ಎಚ್ಎಸ್ಎಸ್ಎಫ್ ಏರ್ಪಡಿಸಿದ್ದ ‘ಪ್ರಕೃತಿ ವಂದನಾ’ ಕಾರ್ಯಕ್ರಮದಲ್ಲಿ ಆರೆಸ್ಸೆಸ್ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಅವರ ಉದ್ಬೋಧನ. ಮನೋರಂಜನೆಗಾಗಿ ನಾವು ಈ ದಿನವನ್ನು ಆಚರಿಸುತ್ತಿಲ್ಲ; ಸಂಪೂರ್ಣ ಪ್ರಕೃತಿಯ ಪೋಷಣೆಗಾಗಿ, ನಮ್ಮ ಜೀವನವನ್ನು ಸುಂದರವಾಗಿಸಲು, ಎಲ್ಲರ ಉನ್ನತಿಗಾಗಿ ನಾವು ಈ ಕಾರ್ಯಕ್ರಮವನ್ನು ಮಾಡಬೇಕಾಗಿದೆ ಎಂಬ ಸದ್ಭಾವನೆ ನಮ್ಮಲ್ಲಿರಬೇಕಿದೆ. ಡಾ. ಮೋಹನ್ ಭಾಗವತ್, ಆರೆಸ್ಸೆಸ್ ಸರಸಂಘಚಾಲಕರು ಆಗಸ್ಟ್ 30 ರಂದು ಹಿಂದೂ ಆಧ್ಯಾತ್ಮಿಕ ಸೇವಾ ಪ್ರತಿಷ್ಠಾನವು (ಹಿಂದೂ ಸ್ಪಿರಿಚುವಲ್‌ ಸೇವಾ ಫೇರ್) ಹಮ್ಮಿಕೊಂಡಿರುವ ಪರಿಸರ […]

ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ಜನವರಿ 15ರಿಂದ ಇಡೀ ದೇಶದಲ್ಲಿ ಆರಂಭವಾಗಿದೆ. ಇದು ಕೊರೊನಾದಿಂದಾಗಿ ಬೇಸತ್ತ ಜನರಿಗೆ ಹೊಸ ಸ್ಫೂರ್ತಿಯನ್ನುಂಟುಮಾಡಿದೆ. ಯುವಕರಿಗೆ ಇನ್ನಷ್ಟು ಕೆಲಸಮಾಡುವ ಉತ್ಸಾಹ ಹಾಗೂ ಹಿರಿಯರಿಗೆ ತಮ್ಮ ಕಾಲದಲ್ಲಿಯೇ ರಾಮ ಮಂದಿರದ ವಿಷಯವಾಗಿ ಘನ ನ್ಯಾಯಾಲಯ ನೀಡಿರುವ ತೀರ್ಪು, ನಂತರದಲ್ಲಿ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ, ಭವ್ಯ ಮಂದಿರ ಕಾರ್ಯ ನಡೆಯುತ್ತಿರುವುದು ಸಂತೃಪ್ತಿಯನ್ನು ನೀಡಿದೆ. ಅಭಿಯಾನದ ಆರಂಭ ದಿನವಾದ ಜನವರಿ 15ರಂದು ಹಲಸೂರಿನ ಆರೆಸ್ಸೆಸ್ ಸ್ವಯಂಸೇವಕರು ಕರಪತ್ರ […]

ಜನವರಿ ೧೫ರಿಂದ ಆರಂಭಗೊಂಡು ಫೆಬ್ರವರಿ ೫ ರ ವರೆಗೆ ನಡೆಯುವ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ ಇಂದು ಬಿಳಿಗ್ಗೆಯಿಂದ ದೇಶದೆಲ್ಲೆಡೆ ಆರಂಭಗೊಂಡಿದೆ. ರಾಷ್ಟ್ರಪತಿಗಳಾದ ಶ್ರೀ ರಾಮನಾಥ ಕೋವಿಂದ್ ಕೂಡ ನಿಧಿಗೆ ಧನಸಹಾಯ ಮಾಡಿದ್ದಾರೆ. ಆರೆಸ್ಸೆಸ್ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಅವರು ದೆಹಲಿಯಲ್ಲಿ ಪೂಜ್ಯ ಮಹಾಮಂಡಲೇಶ್ವರ ಕೃಷ್ಣ ಷಾ ವಿದ್ಯಾರ್ಥಿ ಜಿ ಅವರನ್ನು ಭೇಟಿ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಆರೆಸ್ಸೆಸ್ ಸರಕಾರ್ಯವಾಹರಾದ ಶ್ರೀ ಭೈಯ್ಯಾಜಿ […]

