಿದರು.  ನಾನು  ಆಸಕ್ತಿ ವಹಿಸಿದ್ದು ಇದೇ ಕಾರಣಕ್ಕಾಗಿ.  ಪ್ರಧಾನಿಗೆ ಈ ಕುರಿತು ೫ ಪತ್ರಗಳನ್ನು ಕಳಿಸಿದೆ. ಆದರೆ ನನ್ನ ಸ್ನೇಹಿತರಾದ ಪ್ರಧಾನಿ ಒಂದಕ್ಕೂ ಉತ್ತರಿಸಲಿಲ್ಲ. ಆಗ ನನಗೆ ಎಲ್ಲೋ  ಗಂಭೀರವಾದ ಎಡವಟ್ಟಾಗಿದೆ ಎಂದೆನಿಸಿತು.  ಹಾಗಾಗಿ ನ್ಯಾಯಾಲಯಕ್ಕೆ  ಹೋದೆ.

ಈ ನಡುವೆ  ೬೦ ಸಾವಿರ ಕೋಟಿ ಹಣವನ್ನು ಲಂಚವಾಗಿ ವಿತರಿಸಿದ ಸುದ್ದಿಯನ್ನು ಸಂಗ್ರಹಿಸಿದೆ.  ರಾಜಾ, ಕನಿಮೋಳಿ, ಕರುಣಾನಿಧಿ ಮತ್ತು ಚಿದಂಬರಂ ಇದರಲ್ಲಿ ಪಾಲು ಪಡೆದಿದ್ದರು.  ಆದರೆ  ಸೋನಿಯಾ  ಗಾಂಧಿ ೩೬ ಸಾವಿರ ಕೋಟಿ ರೂ. ಪಡೆದಿದ್ದರು.  ಹೀಗೆ ದೇಶದ ಹಣ ಖಾಸಗೀ ವ್ಯಕ್ತಿಗಳ ಕೈಗೆ  ಹೋದರೆ ನಮ್ಮ ಸರ್ವನಾಶ ನಿಶ್ಚಿತ.

ಲಂಚ  ನೀಡಿದ ಎರಡು ಕಂಪೆನಿಗಳಾದ ಇಟಿಸಲಾಟ್ ಮತ್ತು ಟೆಲೆನರ್ – ಇವೆರಡೂ ಕಪ್ಪುಪಟ್ಟಿಗೆ ಸೇರಿದ ಕಂಪೆನಿಗಳು.  ಇಟಿಸಲಾಟ್ ಒಂದು ಐಎಸ್‌ಐ ಕಂಪೆನಿ. ಮತ್ತು ಟೆಲೆನಾರ್ ಒಂದು ಚೀನಾದ ಮಿಲಿಟರಿ ಕಂಪೆನಿ.  ಈ ಎರಡೂ ಕಂಪೆನಿಗಳೊಂದಿಗೆ ಯಾವುದೇ ವ್ಯವಹಾರ ಮಾಡಕೂಡದೆಂದು ಗೃಹಸಚಿವಾಲಯ ಸ್ಪಷ್ಟಪಡಿಸಿತ್ತು.  ಅಲ್ಲದೆ, ಹಣ ವಿತರಿಸಿದ ಸಾದಿಕ್ ಬಾಷಾನನ್ನು ಕೊಲೆ ಮಾಡಲಾಯಿತು.  ಇದು  ನನ್ನನ್ನು ಈ ಬಗ್ಗೆ  ಮುಂದುವರೆಯುವಂತೆ ಪ್ರಚೋದಿಸಿತು. ಭಾರತದ ಇತಿಹಾಸದಲ್ಲಿ , ಅಷ್ಟೇಕೆ, ಜಾಗತಿಕ ಇತಿಹಾಸದಲ್ಲೆ ಇದೊಂದು ಅತಿದೊಡ್ಡ ಭ್ರಷ್ಟಾಚಾರ.

 ಈ ಹಣವನ್ನು  ವಾಪಸ್ ಪಡೆಯಲು  ಏನಾದರೂ ಮಾರ್ಗವಿದೆಯೆ?

