Categories

ನನ್ನ ಹೆಸರಿನ ಮುಂದೆ “ಡಾಕ್ಟರ್”‌ ಹಾಕಬೇಡಿ. ಏಕೆಂದರೆ…|ಜಗದ್ಗುರು ಶ್ರೀ ಶಾಂತವೀರ ಸ್ವಾಮೀಜಿ

ನನ್ನ ಹೆಸರಿನ ಮುಂದೆ “ಡಾಕ್ಟರ್”‌ ಹಾಕಬೇಡಿ. ಏಕೆಂದರೆ…|ಜಗದ್ಗುರು ಶ್ರೀ ಶಾಂತವೀರ ಸ್ವಾಮೀಜಿ

 

ನನ್ನ ಹೆಸರಿನ ಮುಂದೆ ಡಾಕ್ಟರ್ ಎನ್ನುವ ಪದ ಸೇರಿಸಬೇಡಿ ಎಂದು  ಅಖಿಲ ಕುಂಚಟಿಗ ಮಹಾಸಂಸ್ಥಾನ ಮಠದ ಶ್ರೀಗಳಾದ ಜಗದ್ಗುರು ಶ್ರೀ ಶಾಂತವೀರ ಸ್ವಾಮಿಜಿ  ವಿನಂತಿಸಿಕೊಂಡಿದ್ದಾರೆ.  ಅದಕ್ಕೆ ಶ್ರೀಗಳು ನೀಡಿರುವ ಕಾರಣ “ ಇತ್ತೀಚೆಗೆ  ಹತ್ತ ಸಾವಿರಕ್ಕೆ ಇಪ್ಪತ್ತು ಸಾವಿರಕ್ಕೆ ತರಕಾರಿಯಂತೆ ಬೀದಿ ಬದಿಯಲ್ಲಿ  ಡಾಕ್ಟರೇಟ್ ಪದವಿಗಳು ಮಾರಾಟವಾಗುತ್ತಿವೆ, ಕೊಂಡುಕೊಳ್ಳುತ್ತಿದ್ದಾರೆ. ಇದೊಂದು ಅಸಹ್ಯಕರವಾದಂತಹ ಬೆಳವಣಿಗೆ. ಸ್ವಾಮಿಗಳಾಗಿ ಎರಡು ಮೂರು ವರ್ಷಕ್ಕೆ ಡಾಕ್ಟರೇಟ್ ಪದವಿ ಪಡೆಯಲು ಹೇಗೆ ಸಾಧ್ಯ ?  ಡಾಕ್ಟರೇಟ್ ಪದವಿಗಳು ಬಿಕರಿಯಾಗುತ್ತಿರುವ ಕಾರಣ  ನೈಜವಾಗಿ ಅಧ್ಯಯನ ನಡೆಸಿ ಪದವಿ ಪಡೆದವರನ್ನೂ ಅದೇ ದೃಷ್ಟಿಕೋನದಲ್ಲಿ ನೋಡುತ್ತಿದ್ದಾರೆ ಎಂಬ ಕಾರಣದಿಂದ ಶ್ರೀಗಳು ತಮ್ಮ ಹೆಸರಿನ ಮಂದೆ ಡಾಕ್ಟರ್ ಸೇರಿಸದಿರಲು ನಿರ್ಧರಿಸಿದ್ದಾರೆ.