Shri Mohan Rao Bhagavat is new RSS Sarasanghchalak

Sri Mohan Bhagwat hails from Chandrapur in Vidarbha, Maharashtra. Born on 11 September 1950 Sri Bhagwat obtained his graduation in Veterenary Sciences and Animal Husbandry (BVSc) from Punjabrao Krishi Vidyapeeth, Akola, Maharashtra. Hailing from a family that had strong RSS roots (his father was the Prant Pracharak of Gujarat for some time) Sri Bhagwat left his Masters course in Veterinary Sciences towards the fag end to plunge into the Sangh work as a Pracharak. He became a Pracharak towards the end of 1975 at the time of the infamous Emergency.


Read the rest of this entry »

BMS Leader Allampalli Venkatram’ji no more


Alampalli Venkatram ji speaking-with-labours

Bharateeya Mazdoor Sangh, Karnataka Pradesh regrets to announce sad demise of Sri Allampalli Venkatram, Its leader, who breathed his last on 18.01.2009 at 6.00am.

ALLAMPALLI R.VENKATRAM, S/o Late Allampalli Ramswamaiah, aged about 78 years (18.06.1931) completed his B.Com in the year 1955 and spent his whole life to the cause of workers welfare for the past 51 years. He is a bachelor, devoted himself to the cause of the society. He has participated in Jammu and Kashmir Sathyagraha for the full integration of Kashmir with the Bharat in the year 1953 which was headed by Late Dr.Shyamaprasad Mukherjee, on an account of which he was imprisoned for 3 months jail in Delhi Tihar Jail and Firozpur jail of Punjab. In 1948 he participated in RSS sathyagraha against the ban imposed on it and was in jail for 3 months. Again in 1975-76 for almost the entire period of emergency he was detained under MISA in Bangalore Jail and Gulbarga Central jail as he offered sathyagraha to protest against the curtailment of trade union rights by the then Prime Minister Smt.Indira Gandhi. He has attended Industrial Relation Course for overseas trade unionists under Colombo plan which was 3 ½ month course at London and Belgium. He was the member of Central Board of trustees of provident Fund for 20 years up to July 2008. He was a member of the Regional Board of ESIC. It is because of his relentless struggle the finance Ministry yielded to pay higher interest on savings.

He stoutly opposed handing over hard earned savings of workers in PF to private agencies for investment. He was also instrumental in getting cost of living allowances to unorganized workers. He fought up to Supreme Court in 1984. Prior to this, there was no dearness Allowance to workers in unorganized sector so that price rise could be neutralized.

He devoted his entire life in the cause of workers welfare. In his demise the working classes of Karnataka have lost a leader who empathized with their causes.

His body will be kept at ‘Yadava Smruthi’ Sheshadripuram link Road, Opp to apoorva Iyemgar Bakery, Bangalore – 20 on 19th Jan from 11am to 1pm, for his well wishers to pay obeisance. Cremation will be at Harischandra Ghat at 2.00pm.

The BMS, Karnataka prays for the departed soul.

ಮಂಗಳಮಯವಾಗಲಿ ಚಂದ್ರಯಾನ

ಚಂದ್ರಯಾನ -೧ ಎಂಬ ಉಪಗ್ರಹ ಚಂದ್ರನನ್ನು ಸುತ್ತಿ ಚಂದ್ರನ ಬಗೆಗಿನ ಮಾಹಿತಿಯನ್ನು ನಮಗೆ ಕಳುಹಿಸಲು ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ನೆಗೆದಿದೆ. ಜೊತೆಗೆ ಭಾರತದ ಮತ್ತು ಇಸ್ರೋ ಬಾಹ್ಯಾಕಾಶ ಸಂಸ್ಥೆಯ ಬಗೆಗಿನ ಗೌರವವನ್ನು ಅಷ್ಟೇ ಎತ್ತರಕ್ಕೆ ಕೊಂಡೊಯ್ದಿದೆ. ವಿಶ್ವದ ಬಾಹ್ಯಾಕಾಶ ಚರಿತ್ರೆಯಲ್ಲೇ ಇದೊಂದು ಮೈಲಿಗಲ್ಲಾಗಲಿದೆ.

