Categories

ಎರಡೂವರೆ ಕೋಟಿ ಗಣೇಶ । ಗರಿಗರಿ ನೋಟುಗಳಿಂದ ಮಿಂಚಿದ ದೇಗುಲ

ಎರಡೂವರೆ ಕೋಟಿ ಗಣೇಶ । ಗರಿಗರಿ ನೋಟುಗಳಿಂದ ಮಿಂಚಿದ ದೇಗುಲ

 

ವಿವಿಧ ಬಣ್ಣಗಳಿಂದ  ಆಕರ್ಷಕವಾಗಿ ಡೆಕೋರೇಟ್ ಆಗಿರುವ ಈ ಮಂಟಪ ನೋಡಿ ಬಣ್ಣದ ಪೇಪರ್ ಎಂದುಕೊಳ್ಳಬೇಡಿ. ಇದೆಲ್ಲವೂ ಅಸಲಿ ದುಡ್ಡು.  ಒರಿಜಿನಲ್ ನೋಟುಗಳು ಮತ್ತು ಕಾಯಿನ್ ಗಳಿಂದಲೇ ಈ ಭಾರಿ ಗಣೇಶನನ್ನ ಅಲಂಕರಿಸಲಾಗಿದೆ. ಈ ವಿಶೇಷ ಅಲಂಕಾರ ಕಂಡು ಬಂದಿದ್ದು ಬೆಂಗಳೂರಿನ ಜೆಪಿ ನಗರದ ಪುಟ್ಟೇನಹಳ್ಳಿಯಲ್ಲಿರುವ ಶ್ರೀ ಸತ್ಯಗಣಪತಿ ದೇವಸ್ಥಾನದಲ್ಲಿ.  ಪ್ರತಿವರ್ಷವೂ ವಿಶೇಷ ಅಲಂಕಾರದಿಂದ ಪೂಜಿಸಲ್ಪಡುವ ಗಣೇಶನಿಗೆ ಈ ಬಾರಿ 2.5 ಕೋಟಿ ರುಪಾಯಿಯ ನೋಟು ನಾಣ್ಯಗಳಿಂದ ಅಲಂಕಾರ ಮಾಡಲಾಗಿದೆ. ಇದಕ್ಕಾಗಿ ಸುಮಾರು 56 ಲಕ್ಷ ರೂ ಮೌಲ್ಯದ  5, 10, 20, ರೂ  ನಾಣ್ಯಗಳು ಮತ್ತು 2 ಕೋಟಿ ಹೆಚ್ಚು 10, 20, 50, 100, 200, 500, ಮತ್ತು 2000 ನೋಟುಗಳನ್ನ ಬಳಸಲಾಗಿದೆ.