Categories

ಮತಾಂತರ ನಿಷೇದ ರದ್ದತಿ ಬೇಡ ! ಸರ್ಕಾರದ ವಿರುದ್ಧ ಆರೂಢ ಶ್ರೀ ಆಕ್ರೋಶ । ಡಾ.ಆರೂಢ ಭಾರತೀ ಸ್ವಾಮೀಜಿ

ಮತಾಂತರ ನಿಷೇಧ ಕಾಯ್ದೆಯನ್ನ ರದ್ದು ಮಾಡುವುದು ಎಳ್ಳಷ್ಟು ಸರಿ ಇಲ್ಲ. ರಾಜಕೀಯದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಇದೆ. ಈ ಕಾಯಿದೆಯನ್ನ ಆಡಳಿತ ಪಕ್ಷವೂ ಒಪ್ಪಿಕೊಳ್ಳುತ್ತೆ, ವಿರೋಧ ಪಕ್ಷವೂ ಒಪ್ಪಿಕೊಳ್ಳುತ್ತೆ. ಪಕ್ಷಾಂತರ ನಿಷೇಧ ಕಾಯ್ದೆಯನ್ನ ರದ್ದು ಮಾಡದವರು ಮತಾಂತರ ನಿಷೇಧ ಕಾಯ್ದೆಯನ್ನ ಯಾಕೆ ರದ್ದು ಮಾಡಲು ಮುಂದಾಗಿದ್ದಾರೆ. ಈ ಕೆಲಸವನ್ನ ಈ ದೇಶದಲ್ಲಿ ಮುಸ್ಲಿಮರು ಕ್ರಿಶ್ಚಿಯನ್ನರು ಎಗ್ಗಿಲ್ಲದೇ ಮಾತನಾಡಿರುವುದು ಜಗಜ್ಜಾಹಿರಾತು. ಇದನ್ನ ತಡೆಯಲಿಕ್ಕೆ ಹಿಂದಿನ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನ ತಂದಿದೆ. ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಾಗ ದೌರ್ಜನ್ಯದ ವಿರುದ್ಧ ಸಿಡಿದೆದ್ದು ಕಾನೂನಾತ್ಮಕ ಪರಿಹಾರಕ್ಕೆ ಶರಣಾಗತನಾಗಲು ಇರುವ ಏಕಮಾತ್ರ ಮಾರ್ಗ ಮತಾಂತರ ನಿಷೇಧ ಕಾಯ್ದೆ. ಹಾಗಿ ಈ ಕಾಯ್ದೆಯನ್ನ ರದ್ದು ಮಾಡಬಾರದು ಎಂದು ಶ್ರೀ ಸಿದ್ದಾರೂಡ ಮಿಷನ್ ಸ್ಥಾಪಕರಾದ ಡಾ. ಆರೂಢ ಭಾರತಿ ಸ್ವಾಮೀಜಿ ತಿಳಿಸಿದ್ದಾರೆ.