ಒಂದೆಡೆ ಸಾಧನೆಯ ಸಂಭ್ರಮ ಕಂಡರೆ ಇನ್ನು ಕೆಲವರಿಗೆ ಆರೋಪ ಮಾಡುವ ಖಯಾಲಿ. ಸುಖಾಸುಮ್ಮನೆ ಸಾರ್ವಜನಿಕ ಹಣದ
Read the rest of this entry »

ಪಾಕಿಸ್ತಾನದ ದ್ವೇಷದ ಕೂಸು ಎಲ್-ಇ-ಟಿ

ಪಾಕಿಸ್ತಾನವನ್ನು ದ್ವೇಷದ ಕೂಸು ಎಂದು ಕರೆಯಲಾಗುತ್ತದೆ. ಏಕೆಂದರೆ ಅದರ ಜನ್ಮದ ಗುಟ್ಟಿರುವುದೇ ಭಾರತ ದ್ವೇಷದಲ್ಲಿ. ಅದರ ಉಳಿವು ಸಹ ಅದರಲ್ಲಿಯೇ. ಅದಕ್ಕಾಗಿಯೇ ಅದು ಭಾರತದ ವಿರುದ್ಧ ಕಿಡಿ ಕಾರುತ್ತಲೇ ಒಂದಲ್ಲ ಒಂದು ಕುತಂತ್ರ ಹೂಡುತ್ತ ಬಂದಿದೆ. ಅಂತಹ ಪಾಕ್‌ನ ದ್ವೇಷದ ಮರಿ ಕೂಸು ಅದೇ  ’ಲಷ್ಕರ್ ಇ ತೊಯ್ಬಾ’ - ಎಲ್‌.ಇ.ಟಿ.

’ಲಷ್ಕರ್ ಇ ತೊಯ್ಬಾ’ ಎಂದರೆ ಶುದ್ಧರ ಸೈನ್ಯ. ಇದರ ಮುಖ್ಯಸ್ಥ ಝಕಿಯಾರ್ ರೆಹಮಾನ್‌ ಲಖ್ವಿ ಅಲಿಯಾಸ್‌ ’ಚಾಚಾಜಿ’. ಇವನೇ ಮುಂಬೈ ದಾಳಿಗಳನ್ನು ರೂಪಿಸಿ ಅದರ ಬೆನ್ನೆಲುಬಾಗಿ ನಿಂತವನು. ಭಾರತದಲ್ಲಿ ಎಲ್‌.ಇ.ಟಿ.ಕಾರ್ಯಾಚರಣೆಗಳನ್ನು ನಿಯಂತ್ರಿಸುತ್ತಿದ್ದಾನೆ. ಮುಂಬೈ ದಾಲಿಗಾಗಿ ೩೨ ಜನರ ಒಂದು ತಂಡ ರಚಿಸಲಾಗಿತ್ತು. ಅದರಲ್ಲಿ ೧೦ ಜನರ ಒಂದು ಗುಂಪನ್ನು ರಚಿಸಿ ಅದಕ್ಕೆ ಈಜು ಮತ್ತು ಸಮುದ್ರ ಸಂಬಂಧಿತ ಯಾಂತ್ರಿಕ ದೋಣಿ ಚಾಲನೆ ಮುಂತಾದ ತರಬೇತಿಗಳನ್ನು ಮೀನುಗಾರರ ಮೂಲಕ ನೀಡಿ ಅವರನ್ನು ಸಂಪೂರ್ಣವಾಗಿ ಸಾಗರ ಸಂಬಂಧಿತ ವಾತಾವರಣದಲ್ಲಿ ಉಳಿಸಲಾಯತು. ಅವರಾರಿಗೂ ಮುಂದಿನ ಕಾರ್ಯಾಚರಣೆಯ ವಿವರಗಳನ್ನು ತಿಳಿಸಿರಲಿಲ್ಲ. ಇದಕ್ಕಾಗಿ ಲಖ್ವಿ ೩ ತಿಂಗಳ ಕಾಲ ಕರಾಚಿಯಲ್ಲಿ ಬಿಡಾರ ಹೂಡಿ ಸೆಪ್ಟಂಬರ ೨೭ಕ್ಕೆ ಹೊರಡಬೇಕಾದ ತಂಡವು ಹೊರಡುವುದು ವಿಳಂಬಾದಾಗ ಅದು ನವೆಂಬರ್ ೨೭ಕ್ಕೆ ತಾನೇ ನಿಂತು ಅವರನ್ನು ಬೀಳ್ಕೊಟ್ಟಿದ್ದಾನೆ. ಮುಜಫ್ಫರಾಬಾದ್‌ ಬಳಿಯಿರುವ ಯಾರ ಗಮನ ಸೆಳೆಯದ ಶವಾಯಿ ನಾಲಾ ಎಂಬ ಗುಪ್ತಸ್ಥಳದಲ್ಲಿ ಈ ಸಂಚನ್ನು ರೂಪಿಸಲಾಯಿತು ಎಂದು ಹೇಳಲಾಗುತ್ತಿದೆ. ಹಿಮಾಲಯದ ತಪ್ಪಲು ಪ್ರದೇಶದಲ್ಲಿರುವ ಈ ಸ್ಥಳಲ್ಲಿ ಒಂದು ಮೂರಂತಸ್ತಿನ ಕಟ್ಟಡ ಒಂದು ಮಸೀದಿ ಮತ್ತು ಕೆಲವು ಸತಿ ಕೋಣೆಗಳಿವೆ.
Read the rest of this entry »

