ಕೇರಳದ ಸಾಸ್ತಾಂಕೋಟದಲ್ಲಿ ೧೯೬೫ರಲ್ಲಿ ಜನಿಸಿದ ಅಬ್ದುಲ್ ನಾಸಿರ್ ಮದನಿ, ಮುಸಲ್ಮಾನ್ ಮತಾಂಧತೆಯ ಜಾಲದೊಳಗೆ ಸಿಲುಕಿ ಹಿಂದೂ ಸಂಘಟನೆಗಳ ವಿರೋಧಿಯಾಗಿ ಗುರುತಿಸಿದಾತ. ಅನೇಕ ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿರುವ ಈತ ಪಾಕಿಸ್ತಾನದ ಭಯೋತ್ಪಾದನಾ ಸಂಘಟನೆ ಲಷ್ಕರ್-ಇ-ತೊಯ್ಬಾ ಜತೆ ನಂಟು ಬೆಳೆಸಿ ಭಾರತದಲ್ಲಿ ಭಯೋತ್ಪಾದನಾ ಜಾಲ ಹರಡುವ ತಂತ್ರ ಹೆಣೆದವನು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧ ಇಸ್ಲಾಮಿಕ್ ಸೇವಕ್ ಸಂಘ ಪ್ರಾರಂಭ ಮಾಡಿದರೂ ೧೯೯೩ರಲ್ಲಿ ಅದನ್ನು ನಿಷೇಧಿಸಲಾಯಿತು. ಆತ ನಡೆಸಿದ ೧೯೯೮ರ ಕೊಯಮತ್ತೂರು […]

ಮಾನ್ಯ ಚಿದಂಬರಂ ಅವರೆ, ನಿಮ್ಮ  ಅದ್ಭುತ ಶೋಧಕ್ಕೆ ನೊಬೆಲ್ ಪ್ರಶಸ್ತಿಯೇ ದೊರೆಯಬೇಕು. ರಾಷ್ಟ್ರದಲ್ಲಿ ಬೆಟ್ಟದಷ್ಟು  ಸಮಸ್ಯೆಗಳಿಂದ ಜನ ಬಸವಳಿದಿರುವಾಗ ಭಯೋತ್ಪಾದನೆಯ ಹೊಸ ಬಗೆಯನ್ನು  ಕಂಡುಹಿಡಿದು ಅದಕ್ಕೆ ಕೇಸರಿ ಭಯೋತ್ಪಾದನೆ ಎಂಬ ಕ್ರಿಯೇಟಿವ್ ಹೆಸರನ್ನು ನೀಡಿ ಮಹದುಪಕಾರವನ್ನೇ ಮಾಡಿದ್ದೀರಿ! ಬುದ್ಧಿಗೆ ಖಗ್ರಾಸ ಗ್ರಹಣ ಹಿಡಿದು ವ್ಯಕ್ತಿ ಅದೆಷ್ಟು ವಿವೇಕರಹಿತವಾಗಿ, ಸ್ವಾಭಿಮಾನಶೂನ್ಯನಾಗಿ ನಡೆದುಕೊಳ್ಳುತ್ತಾನೆ ಎಂಬುದಕ್ಕೆ ಜ್ವಲಂತ ಸಾಕ್ಷಿಯಾಗಿದ್ದೀರಿ.

ಬಹುಮಂದಿಗೆ ಆರ್.ಎಸ್.ಎಸ್ (ಆರೆಸ್ಸೆಸ್) ಎಂಬ ಹೆಸರಿನಿಂದಲೇ ಪರಿಚಿತವಾಗಿರುವ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘ. ೧೯೨೫ರ ಸೆಪ್ಟೆಂಬರ್ ೨೫ರ ವಿಜಯದಶಮಿಯಂದು ಮಹಾರಾಷ್ಟ್ರದ ನಾಗಪುರದಲ್ಲಿನ ಮೊಹಿತೇವಾಡ ಎಂಬಲ್ಲಿ ಸಂಘದ ಶುಭಾರಂಭವಾಯಿತು. ಹೆಸರಿನಲ್ಲೇ ಉಲ್ಲೇಖವಾಗಿರುವಂತೆ ರಾಷ್ಟ್ರಸೇವೆಯನ್ನು ನಿಸ್ವಾರ್ಥ ಭಾವನೆಯಲ್ಲಿ ಮಾಡಲು ಸ್ವಯಂಪ್ರೇರಣೆಯಿಂದ ತೊಡಗಿರುವವರು-ಅಂದರೆ ಸ್ವಯಂಸೇವಕರು, ಅವರೆಲ್ಲರ ಸಂಘಟನೆಯಿದು. ಸಂಘದ ಸಂಸ್ಥಾಪಕರು ಡಾ|| ಹೆಡಗೇವಾರ್ ಸ್ವಾತಂತ್ರ್ಯ ಆಂದೋಲನದಲ್ಲೂ ಭಾಗವಹಿಸಿದವರು. ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿ ಸಾಂಸ್ಕೃತಿಕ-ಐತಿಹಾಸಿಕ ನೆಲೆಗಟ್ಟಿನಲ್ಲಿ ರೂಪಿಸಿ, ರಾಷ್ಟ್ರದ ಉನ್ನತಿಗಾಗಿ ಎಲ್ಲ ಕ್ಷೇತ್ರಗಳಲ್ಲೂ ಶ್ರಮಿಸುವ ನಿಸ್ವಾರ್ಥ-ಸಮರ್ಪಿತ […]