ಖಂಡಿತ. ಅವರ  ಆಸ್ತಿಗಳನ್ನು  ಮುಟ್ಟುಗೋಲು ಹಾಕಿ . ಒಮ್ಮೆಗೆ ಆಕೆಗೆ ಶಿಕ್ಷೆಯಾದರೆ  ನಾನು  ಇನ್ನೊಂದು ಕೇಸು ಹಾಕಿ ಆಕೆಯ ಆಸ್ತಿಯನ್ನು ಮುಟ್ಟುಗೋಲು ಹಾಕುವೆ. ಜಗತ್ತಿನಾದ್ಯಂತ ಇರುವ ಆಕೆಯ ಎಲ್ಲ ಆಸ್ತಿಯನ್ನೂ  ಮುಟ್ಟುಗೋಲು ಹಾಕಲಾಗುವುದು.  ಆದರೆ  ಆಗ  ಆಕೆ ನಾನು  ಒಬ್ಬ ಇಟಾಲಿಯನ್ ಪ್ರಜೆ ಎನ್ನುತ್ತಾಳೆ.  (ನಗು)

ಆದರೆ ಶತ್ರುಗಳು  ಬಲಶಾಲಿಗಳಾಗಿದ್ದರೆ? ಸೋನಿಯಾ ಗಾಂಧಿಗೆ ಕ್ರಿಶ್ಚಿಯನ್ ಸಂಘಟನೆಗಳು ಬಲವಾಗಿ ಬೆಂಬಲಿಸಿವೆ ಎಂದು  ನೀವೇ ಹೇಳುತ್ತಿರುತ್ತೀರಿ. ಆಕೆಯ ವಿರುದ್ಧ ನಿಮ್ಮ ಪ್ರಚಾರವನ್ನು  ‘ವೈಯಕ್ತಿಕ ದ್ವೇಷ ’ವೆಂದು ಬಣ್ಣ ಕಟ್ಟಲಾಗುತ್ತಿದೆಯಲ್ಲ?

ಒಮ್ಮೆ  ಕೇರಳದ ಮಲ್ಲಪುರಂಗೆ  ನನ್ನನ್ನು ಆಹ್ವಾನಿಸಲಾಗಿತ್ತು. ರಾಮಾಯಣವನ್ನು  ಮಲೆಯಾಳಕ್ಕೆ ಅನುವಾದಿಸಿದ ಪ್ರಸಿದ್ಧ ಕವಿ ಇರುತ್ತಾಚನ್ ಅವರ  ಪ್ರತಿಮೆ ಅನಾವರಣದ ಕಾರ್ಯಕ್ರಮ ಅದಾಗಿತ್ತು.  ಆದರೆ ಆ ಪ್ರತಿಮೆ ಅನಾವರಣಕ್ಕೆ ಅನುಮತಿ ನಿರಾಕರಿಸಲಾಯಿತು.  ಅದೊಂದು ಮೂರ್ತಿಪೂಜೆ ಆಗಿರುವುದರಿಂದ ಅನುಮತಿ ಕೊಡುವುದಿಲ್ಲವೆಂದು ಅಲ್ಲಿನ ಆಡಳಿತ ಹೇಳಿತ್ತು. ೨೦ ವರ್ಷಗಳಿಂದ ಮಲ್ಲಪುರಂನಲ್ಲಿ ಹಿಂದುಗಳು ಸಾರ್ವಜನಿಕ ಸಭೆ ಮಾಡುವುದಕ್ಕೆ  ಅವಕಾಶ ನೀಡಿರಲಿಲ್ಲ.  ನಮ್ಮದೇ ನೆಲದಲ್ಲಿ ನಾವೀಗ ದಾರ್-ಉಲ್ ಇಸ್ಲಾಂ ಶಾಸನ ಹೊಂದಿದ್ದೇವೆ. ಆದ್ದರಿಂದ ನನ್ನನ್ನು  ಭಾಷಣ ಮಾಡಲು  ಕರೆದಿದ್ದರು.  ನನಗೆ  ಸಭೆ ನಡೆಸಲು  ನಿರಾಕರಿಸಿದರೆ ನಾನು  ಕೋರ್ಟಿಗೆ ಹೋಗುವೆನೆಂಬುದು ಅವರಿಗೆ ಗೊತ್ತಿತ್ತು. ನಾನು  ಸಾರ್ವಜನಿಕ ಸಭೆ ನಡೆಸಿಯೇಬಿಟ್ಟೆ. ಮುಸ್ಲಿಮರು ಬಹುಸಂಖ್ಯಾತರಾಗಿರುವ  ನಮ್ಮ ದೇಶದ ಭಾಗವೊಂದರಲ್ಲಿ ಅಷ್ಟೊಂದು ಭಯ ಹರಡಿರುವುದನ್ನು  ನಾನು ನೋಡಿರಲಿಲ್ಲ.