ಚ೦ದ್ರಯಾನ: ಭಾರತದ ಹೆಮ್ಮೆಯ ಸಾಧನೆ

-ಶ್ರೀಧರನ್

ಭಾರತ ಚ೦ದ್ರನಬಳಿಗೆ ಬಾಹ್ಯಾಕಾಶನೌಕೆಯನ್ನು ಕಳುಹಿಸಿದ ನಾಲ್ಕು ಪ್ರತಿಷ್ಠಿತ ದೇಶಗಳ ಪಟ್ಟಿಗೆ ಸೇರಿದೆ. ಚೆನ್ನೈ ಬಳಿಯಿರುವ ಶ್ರೀಹರಿಕೋಟಾದಿಂದ ಉಡಾವಣೆಗೊ೦ಡ ಅ೦ತರಿಕ್ಷನೌಕೆ ಚ೦ದ್ರಯಾನ-೧ ಚ೦ದ್ರನ ನೆಲಕ್ಕೆ ಸುರಕ್ಷಿತವಾಗಿ ತಲುಪಿದೆ. ಭಾರತದ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋ ೨೦೧೩ರ ಹೊತ್ತಿಗೆ ಇದೇರೀತಿಯ ಸುಮಾರು ೬೦ ಅ೦ತರಿಕ್ಷ ಯಾನಗಳನ್ನು ನಡೆಸಿ ಚ೦ದ್ರನ ಬಗ್ಗೆ ಮಾಹಿತಿಗಳನ್ನು ಸ೦ಗ್ರಹಿಸುವ ಯೋಜನೆ ಹೊಂದಿದೆ. ಚ೦ದ್ರಯಾನ-೧ ನೌಕೆಯಲ್ಲಿ ೧೧ ವೈಜ್ಞಾನಿಕ ಉಪಕರಣಗಳಿದ್ದು, ವಿಜ್ನಾನಿಗಳು ಒ೦ದೊ೦ದಾಗಿ ಅವುಗಳ ಉಪಯೋಗವನ್ನು ಪ್ರಾರ೦ಭಿಸಿ ಅನೇಕ ರೀತಿಯ ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಅಕ್ಟೋಬರ್ ೨೨ ರ೦ದು ಶ್ರೀಹರಿಕೋಟಾದಿ೦ದ ಉಡಾವಣೆಗೂ೦ಡ ಪಿ.ಎಸ್.ಎಲ್.ವಿ ಉಪಗ್ರಹ ವಾಹಕದೊಂದಿಗೆ ಹಾರಿದ ಎ೦ಐಪಿ (ಮೂನ್ ಇ೦ಪ್ಯಾಕ್ಟ್ ಪ್ರೋಬ್) ಎ೦ಬ ೩೫ಕೇಜಿ ತೂಕದ ಉಪಕರಣವು ನವೆ೦ಬರ್ ೧೪ರ ರಾತ್ರಿ ಚ೦ದ್ರನ ಮೇಲೆ ಇಳಿದಿದೆ. ಈ ಉಪಕರಣದ ಮೇಲೆ ಭಾರತದ ತ್ರಿವರ್ಣಧ್ವಜದ ಚಿತ್ರ ಇದೆ. ಎ೦ಐಪಿ ಚ೦ದ್ರಯಾನ-೧ ನೌಕೆಯಲ್ಲಿರುವ ೧೧ ಉಪಕರಣಗಳಲ್ಲಿ ಒ೦ದಾಗಿದೆ.

