ಪ್ರಕೃತಿ ಕುವೆಂಪು ಅವರಿಗೆ ಒಂದು ಆರಾಧನೆ. ಅವರಿಗೆ ನಿಸರ್ಗನೇ ದೇವಾಲಯ, ಶಿವಮಂದಿರ. ದೈವಿಕ ಅನುಭವವಾಗಿ ಅವರ ಸಾಹಿತ್ಯದಲ್ಲಿ ಅದು ಮೂಡುತ್ತದೆ. ಅವರ ಕಾಲದ ದಟ್ಟಕಾಡು ಇಂದಿಲ್ಲ. ತೇಜಸ್ವಿ ಅವರಿಗೆ ಪ್ರಕೃತಿ ಒಂದು ಅನ್ವೇಷಣೆಯ ಮೂಲ. ಮಲೆನಾಡಿನ ಪ್ರಾಕೃತಿಕ ಪರಿಸರ ಅವರ ಬರವಣಿಗೆಯ ಒತ್ತಡವಾಗಿ ಬಂದಿದ್ದರೂ ಮನುಷ್ಯ ಬದುಕಿಗೆ ಈ ಪರಿಸರ ಎಷ್ಟು ಅನಿವಾರ್ಯ ಎಂಬ ಹುಡುಕಾಟವಿದೆ. ತೆಳುವಾಗುತ್ತಿರುವ ಕಾನನ,ನಶಿಸುತ್ತಿರುವ ವನ್ಯಜೀವಿ ಸಂಕುಲಗಳ ಬಗ್ಗೆ ವಿಷಾದವಿದೆ. ಮಹಾಕವಿ ಕುವೆಂಪು ಅವರ ಹುಟ್ಟುಹಬ್ಬ(ಡಿ-೨೯) […]

 ರಾಷ್ಟ್ರಕವಿ ಕುವೆಂಪುಜನ್ಮದಿನದ ಸಂಭ್ರಮದಲ್ಲಿದ್ದೇವೆ . ಕುವೆಂಪು ವೈಚಾರಿಕತೆ, ದಾರ್ಶನಿಕತೆ, ಕನ್ನಡದ ಬಗೆಗಿನ ಚಿಂತನೆಗಳೆಲ್ಲವೂ ಮರು ಚಿಂತನೆಗೊಳಗಾಗುವ, ಅವರ ಚಿಂತನೆಗಳನ್ನು ವರ್ತಮಾನಕ್ಕೆ ಅನ್ವಯಿಸುವ ಕುರಿತಾದ ಮಾತುಗಳೆಲ್ಲವೂ ಕೇಳಿಬರುತ್ತದೆ. ಮತ್ತೊಂದಷ್ಟು ಜನ ಕುವೆಂಪು ಹೇಳಿಲ್ಲದ ವಿಚಾರಗಳನ್ನು ಕುವೆಂಪು ಅವರಿಗೆ ಆರೋಪಿಸುವ ಕುಬ್ಜತನವನ್ನೂ ತೋರುವವರಿದ್ದಾರೆ. ಬಹುಶಃ ಕನ್ನಡ ನಾಡಿನಲ್ಲಿ ತಪ್ಪು ವ್ಯಾಖ್ಯಾನಕ್ಕೆ, ಅಪವ್ಯಾಖ್ಯಾನಕ್ಕೆ ಒಳಗಾದವರಲ್ಲಿ ಕುವೆಂಪು ಅವರೂ ಒಬ್ಬರು. ಕನ್ನಡದ ನೆಲದಲ್ಲಿ ಕನ್ನಡದ ಗುಣಗಾನಕ್ಕೆ, ಕನ್ನಡಕ್ಕೆ ಬಂದಿರುವ ಸಂಕಟಗಳ ಕುರಿತ ಮಾತಿಗೆ ಅನ್ಯಭಾಷಾ ದ್ವೇಷದ, […]