Categories

ದುರ್ಯೋಧನನಿಗೆ ತಿಳಿದಿತ್ತ ಕರ್ಣನ ಜನ್ಮರಹಸ್ಯ ? ಪಂಪಭಾರತದಲ್ಲಿದೆ ರೋಚಕ ಸನ್ನಿವೇಶ । ಡಾ. ಕುಮಾರ ಸ್ವಾಮಿ ಗೌಡ

ದುರ್ಯೋಧನನಿಗೆ ತಿಳಿದಿತ್ತ ಕರ್ಣನ ಜನ್ಮರಹಸ್ಯ ? ಪಂಪಭಾರತದಲ್ಲಿದೆ ರೋಚಕ ಸನ್ನಿವೇಶ । ಡಾ. ಕುಮಾರ ಸ್ವಾಮಿ ಗೌಡ

 

ಒಂದು ದಿನ ಕರ್ಣ ಮತ್ತು ದುರ್ಯೋಧನ ಭೇಟೆಗೆ ಹೋಗ್ತಿರ್ತಾರೆ.  ಕಾಡಲ್ಲಿ ಸತ್ಯಂತಪ ಮಹರ್ಷಿಗಳನ್ನ ತಪಸ್ಸು ಮಾಡುತ್ತಾ  ಕುಳಿತ್ತಿರುತ್ತಾರೆ.  ಋಷಿಗಳು ಇವರನ್ನ  ಆದರದಿಂದ ಬರಮಾಡಿಕೊಳ್ಳುತ್ತಾರೆ.   ಕುಶಲೋಪಚಾರ ಆದ ಮೇಲೆ ದುರ್ಯೋಧನ  ಆಶ್ರಮದ ಒಳಗೆ ಬರುತ್ತಾನೆ , ನೋಡಿದರೇ ಅಗ್ರ ಪೀಠದ ಮಲೆ  ಕರ್ಣ ಕುಳಿತಿದ್ದಾನೆ.  ದುರ್ಯೋಧನನಿಗೆ ಇದರಿಂದ  ಕೋಪ ಬರುತ್ತೆ. “ಕರ್ಣ  ನೀನು ಹೊರಗೆ ಇರು ನಾನು ಮಹರ್ಷಿಗಳ ಬಳಿ ಚರ್ಚೆ ಮಾಡಬೇಕು ಎಂದು ಕರ್ಣನನ್ನ  ಹೊರಗೆ ಕಳಿಯಿಸಿ ದುರ್ಯೋಧನ  ಋಷಿಯನ್ನ ಪ್ರಶ್ನೆ ಮಾಡುತ್ತಾನೆ.  ನನ್ನ ಬಿಟ್ಟು ಅಗ್ರ ಪೀಠದಲ್ಲಿ ಯಾಕೆ ಕರ್ಣನನ್ನ ಕೂರಿಸಿದಿರಿ ? ಅಂತ ಅದಕ್ಕೆ  ಋಷಿಗಳು ತಿಳಿಸುವ ಕರ್ಣನ ಜನ್ಮ ರಹಸ್ಯ ಮತ್ತು ಅದನ್ನ ತಿಳಿದ ನಂತರ ದುರ್ಯೋಧನ ಕರ್ಣನನ್ನ ಇಟ್ಟುಕೊಂಡು ಮಾಡುವ ಮಸಲತ್ತನ್ನ ಸೊಗಸಾಗಿ ವಿವರಿಸಿದ್ದಾರೆ ತಾ.ನಂ. ಕುಮಾರಸ್ವಾಮಿ ಅವರು.