ಈ ರೀತಿಯ ಪ್ರಯೋಗದಲ್ಲಿ ಅಮೇರಿಕಾ ಮತ್ತು ರಷ್ಯಾದೇಶಗಳು ಹಲವಾರು ಪ್ರಯತ್ನಗಳ ನ೦ತರ ಯಶಸ್ಸು ಕ೦ಡಿದ್ದವು. ಇತ್ತೀಚೆಗಷ್ಟೇ ಯೂರೋಪಿನ ಯೂನಿಯನ್, ಜಪಾನ್ ಮತ್ತು ಚೀನಾ ದೇಶಗಳೂ ಸಹ ಚ೦ದ್ರನಬಳಿಗೆ ನೌಕೆಯನ್ನು ಕಳುಹಿಸಿವೆ. ವಿಶೇಷವೆ೦ದರೆ, ಈ ರೀತಿಯ ಬಾಹ್ಯಾಕಾಶಯಾತ್ರೆಯನ್ನು ಜಗತ್ತಿನಲ್ಲೇ ಅತ್ಯ೦ತ ಕಡಿಮೆ ವೆಚ್ಚದಲ್ಲಿ ಯಶಸ್ವಿಯಾಗಿ ಭಾರತೀಯ ವಿಜ್ನಾನಿಗಳು ನಡೆಸಿದ್ದಾರೆ. ಭಾರತ ಬಾಹ್ಯಾಕಾಶ ಪ್ರಯೋಗಕ್ಕೆ೦ದು ಕೇವಲ ೭೦೦ ಮಿಲಿಯ ಡಾಲರ್ (೩,೫೦೦ ಕೋಟಿ ರೂಪಾಯಿಗಳು) ಮೀಸಲಾಗಿಟ್ಟಿದ್ದರೆ, ಅಮೇರಿಕೆಯಲ್ಲಿ ಇದೇ ಯೋಜನೆಗೆ ೧೬ ಬಿಲಿಯ ಡಾಲರ್ (೮೦,೦೦೦ ಕೋಟಿ ರೂಪಾಯಿಗಳು) ವೆಚ್ಚವಾಗುತ್ತಿತ್ತು.
Read the rest of this entry »