೬೦ ವರ್ಷದ ಸಾಧನೆಯ ಹಾದಿಯಲ್ಲಿ ಅಭಾವಿಪ ೧೯೪೮ ರಲ್ಲಿಯೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ ದೂರಗಾಮಿ ಚಿಂತನೆಯ ಫಲವಾಗಿ ನಾಲ್ಕಾರು ಮಂದಿ ಕಾರ‍್ಯಕರ್ತರ ಪ್ರಯತ್ನದೊಂದಿಗೆ ತನ್ನ ಅನೌಪಚಾರಿಕ ಉಗಮವನ್ನು ಕಂಡುಕೊಂಡ ವಿದ್ಯಾರ್ಥಿ ಪರಿಷತ್ (ಂಃಗಿP) ೧೯೪೯ ಜುಲೈ ೯ ರಂದು (S-೩೮೫/೧೯೪೯-೫೦) ನೋಂದಾಯಿ ಸಲ್ಪಟ್ಟಿತು. ಆರಂಭದಲ್ಲಿ ನಾಲ್ಕಾರು ರಾಜ್ಯಗಳಲ್ಲಿ ಸಾಂಕೇತಿಕವಾಗಿ ಎಂಬಂತೆ ತನ್ನ ಅಸ್ತಿತ್ವವನ್ನು ಹೊಂದಿದ್ದ ವಿದ್ಯಾರ್ಥಿ ಪರಿಷತ್, ಸ್ಥಾಪನೆಯ ೬೦ ವರ್ಷಗಳ ಬಳಿಕ ಇಂದು ದೇಶದ ಉದ್ದಗಲಕ್ಕೂ ವ್ಯಾಪಿಸಿ […]

ರೈತರಿಂದ, ರೈತರಿಗಾಗಿ… -‘ಭಾರತೀಯ ಕಿಸಾನ್ ಸಂಘ’ ನಮ್ಮದು ಕೃಷಿ ಪ್ರಧಾನ ದೇಶ. ರೈತ ದೇಶದ ಬೆನ್ನೆಲುಬು. ‘ರೈತರ ಏಳಿಗೆಯೇ ದೇಶದ ಏಳಿಗೆ’ ಎಂಬ ಧ್ಯೇಯವಾಕ್ಯವನ್ನು ಇಟ್ಟುಕೊಂಡು, ರೈತರ ಹಿತವನ್ನು ಸಾಧಿಸುವ ಜೊತೆಯಲ್ಲಿಯೇ ರಾಷ್ಟ್ರದ ಸಂಪೂರ್ಣ ಹಿತವನ್ನು ಸಾಧಿಸಬೇಕೆಂಬ ಛಲದೊಂದಿಗೆ ರೈತರಿಂದ ರೈತರಿಗಾಗಿಯೇ ರೈತರೇ ಸಂಘಟಿಸಿ ಈಗ ಹೆಮ್ಮರವಾಗಿ ಬೆಳೆದು ನಿಂತಿರುವ ಸಾಮಾಜಿಕ ಚಳವಳಿಯ ಸಂಘಟನೆ ಭಾರತೀಯ ಕಿಸಾನ್ ಸಂಘ.        ೧೯೭೯ ಮಾರ್ಚ್ ೪ರಂದು ರಾಜಸ್ಥಾನ ಪ್ರಾಂತದ ಕೋಟದಲ್ಲಿ ಭಾ.ಕಿ.ಸಂಘ […]