ರಾಷ್ಟ್ರಕವಿ ಕುವೆಂಪುಜನ್ಮದಿನದ ಸಂಭ್ರಮದಲ್ಲಿದ್ದೇವೆ . ಕುವೆಂಪು ವೈಚಾರಿಕತೆ, ದಾರ್ಶನಿಕತೆ, ಕನ್ನಡದ ಬಗೆಗಿನ ಚಿಂತನೆಗಳೆಲ್ಲವೂ ಮರು ಚಿಂತನೆಗೊಳಗಾಗುವ, ಅವರ ಚಿಂತನೆಗಳನ್ನು ವರ್ತಮಾನಕ್ಕೆ ಅನ್ವಯಿಸುವ ಕುರಿತಾದ ಮಾತುಗಳೆಲ್ಲವೂ ಕೇಳಿಬರುತ್ತದೆ. ಮತ್ತೊಂದಷ್ಟು ಜನ ಕುವೆಂಪು ಹೇಳಿಲ್ಲದ ವಿಚಾರಗಳನ್ನು ಕುವೆಂಪು ಅವರಿಗೆ ಆರೋಪಿಸುವ ಕುಬ್ಜತನವನ್ನೂ ತೋರುವವರಿದ್ದಾರೆ. ಬಹುಶಃ ಕನ್ನಡ ನಾಡಿನಲ್ಲಿ ತಪ್ಪು ವ್ಯಾಖ್ಯಾನಕ್ಕೆ, ಅಪವ್ಯಾಖ್ಯಾನಕ್ಕೆ ಒಳಗಾದವರಲ್ಲಿ ಕುವೆಂಪು ಅವರೂ ಒಬ್ಬರು. ಕನ್ನಡದ ನೆಲದಲ್ಲಿ ಕನ್ನಡದ ಗುಣಗಾನಕ್ಕೆ, ಕನ್ನಡಕ್ಕೆ ಬಂದಿರುವ ಸಂಕಟಗಳ ಕುರಿತ ಮಾತಿಗೆ ಅನ್ಯಭಾಷಾ ದ್ವೇಷದ, […]

ವಿಶ್ವ ಹಿಂದೂ ಪರಿಷದ್ ಬಜರಂಗದಳ ಭದ್ರಾವತಿಯ ವತಿಯಿಂದ. ದಿನಾಂಕ 26.12. 21ರ ಭಾನುವಾರದಂದು 9 ಜನ ಮರಳಿ ಮಾತೃಧರ್ಮಕ್ಕೆ ವಾಪಾಸ್ಸಾಗಿದ್ದಾರೆ.  ಅಂತರಗಂಗೆಯ ಗ್ರಾಮದ ನಿವಾಸಿ ಜಯಶೀಲನ್. ಮತ್ತು ಶ್ರೀಮತಿ ಜಯಮ್ಮ ಹಾಗೂ  ಇವರ ಕುಟುಂಬ ಸದಸ್ಯರಾದ ಪ್ರಭಾಕರನ್ ಶ್ರೀಮತಿ ಲಲಿತಾ ಪ್ರಭಾಕರನ್, ಮಕ್ಕಳಾದ ಭರತ್ ಕುಮಾರ್, ಭಾವನಾ, ದ್ವಿತೀಯ ಪುತ್ರ ಪ್ರಕಾಶ  ಮತ್ತು ಶ್ರೀಮತಿ ಶ್ವೇತಾ ಪ್ರಕಾಶ್ ಹಾಗೂ ಪುತ್ರಿ ಪೃಥ್ವಿ ಇವರ ಜೊತೆಗೂಡಿ ಭದ್ರಾವತಿಯ ಜನ್ನಾಪುರ ಸಾರ್ವಜನಿಕ ಶ್ರೀ […]

