ಶಿವಮೊಗ್ಗ : ಜಿಲ್ಲೆಯ ಹೊಸಹಳ್ಳಿ ಗ್ರಾಮದಲ್ಲಿ 27/12/2020, ಭಾನುವಾರ ಸಂಜೆ 5.00 ಘಂಟೆಗೆ, ಹೊಸಹಳ್ಳಿ ಹಾಗೂ ಮತ್ತೂರು ಶಾಖೆಗಳ ಘೋಷ್ ವಾರ್ಷಿಕೋತ್ಸವ ‘ಸ್ವರ ಸಮರ್ಪಣ’ ನಡೆಯಿತು. ಅಖಿಲ ಭಾರತೀಯ ಸಹ ಶಾರೀರಿಕ ಪ್ರಮುಖರಾದ ಶ್ರೀ ಜಗದೀಶ್ ಪ್ರಸಾದ್ ರವರ ಸಮ್ಮುಖದಲ್ಲಿ 6 ರೀತಿಯ ಘೋಷ್ ಪ್ರದರ್ಶನ ನಡೆಯಿತು. ಪ್ರಖ್ಯಾತ ವಯೊಲಿನ್ ವಾದಕರಾದ ಶ್ರೀ ಹೊಸಹಳ್ಳಿ ಕೆ. ವೆಂಕಟರಾಮ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮೊದಲನೆಯದು, ಘೋಷ್ ವಾದನ ಮಾಡುತ್ತಾ ವಜ್ರಾಕೃತಿ, […]
ಬೆಂಗಳೂರು: ಸಮರ್ಥ ಭಾರತವು ಸ್ವಾಮಿ ವಿವೇಕಾನಂದರ 158ನೇ ಜನ್ಮ ವರ್ಷದ ಪ್ರಯುಕ್ತ ರಾಜ್ಯಾದ್ಯಂತ ಜನವರಿ 12 ರಿಂದ ಜ. 26 ರವರೆಗೆ ಉತ್ತಮನಾಗು- ಉಪಕಾರಿಯಾಗು’ ಎಂಬ ಅಭಿಯಾನವನ್ನು ಕೈಗೊಂಡಿದೆ. ಈ ಅಭಿಯಾನದ ಪ್ರಯುಕ್ತ ವಿವಿಧ ರೀತಿಯ ಕಾರ್ಯಕ್ರಮಗಳು, ಸ್ಪರ್ಧೆಗಳು ನಡೆಯಲಿವೆ. ಈ ಅಭಿಯಾನದ ಪ್ರಯುಕ್ತ ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದೆ. ವಿಷಯ : ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ ಆತ್ಮನಿರ್ಭರ ಭಾರತ Samartha Bharata in association […]
ಬೆಂಗಳೂರು: ಕೊರೋನಾ ನಂತರ ಇದೀಗ ಶಾಲೆ ಕಾಲೇಜುಗಳು ಪುನರಾರಂಭಗೊಳ್ಳುತ್ತಿವೆ, ಈ ಪ್ರಯುಕ್ತ ರಾಷ್ಟ್ರೋತ್ಥಾನ ಪರಿಷತ್ತಿನ ವಿಶೇಷ ಶೈಕ್ಷಣಿಕ ಯೋಜನೆ ತಪಸ್ ವಿದ್ಯಾರ್ಥಿಗಳೊಂದಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಸಂಘಚಾಲಕರಾದ ವಿ. ನಾಗರಾಜ್ ಅವರ ಸಂವಾದ ಕಾರ್ಯಕ್ರಮ ನಡೆಯಿತು. ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ನಾಗರಾಜ್ ಅವರು ಮಹಾಪುರುಷರ ಜೀವನ ಘಟನೆಗಳನ್ನು ಓದಿ, ಅದರಿಂದ ಪ್ರೇರಣೆ ಪಡೆಯಿರಿ, ದೇಶಕ್ಕೋಸ್ಕರ ಸಮಾಜಕ್ಕೋಸ್ಕರ ಬದುಕುವ; ಅದಕ್ಕೋಸ್ಕರ ತಮ್ಮ ಜೀವನದಲ್ಲಿ ಒಂದು ಮಹಾನ್ ಸಾಧನೆ ಮಾಡುವ ಸಂಕಲ್ಪವನ್ನು […]