ಹರಿನಗರ ಕಾಲೋನಿಯ ಕೌಸಲ್ಯದೇವಿ ಅವರ ಉದಾರ ಕೊಡುಗೆಯಿಂದ ಪ್ರಾರಂಭವಾದ ಶ್ರೀ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ. ಅಯೋಧ್ಯೆಯಲ್ಲಿ ಭವ್ಯ ಶ್ರೀ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಮೊದಲ ದಿನ ಬೆಂಗಳೂರಿನ ಪುಟ್ಟೇನಹಳ್ಳಿ ಯ ಹರಿನಗರದ ಕಲೋನಿಯಲ್ಲಿ ಮೊದಲ ಮನೆಗೆ ಶ್ರೀರಾಮ್ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ಪ್ರಾಂತ ಕಾರ್ಯದರ್ಶಿ ನಾ.ತಿಪ್ಪೇಸ್ವಾಮಿ ಅವರು ಭೇಟಿ ಕೊಟ್ಟು ನಿಧಿಯನ್ನು ಕೇಳಿದರು. ಮನೆಯ ತಾಯಿ ಅಡುಗೆ ಮನೆಯ ಎಲ್ಲಾ ಡಬ್ಬಗಳನ್ನು […]

ಅರಣ್ಯ ನೆಡುತೋಪುಗಳ ಅಸಲಿಯತ್ತು ———————————————————————————– ಪರಿಸರ, ಅರಣ್ಯ, ಮಲೆನಾಡು, ಪಶ್ಚಿಮ ಘಟ್ಟ… ಮುಂತಾದ ವಿಚಾರಗಳಲ್ಲಿ ಆಸಕ್ತಿ ಇರುವವರೆಲ್ಲರೂ ಗಮನಿಸಿರಬಹುದಾದ ಒಂದು ವಿದ್ಯಮಾನವೆಂದರೆ ಪತ್ರಿಕೆಗಳಲ್ಲಿ ಆಗಾಗ ಬರುವ ಅಕೇಸಿಯಾ ವಿರೋಧಿ ಬರಹಗಳು. ಯಾವಾಗ ಅರಣ್ಯ ಇಲಾಖೆ ಈ ಅಕೇಸಿಯಾ ಸಸ್ಯವನ್ನು (Acacia Auriculiformis/Earpod Wattle) ಭಾರತದಲ್ಲಿ  ನೆಡುತೋಪು ಮಾಡಲು ಪರಿಚಯಿಸಿತೋ ಬಹುಶಃ ಆಗಿಂದಲೇ ಇದಕ್ಕೆ ವಿರೋಧವೂ ಹುಟ್ಟಿಕೊಂಡಿರಬಹುದು. ಆ ವಿರೋಧ ಒಂದು ಮಟ್ಟಿಗೆ ಸಮಂಜಸವೂ ಆಗಿದೆ ಯಾಕೆಂದರೆ ಅರಣ್ಯ ಇಲಾಖೆ ಈ […]

ಭಾಗ-1 ಕುವೆಂಪು ಅವರನ್ನು ಒಬ್ಬರು ’ಶಿಕ್ಷಣವನ್ನು ಮಾತೃಭಾಷೆಯಲ್ಲಿ ನೀಡಬೇಕೇ ಅಥವಾ ಇಂಗ್ಲಿಷ್ ನಲ್ಲಿ ಇರಬೇಕೇ’ ಎಂದು ಕೇಳಿದರು. ಅದಕ್ಕೆ ಅವರು ಒಂದೇ ಮಾತಿನಲ್ಲಿ ಹೇಳಿಬಿಟ್ಟರು:  ’ಶಿಕ್ಷಣವು ಯಾವ ಭಾಷೆಯಲ್ಲಿ ಇರಬೇಕೆಂಬುದು ಚರ್ಚೆ ಮಾಡುವ ವಿಷಯವೇ ಅಲ್ಲ. ಏಕೆಂದರೆ ಮಕ್ಕಳಿಗೆ ಮಾತೃಭಾಷೆ ಎಂದರೆ ತಾಯಿಯ ಹಾಲು ಇದ್ದ ಹಾಗೆ. ಮಗುವಿಗೆ ತಾಯಿಯ ಹಾಲು ಬೇಕಾ ಅಂತ ನೀವು ಪ್ರಶ್ನೆ ಕೇಳುತ್ತೀರಾ? ಕೇಳುವುದಿಲ್ಲ. ಆದ್ದರಿಂದ ಇದು ಚರ್ಚೆಯ ವಿಷಯ? ಅಲ್ಲ. ಮಕ್ಕಳಿಗೆ ಮಾತೃಭಾಷೆಯಲ್ಲೇ […]