ನಮ್ಮದು ಅತ್ಯಂತ ಪುರಾತನವಾದ ದೇಶ.ಇಲ್ಲಿನ ಸಂಸ್ಕೃತಿಯೂ ಪುರಾತನವಾದದ್ದು. ಇಲ್ಲಿನ ಸಂಸ್ಕೃತಿಯನ್ನು ಅರಣ್ಯ ಸಂಸ್ಕೃತಿಯೆಂದೂ ಕರೆಯುತ್ತಾರೆ. ಇಲ್ಲಿನ ಜನಸಂಖ್ಯೆಯಲ್ಲಿ ದೊಡ್ಡಪಾಲು ಬುಡಕಟ್ಟಿನ ಜನರದ್ದು ಇದೆ. ಹಿಂದಿನ ಜನಗಣತಿಯ ಪ್ರಕಾರ 10 ಕೋಟಿ ಗಿರಿಜನ(ಜನಜಾತಿ/ಬುಡಕಟ್ಟು)ರಿದ್ದಾರೆ. ಇವರು ಪ್ರಾಚೀನಕಾಲದಿಂದಲೂ ಕಾಡಿನಲ್ಲಿ ಸ್ವತಂತ್ರ ಬದುಕು ನಡೆಸಿಕೊಂಡು ಬಂದವರು. ಸಾಂಸ್ಕೃತಿಕವಾಗಿ ಶ್ರೀಮಂತರು. ದೇಶ, ಧರ್ಮ ರಕ್ಷಣೆಯಲ್ಲಿ ಮಂಚೂಣಿಯಲ್ಲಿರುವವರು. ಅಪ್ರತಿಮ ಶೂರರು. ಅನಾದಿ ಕಾಲದಿಂದ ಕೂಡಿ ಬಾಳಿದವರು. ಅವರು ಅರಣ್ಯವನ್ನು ದೇವರನ್ನಾಗಿ ಕಂಡು ಪೂಜಿಸುತ್ತಿದ್ದವರು. ನಮ್ಮ ದೇಶದಮೇಲೆ ಮೊಘಲರು, […]

“ನನಗಿಂದು ತಿಳಿಯಿತು ನನ್ನ ಜನ್ಮೋದ್ದೇಶ ! ಪಶ್ಚಿಮ ದೇಶಗಳಿಗೆ ಹೋಗುವೆನು. ಅಲ್ಲಿ ಭೋಗವಾದಿಗಳ ಹೃದಯದಲ್ಲಿ ಸನಾತನ ವೇದಧರ್ಮದ ಉಪನಿಷತ್ ಪ್ರಖರಜ್ಯೋತಿಯನ್ನು ಬೀರುವೆನು. ಅವರು ಭಾರತಾಂಬೆಗೆ ತಲೆಬಾಗಿ ಆಕೆಗೆ ನೆರವಾಗುವಂತೆ ಮಾಡುವೆನು. ಆಕೆಯ ದುರ್ಗತಿಯನ್ನು ಪರಿಹರಿಸಲೆಳಸುವೆನು. ಭಾವಸಮಾಧಿ ಅಲ್ಲಿರಲಿ ! ನಿರ್ವಿಕಲ್ಪ ಸಮಾಧಿ ಸದ್ಯಕ್ಕೆ ಒತ್ತಟ್ಟಿಗಿರಲಿ ! ನನ್ನಾತ್ಮಮುಕ್ತಿ ಸದ್ಯಕ್ಕೆ ಮುಕ್ತಾಯವಾಗಿರಲಿ! ನಿಜವಾದ ಧರ್ಮವನ್ನು ಜಗತ್ತಿಗೆ ಬೋಧಿಸುವೆನು. ಜಗತ್ತನ್ನು ಎಚ್ಚರಿಸುವೆನು. ಭರತಖಂಡವನ್ನು ಮೇಲೆತ್ತುವೆನು. ಹೇ ಜನನಿ, ಪುಣ್ಯಭೂಮಿ, ಆರ್ಯಮಾತೆ, ವೇದಪೂಜಿತೆ, ನನ್ನನ್ನು […]

      ನಾವಿನ್ನೂ ನಿರಾಶಾದಾಯಕ ಖೊಟ್ಟಿ ಸಮಾಜವಾದದ ಮೇನಿಯಾದಿಂದ ಹೊರಗೆ ಬಂದಿಲ್ಲ. ದೇಶದ ಆರ್ಥಿಕತೆ ವಿಕೇಂದ್ರೀಕರಣಗೊಳಿಸುವುದು, ಹೆಚ್ಚು ಹೆಚ್ಚು ಉದ್ಯಮಗಳಿಗೆ ಅವಕಾಶ ಕೊಡುವುದು ಕೇವಲ ಉದ್ಯಮಪತಿಗಳ ಲಾಭ ಹೆಚ್ಚಿಸುವುದಕ್ಕಲ್ಲ. ಇದರಿಂದ ನಾಡಿನ ಕೋಟ್ಯಂತರ ಜನರಿಗೆ ಉದ್ಯೋಗವಕಾಶಗಳ ಜೊತೆಗೆ ಉತ್ತಮ ಗುಣಮಟ್ಟದ ಸರಕು- ಸೇವೆಗಳ ವಹಿವಾಟಿಗೂ ಕೂಡಾ ದಾರಿಯಾಗುತ್ತದೆ. ಸರ್ಕಾರದ ಏಕಸ್ವಾಮ್ಯತೆ ಎನ್ನುವುದು ಅಗತ್ಯಕ್ಕೆ ತಕ್ಕಂತೆಯೇ ಇರಬೇಕೆ ಹೊರತು ಅನಿವಾರ್ಯವಾಗಬಾರದು. ಕೈಗಾರಿಕೆ ಮತ್ತು ಉದ್ಯಮಗಳ ವಿಸ್ತರಣೆಯು ಗ್ರಾಹಕರಿಗೆ ತಮಗಿಷ್ಟದ ಸರಕು […]