ಅದೇನೇ ಇರಲಿ, ತಮಗೇನು ಬೇಕೆಂಬ ಬಗ್ಗೆ ಮುಸ್ಲಿಮರಿಗೆ ಸ್ಪಷ್ಟತೆ ಇದೆ.  ನಾನು ಅವರನ್ನು  ದೂಷಿಸುವುದಿಲ್ಲ.  ಆದರೆ ಬಿಜೆಪಿ ಸೇರಿದಂತೆ ಹಿಂದುಗಳು ಗೊಂದಲಕ್ಕೊಳಗಾಗಿದ್ದಾರೆ. ಅವರೆಲ್ಲರೂ ಸೂಪರ್ ಸೆಕ್ಯುಲರ್ ಆಗಲು ಬಯಸುತ್ತಿದ್ದಾರೆ.  ಇದೇ ಕಾರಣಕ್ಕಾಗಿ ನಾನು  ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ವಿಶ್ವ ಹಿಂದೂ ಪರಿಷತ್ ಜೊತೆ ಕೆಲಸ ಮಾಡುತ್ತಿರುವೆ.  ಹಿಂದುಗಳು ಸಮ್ಮತಿಸಿರುವುದರಿಂದಲೇ ಜಾತ್ಯತೀತತೆ ಅಸ್ತಿತ್ವದಲ್ಲಿದೆ.  ನಾಳೆ ಹಿಂದುಗಳು ನಿರ್ಧರಿಸಿದರೆ ಈ ಜಾತ್ಯತೀತತೆ ಇರುವುದು ಸಾಧ್ಯವಿಲ್ಲ.  ಇಸ್ಲಾಮಿಕ್ ಭಯೋತ್ಪಾದನೆಗೆ ಉತ್ತರಿಸಲೇಬೇಕು.

ಹಿಂದುಗಳು ಹಾಗೂ ಮುಸ್ಲಿಮರಿಗೆ ಗೊತ್ತಿರದ ಅನೇಕ ಸಂಗತಿಗಳಿವೆ.  ಮಸೀದಿ ಒಂದು ಧಾರ್ಮಿಕ ಸ್ಥಳವಲ್ಲ. ಅದೊಂದು ನಮಾಜ್ ಮಾಡಲು ಇರುವ ಕಟ್ಟಡ, ಅಷ್ಟೆ. ನಮಾಜನ್ನು ಎಲ್ಲಿ ಬೇಕಾದರೂ ಪಠಿಸಬಹುದು.  ಹಾಗಾಗಿ ದೇಗುಲದ  ತಲೆಯ ಮೇಲೆ ಮಸೀದಿಯೊಂದಿದ್ದರೆ ಅದನ್ನು  ಅಲ್ಲಿಂದ ತೊಲಗಿಸಲೇಬೇಕು.