ಅಯೋಧ್ಯೆಯ ಶ್ರೀರಾಮ ಮಂದಿರದ ಪುನರ್ನಿರ್ಮಾಣದ ಅಭಿಯಾನ ಅಂತಿಮ ಹಂತಕ್ಕೆ ಬಂದು ಮುಟ್ಟುತ್ತಿರುವ  ಸಂದರ್ಭದಲ್ಲಿ ರಾಷ್ಟ್ರೀಯತೆ, ಹಿಂದುತ್ವ ಜಾಗೃತಿಯ ಕುರಿತ ಚರ್ಚೆಗಳೂ ಹೆಚ್ಚಿವೆ. ಅದರಲ್ಲೂ ಮುಖ್ಯವಾಗಿ ಇತಿಹಾಸಕಾರ, ಪ್ರಾಧ್ಯಾಪಕ, ಸಂಶೋಧಕ, ಲೇಖಕ, ಸಾಹಿತಿ ಇತ್ಯಾದಿ ವಿವಿಧ ಹಣೆಪಟ್ಟಿಗಳಿದ್ದರೂ ಮೂಲದಲ್ಲಿ ರಾಷ್ಟ್ರ ವಿರೋಧಿಗಳೇ ಆಗಿರುವ ಕೆಲವು ನಗರನಕ್ಸಲರ ಅರೆ ಬೌದ್ಧಿಕ ಅರಚಾಟವಂತೂ ತಾರಕಕ್ಕೇರಿದೆ. ‘ಈ ದೇಶದಲ್ಲಿ ಈ ಹಿಂದೆ ನಾಶಗೊಂಡಿರುವ 35,000 ದೇವಾಲಯಗಳನ್ನು ಪುರ್ನಿರ್ಮಿಸ ಬೇಕು’ ಎಂಬ ಎಸ್.ಎಲ್.ಭೈರಪ್ಪನವರ ಹೇಳಿಕೆಗೆ ಕರ್ನಾಟಕದ ಹುಸಿ […]

ಸ್ವರ್ಗೀಯ ಪೂಜ್ಯ ಹರ್ಷಾನಂದಜೀ  ಮಹಾರಾಜರು ಓರ್ವ ಅಪರೂಪದ ಸಂತರು. ಅತ್ಯುನ್ನತ ಅಧ್ಯಾತ್ಮಿಕ ಸಾಧಕರು, ಉತ್ತಮ ಬರಹಗಾರು, ವಾಗ್ಮಿಗಳಾಗಿದ್ದವರು. ನೂರಾರು ಸಾಧಕರಿಗೆ, ಸಾಮಾನ್ಯರಿಗೆ ನಿರಂತರ ಮಾರ್ಗದರ್ಶನ ಮಾಡುತ್ತಿದ್ದವರು. ಸರಳವಾದಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಹಿಂದು ಧರ್ಮದ ಆಧ್ಯಾತ್ಮಿಕ ತತ್ವಗಳನ್ನು, ವಿಚಾರಗಳನ್ನ ಬರೆದು ಪ್ರಸ್ತುತ ಪಡಿಸಿದವರು. ಸ್ವಾಮಿ ವಿವೇಕಾನಂದರ ಜನ್ಮ ದಿನದಂದೇ ಇಹಲೋಕದ ಕರ್ತವ್ಯವನ್ನು ಮುಗಿಸಿದ ಮಹಾತ್ಮರು. ಅವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ ತನ್ನ ಶ್ರದ್ಧಾಂಜಲಿಯನ್ನು ಸಮರ್ಪಿಸುತ್ತದೆ.