ಹುಬ್ಬಳ್ಳಿ :ಸಮುತ್ಕರ್ಷ ಐಎಎಸ್ ಕರ್ನಾಟಕ ವತಿಯಿಂದ ರಾಜ್ಯದ ವಿದ್ಯಾರ್ಥಿಗಳಿಗಾಗಿ ಜನವರಿ ೧ ರಿಂದ ಹುಬ್ಬಳ್ಳಿಯಲ್ಲಿ ನಾಗರಿಕ ಸೇವಾ ಪರೀಕ್ಷೆಗಳಿಗೆ ತರಬೇತಿಯನ್ನು ವಿದ್ಯಾನಗರದ ಕೆಎಲ್ಇ ಟೆಕ್ ಯೂನಿವರ್ಸಿಟಿ ಕ್ಯಾಂಪಸ್ ನಲ್ಲಿ ಆರಂಭಿಸುತ್ತಿದ್ದೇವೆ ಎಂದು ಸಮುತ್ಕರ್ಷ ಟ್ರಸ್ಟ್ ಕಾರ್ಯದರ್ಶಿ ಜಿತೇಂದ್ರ ನಾಯಕ ತಿಳಿಸಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಐಎಎಸ್, ಐಪಿಎಸ್, ಕೆಎಎಸ್ ಪರೀಕ್ಷೆಗಳಿಗೆ ತರಬೇತಿ ನಡೆಯಲಿದೆ. ದೆಹಲಿಯ ನುರಿತ ತರಬೇತಿದಾರರಿಂದ ಮತ್ತು ಹಿರಿಯ ಅಧಿಕಾರಗಳ ವಿಶೇಷ ತರಗತಿಗಳು ಹಾಗೂ ಸಂವಾದ ಕಾರ್ಯಕ್ರಮವನ್ನು […]

ಕೆಲವೊಮ್ಮೆ ನಮ್ಮ ಜೀವನದಲ್ಲಿ ಕಠಿಣಾತಿ ಕಠಿಣ ಸನ್ನಿವೇಶಗಳು ಎದುರಾಗುತ್ತವೆ. ಅವು ಹೇಗಿರುತ್ತವೆಂದರೆ, ಅವುಗಳ ಎದುರು ನಮ್ಮ ಜೀವನದ ದೃಷ್ಟಿಕೋನವೇ ಬದಲಾಗುತ್ತವೆ. ಕಣ್ಣಿದ್ದೂ ಕುರುಡಾದೆವಾ? ಕಿವಿಯಿದ್ದೂ ಕಿವುಡರಾದೆವಾ? ಬಾಯಿಯಿದ್ದೂ ಮೂಕರಾದೆವಾ? ಮನಸ್ಸಿದ್ದೂ ಆಲೋಚನಾಹೀನರಾದೆವಾ? ಎಂಬಂತಾಗುತ್ತದೆ. ಈ ವ್ಯಾಖ್ಯಾನಕ್ಕೆ ಅನ್ವಯವಾಗುವಂತೆ ಮೊನ್ನೆ-ಮೊನ್ನೆ ತಾನೆ (ಡಿಸೆಂಬರ್ 8) ಸಂಭವಿಸಿರುವ ಭಾರತದ ವೀರಸೈನಿಕರ ದುರಂತಕರ ಅಂತ್ಯವು ಭಾರತೀಯರನ್ನು ಸ್ತಬ್ಧವಾಗಿಸಿದೆ. ಮಿ-17 ಯುದ್ಧವಿಮಾನದಲ್ಲಿ ಭಾರತೀಯ ರಕ್ಷಣಾ ಪಡೆಯ ಮುಖ್ಯಸ್ಥರು ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ […]