ಲೇಖಕರು: ಡಾ.ರೋಹಿಣಾಕ್ಷ ಶಿರ್ಲಾಲು ಭೋಜನ ಮಾಡುವ ರೀತಿಯಿಂದ ಅಥವಾ ಸ್ಥಳದಿಂದ ಯಾರಾದರು ತಾವು ಜಗತ್ತಿನಲ್ಲಿ ಶ್ರೇಷ್ಟರು ಎಂದು ಭಾವಿಸುವುದಾದರೆ ಅಂಥವರ ಅಜ್ಞಾನಕ್ಕೆ ಒಮ್ಮೆ ನಕ್ಕು ಸುಮ್ಮನಾಗಿ ಬಿಡಬೇಕಷ್ಟೇ. ಆದರೆ ಅದೇ ಅಜ್ಞಾನವನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಿದಾಗ ಖಂಡಿತವಾಗಿಯೂ ಪ್ರಶ್ನಿಸಬೇಕಾಗುತ್ತದೆ. ಯಾಕೆಂದರೆ ಈ ಅಜ್ಞಾನ ಸಮಾಜದ ಆರೋಗ್ಯಕ್ಕೂ ತೊಂದರೆಯನ್ನುಂಟುಮಾಡುತ್ತದೆ. ಪ್ರತಿಯೊಬ್ಬ ವ್ಯಕ್ತಿಗೂ ತನಗೆ ಹಿತವಾಗುವ ರೀತಿಯಲ್ಲಿ, ತನ್ನ ಮನೆಯೊಳಗೆ ಬದುಕುವ ಸ್ವಾತಂತ್ರ್ಯ ಇದ್ದೇ ಇದೆ. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ನಾವು ತೋರುವ […]
ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ಕರ್ನಾಟಕದ ಶ್ರೀ ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ ಸಮಿತಿ ರಚನೆಯಾಗಿದೆ. ಚಾಮರಾಜನಗರ ಸೇವಾಭಾರತಿ ಶಾಲೆಯ ಅಧ್ಯಕ್ಷರಾದ ಶ್ರೀ ಮ. ವೆಂಕಟರಾಮು ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಉಪಾಧ್ಯಕ್ಷರಾಗಿ, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ನಿವೃತ್ತ ನಿರ್ದೇಶಕರಾದ ಶ್ರೀಮತಿ ಡಾ. ವಿಜಯಲಕ್ಷ್ಮಿ ದೇಶಮಾನೆ ಹಾಗೂ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿಗಳಾದ ಶ್ರೀಮತಿ ಮೀನಾ ಚಂದಾವರ್ಕರ್ ಇರುತ್ತಾರೆ. ವನವಾಸಿ ಕಲ್ಯಾಣ ಆಶ್ರಮ, ಕರ್ನಾಟಕದ […]
ಪುಸ್ತಕ ವಿಮರ್ಶೆ ಪರಿಚಯ: ಸತ್ಯನಾರಾಯಣ ಶಾನುಭಾಗ್ ಪೋರ್ಚುಗೀಸರಿಂದ ಆರಂಭಗೊಂಡ ಯೂರೋಪಿಯನ್ ವಸಾಹತು ಕಾಲದಲ್ಲಿ ಆಮದಾದ ಕ್ರೈಸ್ತಮತ ಪ್ರಚಾರ ವಿಷನರಿ’ರಿಗಳ ಚಟುವಟಿಕೆ ದೇಶದೆಲ್ಲೆಡೆ ತನ್ನ ಜಾಲವನ್ನು ವ್ಯವಸ್ಥಿತವಾಗಿ ಹರಡಿದೆ. ಭಾರತೀಯರನ್ನು ಕ್ರೈಸ್ತ ಮತಕ್ಕೆ ಮತಾಂತರಿಸುವುದು ಅವರ ಒಂದಂಶದ ಕಾರ್ಯಕ್ರಮವೆಂದು ಕಂಡುಬಂದರೂ ಅದರ ಮೂಲ ಉದ್ದೇಶ ಮತ್ತು ಮತಾಂತರದ ಕುಟಿಲ ಕಾರ್ಯತಂತ್ರಕ್ಕೆ ಇರುವ ಮುಖಗಳು ಅನೇಕ. ಭಾರತದಲ್ಲಿ ನಾನೂರು ವರ್ಷಗಳಿಗೂ ಮಿಕ್ಕಿ ನಡೆದಿರುವ ಕ್ರೈಸ್ತ ವಿಷನರಿ ಚಟುವಟಿಕೆಗಳ ಧೂರ್ತ ಕೆಲಸಗಳು ಮತ್ತು ಅದಕ್ಕೆ […]
Parenting lessons a plenty from Bhgavad Gita – Smitha Rao I was a mother of two little children when I turned to Gita. It was a difficult phase in my life where my conscience was put to test and demanded introspection of my actions. I had to dig deep to […]