ರಕ್ಷಣೆ ಮತ್ತು ಗೂಡಚರ್ಯೆ : ಸಾಧ್ಯತೆ-ಸವಾಲುಗಳು

ಪ್ರತಿ ಬಾರಿ ಭಯೋತ್ಪಾದಕರ ದಾಳಿ ನಡೆದಾಗ ನಮ್ಮ ಸುರಕ್ಷಾ ಪಡೆಗಳ ಸಂಖ್ಯೆ ಶಕ್ತಿ ಸಾಮರ್ಥ್ಯಗಳ ಬಗ್ಗೆ ಚರ್ಚೆ ನಡೆಯುತ್ತದೆ. ಆದರೆ ಅಂತಹ ಸಂದರ್ಭಗಳಲ್ಲಿ ನಮ್ಮ ಜನಸಂಖ್ಯೆ, ದೇಶದ ವಿಶಾಲತೆ ಇವುಗಳನ್ನು ಮರೆತು ರಕ್ಷಣಾ ಪಡೆಗಳ ವೈಫಲ್ಯ, ಪೊಲೀಸ್ ನಿರ್ಲಕ್ಷ್ಯ ಮುಂತಾದ ಆಪಾದನೆಗಳು ಪುಂಖಾನುಪುಂಖವಾಗಿ ಹೊರಬೀಳುತ್ತವೆ. ಹವಾ ನಿಯಂತ್ರಿತ ವ್ಯವಸ್ಥೆಗಳಲ್ಲೆ ಇರುವ ರಾಜಕಾರಣಿಗಳು ತಮ್ಮ ದೌರ್ಬಲ್ಯವನ್ನು ಕೆಲವೊಮ್ಮೆ ಬಹಳ ಸುಲಭವಾಗಿ ನಮ್ಮ ರಕ್ಷಣಾತಂಡಗಳ ಮೇಲೆ ಆರೋಪ ಹೊರಿಸುತ್ತಾರೆ. ಆದರೆ ಈ ದೇಶದಲ್ಲಿ ಪೊಲೀಸ್ ಬಲ ಎಷ್ಟಿದೆ ? ಮುಂತಾದ ಕೆಲವು ಕುತೂಹಲಕಾರಿ ಅಂಕಿ ಅಂಶಗಳ ಇಲ್ಲಿವೆ.

ಭಾರತದಲ್ಲಿರುವ ಒಟ್ಟು ಪೊಲೀಸ್ ಜಿಲ್ಲೆಗಳು : ೬೦೫

ಒಟ್ಟು ಪೊಲೀಸ್ ಠಾಣೆಗಳು : ೧೧,೮೪೦

ಒಟ್ಟು ವಾರ್ಷಿಕ ಅಪರಾಧಗಳು : ೬೧ ಲಕ್ಷ

ಪ್ರತಿ ೧೦,೦೦೦ ಜನಸಂಖ್ಯೆಗೆ ಅಪರಾಧಗಳ ಸಂಖ್ಯೆ : ೬೩

ದೇಶದಲ್ಲಿರುವ ಒಟ್ಟು ಸಿವಿಲ್ ಪೊಲೀಸರ ಸಂಖ್ಯೆ : ೧೦,೧೨,೦೦೦

ಪೊಲೀಸ್ ಸಶಸ್ತ್ರ ಪಡೆಯ ಸಂಖ್ಯೆ : ೩,೬೩,೦೦೦

ಪ್ರತಿ ೧೦,೦೦೦ ಜನಸಂಖ್ಯೆಗೆ ಇರುವ ಪೊಲೀಸರು : ೧೪.೩

ಪ್ರತಿ ೧೦೦ ಕಿ.ಮೀ.ಗಳಿಗೆ ಇರುವ ಪೊಲೀಸರ ಸಂಖ್ಯೆ : ೪೩.೪೧


Read the rest of this entry »

