Header Ad

Categories

ಹೆಚ್ಚುತ್ತಿರುವ ಮತಾಂತರ – ಸರ್ಕಾರವೂ ಕೊಡುತ್ತಿದೆ ಸಹಕಾರ । ಮಹೇಶ್ ಕುಮಾರ್

ಮಾರತ್ ಹಳ್ಳಿಯಲ್ಲಿ ಇರುವ ಹೆಚ್ಚಿನ ಜನಸಂಖ್ಯೆಯಲ್ಲಿ ತಮಿಳುಗರನ್ನ ಹೆಚ್ಚಿಗೆ ಕಾಣಬಹುದು. ಇದರಲ್ಲಿ ಪಡೆಯಚ್ಚಿ ಎಂಬ ಸಮುದಾಯದ ಜನ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮೆಟ್ಟೂರು ಡ್ಯಾಂ ಕಟ್ಟುವ ಸಂದರ್ಭದಲ್ಲಿ ಇಲ್ಲಿ ಬಂದು ಉಳಿದುಕೊಕೊಳ್ಳುತ್ತಾರೆ. ಡ್ಯಾಂ ನಿರ್ಮಾಣದ ನಂತರವೂ ಕೆಲವೊಂದು ಸಮುದಾಯಗಳು ಇಲ್ಲೇ ಉಳಿದುಕೊಳ್ಳುತ್ತವೆ. ಸ್ವಾತಂತ್ರ್ಯ ಬಂದು ಇಪ್ಪತ್ತು ಮುವತ್ತು ವರ್ಷಗಳ ನಂತರವೂ ಹಿಂದುಗಳಾಗೇ ಉಳಿದುಕೊಂಡಿದ್ದು ಆನಂತರ ಬೇರೆ ಬೇರೆ ಕಾರಣಗಳಿಗಾಗಿ ಕ್ರಿಶ್ಚಿಯನ್ನರಿಂದ ಮತಾಂತರವಾಗುತ್ತಾರೆ. ಬಡತನ ಇರುವಂಥ ಜಾಗ ಕಾಡುಗಳು ಬೆಟ್ಟಗುಡ್ಡಗಳಿಗೆ ಹೋಗಿ ಶಿಲುಭೆಯನ್ನ ತಗಲಾಕುವುದು. ಈ ರೀತಿ ಕನ್ವರ್ಟ್ ಮಾಡುವುದು ಇದು ಎಗ್ಗಿಲ್ಲದೇ ನಡೆಯುತ್ತಿದೆ. ಅದರಲ್ಲೂ ಈಗ ಸರ್ಕಾರ ಮತಾಂತರ ನಿಷೇಧ ಕಾಯ್ದೆ ರದ್ದು ಮಾಡಲು ಮುಂದಾಗಿರುವುದರಿಂದ ಈಗ ಇನ್ನೂ ಹೆಚ್ಚಿಗೆ ಮತಾಂತರ ನಡೆಯುವ ಆತಂಕವಿದೆ ಎಂದಿದ್ದಾರೆ ಮಹೇಶ್ ಕುಮಾರ್