ಬೆಂಗಳೂರು: ಪಾದರಾಯನಪುರದ 11 ಅಡ್ಡರಸ್ತೆ-ಮುಖ್ಯರಸ್ತೆಗಳಿಗೆ ಮುಸ್ಲಿಮರ ಹೆಸರುಗಳನ್ನು ಮರುನಾಮಕರಣವನ್ನು ರದ್ದುಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಬಿಬಿಎಂಪಿ ಶಿಫಾರಸ್ಸು ಮಾಡಿದೆ. ಪಾದರಾಯನಪುರದ 11 ಅಡ್ಡರಸ್ತೆ-ಮುಖ್ಯರಸ್ತೆಗಳಿಗೆ ಮುಸ್ಲಿಮರ ಹೆಸರುಗಳನ್ನು ಮರುನಾಮಕರಣ ಮಾಡುತ್ತಿರುವ ಸುದ್ದಿಯನ್ನು ಮೊದಲಬಾರಿಗೆ samvada.org ವರದಿ ಮಾಡಿತ್ತು. ಈ ವರದಿಯನ್ನು ಗಮನಿಸಿದ ವಿವಿಧ ಸಂಘಟನೆಗಳು ಹಾಗೂ ರಾಜಕೀಯ ನೇತಾರರು ಮರುನಾಮಕರಣವನ್ನು ರದ್ದುಗೊಳಿಸುವಂತೆ ಬಿಬಿಎಂಪಿಯನ್ನು ಆಗ್ರಹಿಸಿದರು. ಸಾರ್ವಜನಿಕ ಆಕ್ರೋಶಕ್ಕೆ ಮಣಿದ ಬಿಬಿಎಂಪಿ ಮರುನಾಮಕರಣವನ್ನು ಏಕಪಕ್ಷೀಯವಾಗಿ ಕೈಗೊಳ್ಳಲಾಗಿದ್ದು, ಇದನ್ನು ರದ್ದುಪಡಿಸುವಂತೆ ರಾಜ್ಯ ನಗರಾಭಿವೃದ್ದಿ ಇಲಾಖೆಯನ್ನು ಕೋರಿದೆ. […]
ಶ್ರೀನಗರ: ಜಮ್ಮುಕಾಶ್ಮೀರ ಜಿಲ್ಲಾ ಅಭಿವೃದ್ದಿ ಮಂಡಳಿಯ ನೂತನ ಸದಸ್ಯರ ಪ್ರಮಾಣವಚನ ಕಾರ್ಯಕ್ರಮದಲ್ಲಿ ನಾಲ್ವರು ಸದಸ್ಯರು ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ಅಪರೂಪದ ಘಟನೆಗೆ ಸಾಕ್ಷಿಯಾಯಿತು. ಜೊತೆಗೆ ಇದೇ ಮೊದಲ ಬಾರಿಗೆ ಚುನಾಯಿತ ಪ್ರತಿನಿಧಿಗಳು ಭಾರತದ ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಆಯಾ ಜಿಲ್ಲೆಗಳಲ್ಲಿ ನಡೆದ ಪ್ರಮಾಣವಚನ ಕಾರ್ಯಕ್ರಮದಲ್ಲಿ ಜಮ್ಮುವಿನ 140 ಹಾಗೂ ಕಾಶ್ಮೀರದ 137 ಜನಪ್ರತಿನಿಧಿಗಳು ಸೇರಿದಂತೆ ಒಟ್ಟು 277 ಮಂದಿ ಪ್ರಮಾಣವಚನ ಸ್ವೀಕರಿಸಿದರು. ಯಾವುದೇ ಪ್ರತಿನಿಧಿ ಜಮ್ಮುಕಾಶ್ಮೀರ ಸಂವಿಧಾನವನ್ನು ಉಲ್ಲೇಖಿಸಲಿಲ್ಲ. […]
ಮುಂಬೈ : ಅಧಿಕಾರಕ್ಕಾಗಿ ಶಿವಸೇನೆ ತನ್ನ ಮೂಲ ಸಿದ್ಧಾಂತ ಹಿಂದುತ್ವದಿಂದ ದೂರವಾಗುತ್ತಿದೆಯೇ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಪ್ರಾರಂಭವಾಗಿದೆ. ದಿವಂಗತ ಬಾಳಾ ಸಾಹೇಬ್ ಠಾಕ್ರೆ ಅವರು 1966ರಲ್ಲಿ ಪ್ರಾರಂಭಿಸಿದ ಶಿವಸೇನೆ ಪ್ರಖರ ಹಿಂದುತ್ವವಾದಿ ಪಕ್ಷ ಎಂದೇ ದೇಶದೆಲ್ಲೆಡೆ ಪ್ರಚಲಿತವಾಗಿತ್ತು. ಆದರೆ ಬಾಳಾ ಸಾಹೇಬ್ ಠಾಕ್ರೆ ಅವರ ನಿಧನದ ನಂತರ ಪಕ್ಷದ ಚುಕ್ಕಾಣಿ ಹಿಡಿದ ಉದ್ಧವ್ ಠಾಕ್ರೆ ಅಧಿಕಾರಕ್ಕಾಗಿ ಹಿಂದುತ್ವದಿಂದಲೇ ದೂರವಾಗುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಚುನಾವಣಾ ಪೂರ್ವದಲ್ಲಿ ಬಿಜೆಪಿ ಜೊತೆ […]