ಬೆಂಗಳೂರಿನಲ್ಲಿ ಡಿಸೆಂಬರ್ 18ರಂದು ಭಾರತ ಸರಕಾರದ ಕೇಂದ್ರ ಮಾಹಿತಿ ಆಯುಕ್ತರಾದ ಉದಯ್ ಮೆಹ್ರೂರ್ಕರ್ ಅವರ ‘ಸಾವರ್ಕರ್ ದಿ ಮ್ಯಾನ್ ಹೂ ಕುಡ್ ಹ್ಯಾವ್ ಪ್ರಿವೆಂಟೆಡ್ ಪಾರ್ಟಿಶನ್’ ಕೃತಿಯು ಶ್ರೀ ನಿರ್ಮಲಾನಂದ ಮಹಾಸ್ವಾಮಿಯವರ ಸಾನ್ನಿಧ್ಯದಲ್ಲಿ ನಗರದ ಪುಟ್ಟಣ ಚೆಟ್ಟಿ ಪುರಭವನದಲ್ಲಿ ಬಿಡುಗಡೆಯಾಗಲಿದೆ. ಇದೇ ಸಂದರ್ಭದಲ್ಲಿ ಸಂವಾದ ತಂಡದ ಜೊತೆಗೆ ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ. 1.ಸಾವರ್ಕರ್ ಬಗೆಗೆ, ಅವರ ದೂರದೃಷ್ಟಿ ಮತ್ತು ದೇಶ ವಿಭಜನೆಯ ಕುರಿತು ಈಗಾಗಲೇ ಅನೇಕ ಕೃತಿಗಳ ರಚನೆಯಾಗಿದೆ, ಆದರೆ […]

ಅಕ್ಟೋಬರ್ ಕೊನೆಯ ವಾರದಲ್ಲಿ ಯೋಜನೆಯಾಗಿದ್ದ ಜಿ-20 ಸಭೆಯಲ್ಲಿ ಭಾಗವಹಿಸಲು ಬಂದಿದ್ದ ಹಲವು ದೇಶಗಳ ಮುಖ್ಯಸ್ಥರು ಇಟಲಿಯ ಮಧ್ಯಭಾಗದಲ್ಲಿರುವ ವ್ಯಾಟಿಕನ್ ನಲ್ಲಿ ಇರುವ ಪೋಪ್ ಫ್ರಾನ್ಸಿಸ್ ಅವರನ್ನೂ ಭೇಟಿಮಾಡುವ ಕಾರ್ಯಕ್ರಮ ಜೋಡಿಸಿಕೊಂಡಿದ್ದರು. ಇವರಲ್ಲಿ ಮುಖ್ಯವಾಗಿ ಅಮೇರಿಕಾದ ಅಧ್ಯಕ್ಷ ಜೋ ಬಿಡೆನ್ ಮತ್ತು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರುಗಳು ಪೋಪ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.   ಚರ್ಚೆಗೆ ಮುಂಚೆ ಚರ್ಚೆಯ ವಿಷಯಗಳ ಬಗ್ಗೆ ಯಾವ ಸುಳಿವೂ ಸಾರ್ವಜನಿಕರಿಗೆ ಇರಲಿಲ್ಲ.   ಅಮೇರಿಕಾ […]

ಸಾಹಿತ್ಯ ಸಂಗಮ, ಬೆಂಗಳೂರು ಇವರ ವತಿಯಿಂದ ಜಯನಗರದ ಯುವಪಥ ಸಭಾಂಗಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾದ ಕೃ.ಸೂರ್ಯನಾರಾಯಣ್ ರಾವ್ ಅವರ ಜೀವನ ಚಿತ್ರಣದ “ಉತ್ತುಂಗ” ಪುಸ್ತಕದ ಬಿಡುಗಡೆ ಕಾರ್ಯಕ್ರಮ ನೆರವೇರಿತು. ಕೃ.ಸೂರ್ಯನಾರಾಯಣರಾವ್ ಅವರನ್ನು ಆತ್ಮೀಯವಾಗಿ ಸ್ಮರಿಸಿದ ಕ್ಷೇತ್ರೀಯ ಸಂಘಚಾಲಕರಾದ ವಿ.ನಾಗರಾಜ್‌ರವರು ಅವರ ಒಡನಾಟದ ನೆನಪುಗಳು ಅಚ್ಚಳಿಯದೆ ಉಳಿದಿದೆ, ಬಹಳ ಸಣ್ಣ ವಯಸ್ಸಿನಿಂದಲೇ ಬ್ರಹ್ಮ ಚೈತನ್ಯರ ಪ್ರಭಾವಕ್ಕೆ ಒಳಗಾಗಿದ್ದ ಅವರು ಪರಂಪರೆಯ ಬಗೆಗೆ ಅತ್ಯಂತ ಶ್ರದ್ಧೆಯಿಟ್ಟುಕೊಂಡಿದ್ದರು.1942ರಲ್ಲಿ ಗುರೂಜಿಯವರು ಬೆಂಗಳೂರಿಗೆ ಬಂದ […]