ಮುಂಬೈ ಸ್ಫೋಟದ ಒಳನೋಟಗಳು

- ಅರುಣ್ ಕುಮಾರ್

ಅಂದು ೨೬ ನವೆಂಬರ್, ರಾತ್ರಿ ೮.೪೫ರ ಸುಮಾರು. ಮುಂಬೈ ಕಡಲತೀರದಲ್ಲಿ ೧೦ ಯುವಕರು ಭಾರಿ ಬೆನ್ನು ಚೀಲಗಳೊಂದಿಗೆ ಹಳದಿ ಯಾಂತ್ರಿಕ ಬೋಟಿನಿಂದ ಇಳಿಯುತ್ತಾರೆ. ಇವರನ್ನು ಕಂಡ ಭರತ್ ತಾಮೋರ್ ಎಂಬ ಮೀನುಗಾರ ಕೋಲಿ ಜನಾಂಗಕ್ಕೆ ಸೇರಿದ ಯುವಕ ಹತ್ತಿರ ಹೋಗಿ ಮಾತನಾಡಿಸುತ್ತಾನೆ. ಆ ಯುವಕರ ಉತ್ತರ ಇಷ್ಟೇ, “ ಹಮ್ ಅಭಿ ಬಹುತ್ ಟೆನ್ಷನ್ ಮೇ ಹೈ, ಹಮೇ ಔರ್ ಟೆನ್ಷನ್ ನಹೀ ದೇನಾಎಂದು ಅವಸರದಲ್ಲಿ ಹೆಜ್ಜೆ ಹಾಕಿ ನಾಲ್ಕಾರು ಗುಂಪುಗಳಲ್ಲಿ ಮಾಯವಾಗುತ್ತಾರೆ. ಭರತ್ ಪ್ರಕಾರ ಅವರ ಮುಖಗಳಲ್ಲಿ ಬಹಳ ಬಿಗಿ ಇತ್ತು, ಅವರು ಒತ್ತಡದಲ್ಲಿದ್ದರು ಎಂದು. ನಂತರ ಅವನೂ ತನ್ನ ಕೆಲಸಕ್ಕಾಗಿ ರಾತ್ರಿ ೧೦ಕ್ಕೆ ತಾಜ್ ಹೋಟೆಲ್‌ಗೆ ಹೋದಾಗ ಅಲ್ಲಿ ಕಂಡದ್ದು ಉಗ್ರರದಾಳಿ. ಬಹಳ ತಡವಾಗಿ, ಅವನಿಗೆ ತಾನು ಕಂಡ ಬಿಗಿ ಮುಖದ ಯುವಕರೇ ಉಗ್ರರಾಗಿದ್ದರು ಎಂಬುದು ತಿಳಿದಿದ್ದು. ಆದರೆ ಸಮಯ ಮಿಂಚಿ ಹೋಗಿತ್ತು.

ಕಡಲ ರಕ್ಷಕರ ಅಳಲು

ಅವನ ದುಃಖವೇನೆಂದರೆ ಮುಂಬೈ ನಗರವನ್ನು ತಲ್ಲಣಗೊಳಿಸಿದ ಉಗ್ರರರನ್ನು ತಾನು ತಡೆಯಬಹುದಿತ್ತೇ ? ನಿಜಕ್ಕೂ ಅವರ ಕರಾಳ ಮುಖದ ಅರಿವು ಅವನಿಗೆ ಅಲ್ಲಿಯೇ ಆಗಿದ್ದರೆ, ಖಂಡಿತಾ ತಾನು ಪ್ರಾಣ ಬಲಿಕೊಟ್ಟಾದರೂ ಅವರನ್ನು ತಡೆಯುತ್ತಿದ್ದೆ ಎನ್ನುತ್ತಾನೆ, ಬಹಳ ನೋವಿನಿಂದ. ಈ ನೋವು ಆ ಕಡಲತೀರದಲ್ಲೇ ವಾಸ ಮಾಡುತ್ತಾ, ಒಂದು ರೀತಿಯ ಅನಧಿಕೃತವಾಗಿ, ಆದರೆ ತಲೆಮಾರುಗಳಿಂದ ಕಡಲತೀರವನ್ನು ಕಾಯ್ದುಕೊಂಡು ಬಂದಿರುವ ಕೋಲಿ ಜನಾಂಗದ ಪ್ರತಿಯೊಬ್ಬರಿಗೆ ಈ ಬಗ್ಗೆ ನೋವಿದೆ. ಎಂದಿನಂತೆ ಆ ದಿನ ಕೋಲಿ ಯುವಕರು ಹರಟೆ ಹೊಡೆಯುತ್ತಾ ಕಡಲತೀರದಬಂಡೆಯ ಮೇಲೆ ಕುಳಿತಿರಲಿಲ್ಲ. ಭಾರತ-ಇಂಗ್ಲೆಂಡ್ ಕ್ರಿಕೆಟ್ ಪಂದ್ಯ ನೋಡುತ್ತಾ ಅವರವರ ಮನೆಗಳಲ್ಲಿದ್ದರು.
Read the rest of this entry »

ಕು. ಸೀ. ಸುದರ್ಶನ್ ಅವರ ವಿಜಯದಶಮೀ ಭಾಷಣ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಶ್ರೀ ಕು. ಸೀ. ಸುದರ್ಶನ ಅವರ ವಿಜಯದಶಮೀ ಭಾಷಣದ ಕನ್ನಡಾನುವಾದ ಇಲ್ಲಿದೆ. vijayadashami-bouddhik_2008(ಪಿಡಿಎಫ್ ಸ್ವರೂಪದಲ್ಲಿದೆ.)

