Categories

ಗ್ಯಾರಂಟಿಗಳನ್ನು ನೀಡುವ ಬದಲಿಗೆ ಸರ್ಕಾರಿ ಶಾಲೆಗಳ ಅಭಿವೃದ್ಧಿ ಅವಶ್ಯಕ | ಡಾ. ಕುಮಾರ ಸ್ವಾಮಿ ಗೌಡ

“ಎಲ್ಲಿ ನೋಡಿದರೂ ಇಂಗ್ಲೀಷ್ ಶಾಲೆಗಳು. ದೊಡ್ಡ ದೊಡ್ಡ ಕಂಬಗಳು, ಬೋರ್ಡ್ ಗಳು, ಮಹಾದ್ವಾರಗಳು. ಇಲ್ಲಿ ಕನ್ನಡ ಶಾಲೆಗಳಿಗೆ ಬಂದ್ರೆ ಒಂದು ಸಣ್ಣ ರೂಮು, ಒಂದು ಮೇಜಿಲ್ಲ ಕುರ್ಚಿಯಿಲ್ಲ. ಮಕ್ಕಳು ಡ್ರಾಪ್ ಔಟ್ ಯಾಕೆ ಆಗ್ತಿದ್ದಾರೆ ಎಂದರೇ ಹೆಣ್ಣು ಮಕ್ಕಳಗೆ ಶೌಚಾಲಯಗಳಿಲ್ಲ, ಮೂಲಭೂತ ಸೌಕರ್ಯಗಳಿಲ್ಲ. ದುಡ್ಡು ತಗೊಂಡು ಕೇಳಿದ ಕಡೆಯಲ್ಲೆಲ್ಲ ಶಾಲೆಗಳನ್ನ ಕೊಟ್ಟು ಬಿಟ್ರಿ. ಸರ್ಕಾರ ಆ ಯೋಜನೇ ಈ ಯೋಜನೇ ಗ್ಯಾರಂಟಿಗಳನ್ನ ಕೊಡುವ ಬದಲು 5 ವರ್ಷ ಸರ್ಕಾರಿ ಶಾಲೆಗಳಿಗೆ ಬಂಡವಾಳ ಹಾಕಬೇಕು” ಎಂದು ಶಿಕ್ಷಣ ತಜ್ಞರಾದ ಡಾ ಕುಮಾರಸ್ವಾಮಿ ಗೌಡ ಅವರು ಪ್ರತಿಪಾದಿಸಿದ್ದಾರೆ.