ಬೆಂಗಳೂರು: ಬಸವನಗುಡಿಯ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಹರ್ಷಾನಂದ (91) ಅವರು ಇಂದು ವಿಧಿವಶರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮದಿನವಾದ (ಜ. 12) ಇಂದು ಮಧ್ಯಾಹ್ನ 1.05ರ ಸುಮಾರಿಗೆ ಸ್ವಾಮಿಜೀ ಹೃದಯಾಘಾತವಾಗಿ ಕೊನೆಯುಸಿರೆಳೆದಿದ್ದಾರೆ.  ರಾಮಕೃಷ್ಣ ಪರಮಹಂಸರ ಹಾಗೂ ಸ್ವಾಮಿ ವಿವೇಕಾನಂದರ ತತ್ತ್ವಾದರ್ಶಗಳನ್ನು ಎತ್ತಿಹಿಡಿದ ಸ್ವಾಮಿ ಹರ್ಷಾನಂದ ಅವರು ರಾಮಕೃಷ್ಣ ಆಶ್ರಮದ ಹಿರಿಯ ಸಂನ್ಯಾಸಿಯಾಗಿದ್ದರು. ರಾಮಕೃಷ್ಣ ಆಶ್ರಮದ 6ನೇ ಅಧ್ಯಕ್ಷರಾದ ಸ್ವಾಮಿ ವಿರಜಾನಂದರಿಂದ ಮಂತ್ರ ದೀಕ್ಷೆ ಸ್ವೀಕರಿಸಿ ಮಂಗಳೂರು,ಮೈಸೂರು, ಬೇಲೂರು ಮಠ ಹಾಗೂ […]

ಜನವರಿ 11, 1966 ಲಾಲ್ ಬಹದ್ದೂರ್ ಶಾಸ್ತ್ರಿಗಳು ತಾಷ್ಕೆಂಟ್ ನಲ್ಲಿ ತೀರಿಕೊಂಡರು. ಅವರ ಸಾವಿನ ವಿಷಯದ ಕುರಿತಾಗಿ ಕನ್ನಡದಲ್ಲಿ ಬಂದಿರುವ ಪುಸ್ತಕದ ಪರಿಚಯ ಲೇಖನ: ಪ್ರವೀಣ್ ಪಟವರ್ಧನ್ ನಮ್ಮ ದೇಶದಲ್ಲಿ ಹಲವಾರು ರಾಷ್ಟ್ರೀಯ ನಾಯಕರುಗಳು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಸಾವಿನ ಆಯಾಮದಲ್ಲಷ್ಟೇ ಅಲ್ಲದೆ, ಅದರ ಸುತ್ತ ಬೆಸೆದಿರುವಂತಹ ಅನೇಕ ವಿಷಯಗಳಲ್ಲಿ ಮೋಸ ವಂಚನೆಗಳನ್ನು ಕಾಣಬಹುದಾಗಿರುತ್ತದೆ. ಕಾಲಕ್ರಮೇಣ ಹೊಸ ಸತ್ಯಗಳು ಬೆಳಕು ಕಂಡಂತೆ ತಪ್ಪಿತಸ್ಥರ ಮುಖವಾಡ ಕಳಚಲಾರಂಭಿಸುತ್ತದೆ.  ಕಾಶ್ಮೀರದಲ್ಲಿ ಜನ ಸಂಘದ […]

ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮ ದಿನಾಚರಣೆಗಾಗಿ ಕೇಂದ್ರ ಸರ್ಕಾರ ಪ್ರಧಾನಿ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಈ ಸಮಿತಿಯಲ್ಲಿ ಗೃಹ ಸಚಿವ ಅಮಿತ್ ಷಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮಾಜಿ ಪ್ರಧಾನಿಗಳಾದ ಎಚ್.ಡಿ. ದೇವೇಗೌಡ, ಮನಮೋಹನ್ ಸಿಂಗ್ ಸೇರಿದಂತೆ ಹಲವು ಕೇಂದ್ರ ಸಚಿವರು, ಲೋಕಸಭಾ ಸ್ಪೀಕರ್ ಸದಸ್ಯರುಗಳಾಗಿರುತ್ತಾರೆ.  ಈ ಸಮಿತಿಯು 2021ರ ಜನವರಿ 23 ರಿಂದ ಒಂದು ವರ್ಷಗಳ ಕಾಲ […]