ಭಾರತದ ವಿಜ್ಞಾನ ಕ್ಷೇತ್ರಕ್ಕೆ ಹೊಸ ಬೆಳದಿಂದಳು

ಬುಧವಾರ ಬೆಳಗ್ಗೆ 6.20 ಇಡೀ ದೇಶವೇ ಹೆಮ್ಮೆಯಿಂದ ಬೀಗುವ ಕ್ಷಣ. ವಿಜ್ಞಾನಿಗಳಿಗೆ ಅಭೂತವೂರ್ವ ಸಾಧನೆಗೈದ ಅಪರೂಪದ ಘಳಿಗೆ, ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಐತಿಹಾಸಿಕ ಘಟನೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ(ಎಸ್ ಡಿಎಸ್ ಸಿ) ನಭೋಮಂಡಲಕ್ಕೆ ಚಂದ್ರಯಾನ-1 ನೌಕೆ ಯಶಸ್ವಿಯಾಗಿ ಉಡಾವಣೆಗೊಳ್ಳುವ ಮೂಲಕ ಬಾಹ್ಯಾಕಾಶ ಇತಿಹಾಸದಲ್ಲಿಯೇ ನೂತನ ಮೈಲಿಗಲ್ಲು ಸ್ಥಾಪಿಸಿತು. ಈ ಉಪಗ್ರಹ ಚಂದ್ರನ ಮೇಲೆ ಹೊಸ ಬೆಳಕು ಚೆಲ್ಲುವ ಮೂಲಕ ಭಾರತೀಯ ವಿಜ್ಞಾನ ಕ್ಷೇತ್ರಕ್ಕೆ ಬೆಳಗಿಂದಳಾಗಲಿದೆ. ಭಾರತೀಯ ವಿಜ್ಞಾನಿಗಳ ಸಾಧನೆಗೆ ಜಗತ್ತಿನಾದ್ಯಂತ ಪ್ರಶಂಸೆಯ ಸುರಿಮಳೆ ಎಲ್ಲಡೆ ಹರ್ಷದ ವಾತಾವರಣ ಕಂಡು ಬಂದಿತು.

ಭಾರತದ ಬಾಹ್ಯಾಕಾಶದ ಪಾಲಿಗೆ ಬುಧವಾರ ಬೆಳಗ್ಗೆ ಸುವರ್ಣ ದಿನ. ರಷ್ಯಾ, ಜಪಾನ್, ಯೊರೋಪ್ ಹಾಗೂ ಚೀನಾ ನಂತರ ಚಂದ್ರನತ್ತ ಹೊರಟಿರುವ ರಾಷ್ಟ್ರ ನಮ್ಮದೇ ಎಂಬ ದಾಖಲೆ ಸ್ಥಾಪಿಸಿರುವ ದಿನವೂ ಹೌದು. ಉಡಾವಣೆಗೆ ಕೆಲವೇ ಗಂಟೆಗಳ ಮುನ್ನ ಶ್ರೀಹರಿಕೋಟಾದಲ್ಲಿ ಸಾಕಷ್ಟು ಮಳೆ ಸುರಿಯುತ್ತಿತ್ತು. ಈ ಬಗ್ಗೆ ತಲೆಕೆಡಿಸಿಕೊಳ್ಳದ ವಿಜ್ಞಾನಿಗಳು ಚಂದ್ರಯಾನ ನೌಕೆ ಜಲ ನಿರೋಧಕ. ಎಷ್ಟೇ ಮಳೆ ಸುರಿದರೂ ಉಡಾವಣೆ ರದ್ದಾಗುವುದಿಲ್ಲ ಎಂದು ಮಂಗಳವಾರ ರಾತ್ರಿ ಸ್ಪಷ್ಟಪಡಿಸಿದ್ದರು. ಇಂದು ಬೆಳಗ್ಗೆ ಮೋಡ ಕವಿದ ವಾತಾವರಣವಿದ್ದರೂ ಲೆಕ್ಕಿಸದ ವಿಜ್ಞಾನಿಗಳು ಚಂದ್ರಯಾನ-1 ನೌಕೆಯನ್ನು ಯಶಸ್ವಿಯಾಗಿ ಹಾರಿಸಿ ಎಲ್ಲರ ಪ್ರಶಂಸೆಗೆ ಭಾಜನರಾಗಿದ್ದಾರೆ.