ಹಿಂದುಗಳು ವಿರಾಟ್ ಹಿಂದೂಗಳಾಗಬೇಕು.  ಇದರರ್ಥ ಹಿಂದುಗಳು ಯಾರದೇ ವಿರೋಧವಾಗಿ ಅಥವಾ  ಯಾವುದರ ವಿರೋಧವಾಗಿ  ನಡೆದುಕೊಳ್ಳಬೇಕೆಂದಲ್ಲ. ನಿಮ್ಮ ನಂಬಿಕೆಯನ್ನು ರಕ್ಷಿಸಿಕೊಳ್ಳಬೇಕು.  ಸಂಸ್ಕೃತ ಕಲಿಯಿರಿ. ನಮ್ಮ ದೇಶದ ನೈಜ ಇತಿಹಾಸ ಅರಿಯಿರಿ. ನಿಮ್ಮ  ಮೇಲೆ ಆಕ್ರಮಣ ನಡೆದರೆ ನೀವು ತಿರುಗಿ ಆಕ್ರಮಣ ಮಾಡಿ.  ಹಿಂಜರಿಯಬೇಡಿ.  ನಿಮ್ಮ ಮರು ಆಕ್ರಮಣ ಹತ್ತುಪಟ್ಟು ಹೆಚ್ಚಿನದಾಗಿರಬೇಕು.

ಅಣ್ಣಾ ಹಜಾರೆಯವರನ್ನು  ಮೊದಲು ಆರೆಸ್ಸೆಸ್ ಏಜೆಂಟ್ ಎಂದು  ದಿಗ್ವಿಜಯ ಸಿಂಗ್ ದೂಷಿಸಿದರು. ಅನಂತರ ಆ ಹೇಳಿಕೆಯನ್ನು ಹಿಂದೆ ಪಡೆದರು.  ಮತ್ತೆ ಇದೀಗ ಅವರು  ಅದೇ ಹೇಳಿಕೆ ನೀಡಿದ್ದಾರೆ.  ಹೀಗೇಕೆ?

ಅಣ್ಣಾ ಹಜಾರೆ  ಸ್ವತಃ ತಾನೊಬ್ಬ  ಸೆಕ್ಯುಲರ್, ಒಬ್ಬ  ಜನನಾಯಕನೆಂದು ಬಿಂಬಿಸಿಕೊಳ್ಳಲು ಇಚ್ಛಿಸಿದರು. ದಿಗ್ವಿಜಯ ಸಿಂಗ್ ಈ ವಿಷಯಕ್ಕೆ ಬಣ್ಣ ಹಚ್ಚಲು  ವೈಭವೀಕರಿಸಲು  ಯತ್ನಿಸಿದರು. ಏಕೆಂದರೆ ಅಣ್ಣಾ ಹಜಾರೆಯವರ ಅನುಯಾಯಿಗಳೆಲ್ಲರೂ ನಕ್ಸಲ್‌ವಾದಿಗಳು, ಮಾವೋವಾದಿಗಳು ಹಾಗೂ ಎಡಪಂಥೀಯರು. ಪ್ರಶಾಂತ್ ಭೂಷಣ್, ಅರವಿಂದ್ ಕೇಜ್ರಿವಾಲ್, ಸ್ವಾಮಿ ಅಗ್ನಿವೇಶ್ ಈಗ ತಂಡದಿಂದ ಹೊರಗಿದ್ದಾರೆ.  ತಂಡದಲ್ಲಿರುವ ಏಕೈಕ ಸಮರ್ಥ ವ್ಯಕ್ತಿಯೆಂದರೆ ಕಿರಣ್ ಬೇಡಿ.  ಆರೆಸ್ಸೆಸ್ ಕುರಿತು ದಿಗ್ವಿಜಯ ಸಿಂಗ್ ಅವರ  ಹೇಳಿಕೆಯು ಅಣ್ಣಾ ತಂಡಕ್ಕೆ ಹುಷಾರಾಗಿರಿ ಎಂಬ ಎಚ್ಚರಿಕೆಯಾಗಿದೆ. ಅಣ್ಣಾ ಹಜಾರೆಯವರನ್ನು ಆರೆಸ್ಸೆಸ್ ನಿಯಂತ್ರಿಸುತ್ತಿಲ್ಲ ಎಂಬ ಸಂಗತಿ ದಿಗ್ವಿಜಯ್‌ಗೆ ಗೊತ್ತಿಲ್ಲ

ಸಂದರ್ಶನ : ಶ್ರೀನಾಥ್ ಜೋಶಿ ಮತ್ತು ವಿನೀತಾ ಮೆನನ್

 

 

 

 

 

 

 

 

 

 

  • email
  • facebook
  • twitter
  • google+
  • WhatsApp

Related Posts

Articles

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

July 28, 2022
Articles

ದೇಶದ ಸುರಕ್ಷತೆಗಾಗಿ ಅಗ್ನಿಪಥ!

June 18, 2022
Articles

ಪಠ್ಯಪುಸ್ತಕಗಳು ಕಲಿಕೆಯ ಕೈದೀವಿಗೆಯಾಗಲಿ

Articles

ಒಂದು ಪಠ್ಯ – ಹಲವು ಪಾಠ

May 27, 2022
Articles

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

March 25, 2022
Articles

ಡಿವಿಜಿಯವರ ವ್ಯಾಸಂಗ ಗೋಷ್ಠಿ

March 17, 2022
Next Post
ಯೂತ್ ಫಾರ್ ಸೇವಾ ಕುರಿತು ವಿಜಯ ಕರ್ನಾಟಕ ವರದಿ

ಯೂತ್ ಫಾರ್ ಸೇವಾ ಕುರಿತು ವಿಜಯ ಕರ್ನಾಟಕ ವರದಿ

Comments 1

  1. H R REDDY says:
    11 years ago

    Though I am proud of being Hindu and appreciate Dr.Swamy and regard him as a bold leader for Hindu cause I want to suggest that we have to make corrections in our culture rather the behavior of different sections of the Hindu community.To quote one example is the controversy over MADE SNANA. It may be practice since many centuries but how this can be scientifically explained? When we are fighting to sustain our culture which has several noteworthy practices we will be losing many classes of the Dharma to other religions when they are very seriously working to dent the SANATANA DHRMA. According to Vatican Insider the Catholicism is growing at the rate of 31 thousand people per day,Islam at the rate of 79 thousand per day and Hinduism at the rate of 37 thousand per day. There may be increase in Hindus but the seriousness of the monotheists compared to us will one day may dent the Hindu population. At present many atheists and non religious people are more in number who prefer to join. Unless we change our practices which downgrade the taged lower castes and bring in modifications in our religious practices we may also start losing. For this the preachers and the priests have to think over. In the temples we do not have a discipline, systematic way of doing poojas and cleanliness. WE have to cut down many rituals to the minimum and cater to the devotees with courtesy. For this the priestly class has to think seriously.

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

ವೀರಶೈವ ಸಮುದಾಯ ಹೊರಟಿದ್ದೆಲ್ಲಿಗೆ, ತಲುಪಿದ್ದೆಲ್ಲಿಗೆ?  : ಮೈ ಚ ಜಯದೇವ್

ವೀರಶೈವ ಸಮುದಾಯ ಹೊರಟಿದ್ದೆಲ್ಲಿಗೆ, ತಲುಪಿದ್ದೆಲ್ಲಿಗೆ? : ಮೈ ಚ ಜಯದೇವ್

April 29, 2011
ಹುಬ್ಬಳ್ಳಿ: 2012 ಜನವರಿ 27, 28, 29ರ ‘ಹಿಂದು ಶಕ್ತಿ ಸಂಗಮ’ ಶಿಬಿರಕ್ಕೆ ತೀವ್ರಗತಿಯ ಸಿದ್ಧತೆ

ಹುಬ್ಬಳ್ಳಿ: 2012 ಜನವರಿ 27, 28, 29ರ ‘ಹಿಂದು ಶಕ್ತಿ ಸಂಗಮ’ ಶಿಬಿರಕ್ಕೆ ತೀವ್ರಗತಿಯ ಸಿದ್ಧತೆ

December 29, 2011
RSS ABPS at Jaipur: Dr Manmohan Vadiya briefs Media

RSS ABPS at Jaipur: Dr Manmohan Vadiya briefs Media

August 25, 2019
ಕನ್ನಡ

ಕನ್ನಡ

September 1, 2010

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In