ಚಂದ್ರಯಾನ-1 ಉಪಗ್ರಹ ಹೊತ್ತೊಯ್ಯುವ ಪಿಎಸ್ಎಲ್ ವಿ ಸಿ-11ಗೆ ಮಂಗಳವಾರ ರಾತ್ರಿಯೇ ಇಂಧನ ತುಂಬುವುದು ಸೇರಿದಂತೆ ಸಕಲ ಕಾರ್ಯಗಳನ್ನು ಸಜ್ಜುಗೊಳಿಸಿದ್ದರು. ಉಡಾವಣೆಯಾದ 18 ನಿಮಿಷದಲ್ಲಿ ಬೆಂಗಳೂರಿನ ಪೀಣ್ಯ ಕೇಂದ್ರಕ್ಕೆ ಉಪಗ್ರಹದಿಂದ ಮೊದಲ ಸಂದೇಶ ಬಂದಿದೆ. ಬಳಿಕ ಈ ಸಂದೇಶವನ್ನು ಬೆಂಗಳೂರು ಬಳಿಯೇ ಇರುವ ಬ್ಯಾಲಾಳು ಕೇಂದ್ರಕ್ಕೆ ರವಾನಿಸಲಾಗಿದೆ. ಐದೂವರೆ ದಿನದ ಬಳಿಕ ಚಂದ್ರನ ಕಕ್ಷೆಯನ್ನು ಉಪಗ್ರಹ ತಲುಪಲಿದೆ. ಬಳಿಕ ಚಂದ್ರನ ದೃಶ್ಯವನ್ನು ಹತ್ತಿರದಿಂದ ಸೆರೆಹಿಡಿಯಲಿದೆ. ಇದೇ ವೇಳೆ ಉಪಗ್ರಹದಲ್ಲಿರುವ ‘ಮೂನ್ ಇಂಪ್ಯಾಕ್ಟ್ ಪ್ರೋಬ್’ ಎಂಬ ಸಾಧನ ಚಂದ್ರನ ಮೇಲೆ ಬೀಳುತ್ತದೆ. ಅದರಲ್ಲಿ ತ್ರಿವರ್ಣ ಧ್ವಜವೂ ಇರುತ್ತದೆ. ಎರಡು ವರ್ಷಗಳ ಕಾಲ ಉಪಗ್ರಹ ಚಂದ್ರನ ಸುತ್ತ ಸುತ್ತುತ್ತದೆ.

ಚಂದ್ರನ ಯಾತ್ರೆ ಭಾರತದ ಪಾಲಿಗೆ ಇದೇ ಮೊದಲು. ವಿಶ್ವದ ಪಾಲಿಗೆ ಇದು 68ನೇ ಯಾತ್ರೆಯಾಗಿದೆ. 1959ರ ಜ. 2 ರಂದು ರಷ್ಯಾ ಮೊದಲ ಯಾತ್ರೆ ಕೈಗೊಂಡಿತ್ತು. ಆದಾದ ನಂತರ ಎರಡು ಅವಧಿಯಲ್ಲೇ ಅಮೆರಿಕ ಚಂದ್ರಯಾತ್ರೆ ನಡೆಸಿತ್ತು. ಈ ಎರಡೂ ರಾಷ್ಟ್ರಗಳು ಇದುವರೆಗೂ ಒಟ್ಟು 62 ಚಂದ್ರಯಾನಗಳನ್ನು ನಡೆಸಿವೆ.

ಕೃಪೆ: ದಟ್ನ್ ಕನ್ನಡ